ETV Bharat / bharat

ಅಸ್ಟ್ರಾಜೆನಿಕಾ ವ್ಯಾಕ್ಸಿನ್ ಪಡೆದವರಿಗೆ ನರ ಸಂಬಂಧಿ ಕಾಯಿಲೆ: ವರದಿಯಿಂದ ಬಹಿರಂಗ

author img

By

Published : Jun 22, 2021, 4:08 PM IST

ಕಳೆದ 10 ರಿಂದ 22 ದಿನಗಳ ಹಿಂದೆ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಈ ರೋಗ ಕಂಡು ಬರುತ್ತಿದೆ. ಕೇರಳದಲ್ಲಿ ಇಂಥ ಏಳು ಪ್ರಕರಣಗಳು ವರದಿಯಾಗಿವೆ. ಏಪ್ರಿಲ್​ 22 ರವರೆಗೆ ಸುಮಾರು 1.2 ಮಿಲಿಯನ್ ಜನರಿಗೆ ಅಸ್ಟ್ರಾಜೆನಿಕಾ ಲಸಿಕೆ ನೀಡಲಾಗಿದೆ.

India, England
India, England

ನವದೆಹಲಿ: ಅಸ್ಟ್ರಾಜೆನಿಕಾ-ಆಕ್ಸ್‌ಫರ್ಡ್ ಕೋವಿಡ್ ಲಸಿಕೆ ಪಡೆದ ಹನ್ನೊಂದು ಜನರಲ್ಲಿ ಗುಯಿಲಿನ್ ಬ್ಯಾರೆ ಸಿಂಡ್ರೋಮ್​ ಎಂಬ ನರಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ. ಭಾರತ ಮತ್ತು ಇಂಗ್ಲೆಂಡ್​ನ ವೈದ್ಯರು ಎರಡು ಪ್ರತ್ಯೇಕ ಅಧ್ಯಯನ ನಡೆಸಿ ಈ ಅಂಶ ಪತ್ತೆ ಹಚ್ಚಿದ್ದಾರೆ.

ಕಳೆದ 10 ರಿಂದ 22 ದಿನಗಳ ಹಿಂದೆ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ಈ ರೋಗ ಕಂಡು ಬರುತ್ತಿದೆ. ಕೇರಳದಲ್ಲಿ ಇಂಥ ಏಳು ಪ್ರಕರಣಗಳು ವರದಿಯಾಗಿವೆ. ಏಪ್ರಿಲ್​ 22 ರವರೆಗೆ ಸುಮಾರು 1.2 ಮಿಲಿಯನ್ ಜನರಿಗೆ ಅಸ್ಟ್ರಾಜೆನಿಕಾ ಲಸಿಕೆ ನೀಡಲಾಗಿದೆ. ವ್ಯಾಕ್ಸಿನೇಷನ್​​​​ ಡ್ರೈವ್ ನಡೆದ ಎರಡು ವಾರಗಳಲ್ಲಿ ಈ ಪ್ರಕರಣಗಳು ಕಂಡು ಬಂದಿವೆ. ಕೇರಳದ ಏಳು ರೋಗಿಗಳ ಪೈಕಿ ಆರು ಜನರಿಗೆ ಮೆಕ್ಯಾನಿಕಲ್ ವೆಂಟಿಲೇಟರ್ ಅವಶ್ಯಕವಿದೆ ಎಂದು ಕೊಚ್ಚಿಯ ನರ ವಿಜ್ಞಾನ ವಿಭಾಗದ ಆಸ್ಟರ್​ ಮೆಡ್ಸಿಟಿಯ ಬಾಬಿ ವರ್ಕಿ ಮರಮತ್ತಮ್ ಹೇಳಿದ್ದಾರೆ.

ಇದನ್ನೂ ಓದಿ:ಅರ್ಧಗಂಟೆಯಲ್ಲಿ ವ್ಯಕ್ತಿಗೆ ಎರಡು ಸಲ ವ್ಯಾಕ್ಸಿನ್​ ನೀಡಿದ ದಾದಿ

ಇಂಗ್ಲೆಂಡ್‌ನ ನಾಟಿಂಗ್ಹ್ಯಾಮ್‌ನಿಂದ ನಾಲ್ಕು ಪ್ರಕರಣಗಳು ವರದಿಯಾಗಿವೆ. ಇಲ್ಲಿ ಒಂದೇ ದಿನ ಏಳು ಲಕ್ಷ ಜನರು ಲಸಿಕೆ ಪಡೆದಿದ್ದರು. ಈ ಅಪರೂಪದ ನರ ವೈಜ್ಞಾನಿಕ ಸಿಂಡ್ರೋಮ್ ಈ ಹಿಂದೆ SARS-CoV-2 ಸೋಂಕಿನೊಂದಿಗೆ ವರದಿಯಾಗಿದೆ.ಈ ಸೋಂಕು ಕಂಡು ಬಂದವರಿಗೆ ಯಾವುದೇ ಚಿಕಿತ್ಸೆ ನೀಡಲಾಗಿಲ್ಲ ಎಂದು ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಆಸ್ಪತ್ರೆಗಳ ಎನ್ಎಚ್ಎಸ್ ಟ್ರಸ್ಟ್​​ನ ನರವಿಜ್ಞಾನ ವಿಭಾಗದ ಜೊನಾಥನ್ ರೈಸ್ ಇವಾನ್ಸ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.