ETV Bharat / bharat

2022ರಲ್ಲಿ ವಿಶ್ವಕ್ಕೆ ಕಾದಿದೆ ಮತ್ತೊಂದು ಸಾಂಕ್ರಾಮಿಕ ರೋಗ : ದಿವ್ಯಾಂಗ ಚೇತನ ಬಾಬಾ ವಂಗಾ ಭವಿಷ್ಯ

author img

By

Published : Dec 28, 2021, 3:24 PM IST

Updated : Dec 28, 2021, 4:01 PM IST

Baba Vanga blind mystic predicts new pandemic in 2022 : ಮುಂದಿನ ವರ್ಷ ಭಾರತದಲ್ಲಿ 50 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ. ಮಿಡತೆಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡಿ ಆಹಾರದ ಹಾಹಾಕಾರ ಸೃಷ್ಟಿಸಲಿವೆ. ಇದರಿಂದ ದೇಶದಲ್ಲಿ ಕ್ಷಾಮ ಆವರಿಸಲಿದೆ ಎಂಬುದು ಬಾಬಾ ವಂಗಾ ಅವರ ಭವಿಷ್ಯವಾಣಿ ಆಗಿದೆ..

baba vanga
ಬಾಬಾ ವಂಗಾ ಭವಿಷ್ಯ

ಹೈದರಾಬಾದ್ : ಬಲ್ಗೇರಿಯಾದ ಕುರುಡು ಭವಿಷ್ಯಗಾರ್ತಿ 'ಬಾಬಾ ವಂಗಾ' ತಾವು ಸಾಯುವ ಮುನ್ನ 5076 ನೇ ಇಸವಿಯವರೆಗೆ ಭವಿಷ್ಯವನ್ನು ಬರೆದಿಟ್ಟಿದ್ದು, 2022ರ ವರ್ಷವೂ ಕೂಡ ಹಲವಾರು ಸಂಕಷ್ಟಗಳ ವರ್ಷವಾಗಿರಲಿದೆ ಎಂದು ಉಲ್ಲೇಖಿಸಿದ್ದಾರೆ ಅಂತೆ.

ಇದರಂತೆ, ಏಲಿಯನ್​ಗಳು 'ಔಮುಮುವಾ' ಎಂಬ ಕ್ಷುದ್ರಗ್ರಹವನ್ನು ಭೂಮಿಗೆ ಅಪ್ಪಳಿಸುವಂತೆ ಮಾಡಲಿವೆ. ಮತ್ತೊಂದು ಸಾಂಕ್ರಾಮಿಕ ರೋಗ ಸೈಬೀರಿಯಾದಲ್ಲಿ ಕಾಣಿಸಿಕೊಳ್ಳಲಿದೆ. ಇದು ಕೂಡ ವೈರಸ್​ನಿಂದಲೇ ಹಬ್ಬುವ ರೋಗವಾಗಿದ್ದು ವಿಶಕ್ಕೇ ವ್ಯಾಪಿಸಲಿದೆ. ಹವಾಮಾನ ಬದಲಾವಣೆಯಿಂದ ಈ ಸೋಂಕು ಜನರನ್ನು ಕಾಡಲಿದೆ ಎಂದು ಭವಿಷ್ಯ ಬರೆದಿಟ್ಟಿದ್ದಾರಂತೆ.

ಆಸ್ಟ್ರೇಲಿಯಾ, ಏಷ್ಯಾದ ಹಲವು ದೇಶಗಳಲ್ಲಿ ಪ್ರವಾಹ ಉಂಟಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವುದಲ್ಲದೇ, ಹಲವಾರು ಜನರು ಸಾವಿಗೀಡಾಗಲಿದ್ದಾರೆ. ಜನಸಂಖ್ಯಾ ಹೆಚ್ಚಳದಿಂದ ಭವಿಷ್ಯದಲ್ಲಿ ನೀರಿನ ಕೊರತೆಯೂ ಉಲ್ಬಣಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಭಾರತದ ಬಗ್ಗೆ ವಂಗಾರ ಭವಿಷ್ಯವೇನಾಗಿತ್ತು?

ಭಾರತವೂ ಕೂಡ ಹಲವಾರು ತೊಂದರೆಗೆ ಸಿಲುಕಿಕೊಳ್ಳಲಿದೆ. ದೇಶದಲ್ಲಿ 50 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಲಿದೆ. ಮಿಡತೆಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡಿ ಆಹಾರದ ಹಾಹಾಕಾರ ಸೃಷ್ಟಿಸಲಿವೆ. ಇದರಿಂದ ದೇಶದಲ್ಲಿ ಕ್ಷಾಮ ಆವರಿಸಲಿದೆ ಎಂಬುದು ಬಾಬಾ ವಂಗಾರ ಭವಿಷ್ಯವಾಗಿದೆ.

ಬಾಬಾ ವಂಗಾರ ಅಮೆರಿಕಾದ ಮೇಲೆ 9/11 ದಾಳಿ, ಚರ್ನೋಬಿಲ್​ ದುರಂತ, ಇಂಗ್ಲೆಂಡ್​ ರಾಜಕುಮಾರಿ ಡಯಾನಾ ಸಾವು, ಸೋವಿಯತ್​ ರಷ್ಯಾ ವಿಸರ್ಜನೆ ಬಗ್ಗೆ ನುಡಿದ ಭವಿಷ್ಯ ತಾಳೆಯಾಗಿದ್ದರೆ, ಅಮೆರಿಕಾಕ್ಕೆ ಬರಾಕ್​ ಒಬಾಮಾ ಅವರೇ ಕೊನೆಯ ಅಧ್ಯಕ್ಷರಾಗಲಿದ್ದಾರೆ. 2010ರಲ್ಲಿ ಮೂರನೇ ಮಹಾಯುದ್ಧ ನಡೆಯುತ್ತದೆ ಎಂದು ಹೇಳಿದ್ದು ಸುಳ್ಳಾಗಿತ್ತು.

ಬಾಬಾ ವಂಗಾ ಅವರು ತಮ್ಮ 12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡಿದ್ದರು. ಬಳಿಕ ಅತೀಂದ್ರಿಯ ಅಸಾಮಾನ್ಯ ಶಕ್ತಿಗಳನ್ನು ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದರು. ಬಾಬಾ ವಂಗಾ ಅವರು 1996 ರಲ್ಲಿ ಸಾವನ್ನಪ್ಪಿದ್ದು, 5076 ಇಸವಿಯವರೆಗೆ ಭವಿಷ್ಯವನ್ನು ಬರೆದಿಟ್ಟಿದ್ದಾರೆ.

ಇದನ್ನೂ ಓದಿ: ಗಾಂಧೀಜಿ ನಿಂದಿಸಿ ಗೋಡ್ಸೆ ಹೊಗಳಿದ್ದ ಹಿಂದೂ ಗುರು ಕಾಳಿಚರಣ್‌ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲು

Last Updated : Dec 28, 2021, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.