ETV Bharat / bharat

6 ರೂಪಾಯಿ ಕೇಳಿ ₹18 ಸಾವಿರ ಎಗರಿಸಿದ ಖದೀಮ! ಆನ್​ಲೈನ್​ ಮೂಲಕ ಮಹಿಳೆಗೆ ಮೋಸ

author img

By

Published : Jan 1, 2023, 10:19 AM IST

ಆನ್‌ಲೈನ್‌ ವ್ಯವಹಾರವನ್ನು ಜನರು ಕಟ್ಟೆಚ್ಚರದಿಂದ ನಿರ್ವಹಿಸಬೇಕು. ಇಲ್ಲದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಪಾರ್ಸೆಲ್​ ನೆಪದಲ್ಲಿ ಕರೆ ಮಾಡಿದ ಅಪರಿಚಿತರು ಉತ್ತರ ಪ್ರದೇಶದ ಮಹಿಳೆಗೆ ವಂಚನೆ ಮಾಡಿದ್ದಾರೆ.

UP woman duped
ಮಹಿಳೆಗೆ ಆನ್​ಲೈನ್​ ವಂಚನೆ

ಲಕ್ನೋ(ಉತ್ತರ ಪ್ರದೇಶ): ಪಾರ್ಸೆಲ್​ ಕೊಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಗೆ ಆನ್​ಲೈನ್​ ವಂಚನೆ ಮಾಡಿರುವ ಘಟನೆ ಲಕ್ನೋದ ನಾಕಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊರಿಯರ್​ ಕಂಪೆನಿ ಉದ್ಯೋಗಿ ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬ ನಾಕಾದ ಗಣೇಜ್​ಗಂಜ್​ ನಿವಾಸಿ ಅದಿತಿ ಪಟೇಲ್​ ಎಂಬವರಿಗೆ ಕರೆ ಮಾಡಿದ್ದಾನೆ. ಬಳಿಕ ಪಾರ್ಸೆಲ್​ನಲ್ಲಿ ನಿಮ್ಮ ವಿಳಾಸ ತಪ್ಪಾಗಿದೆ. ನಾವು ಕಳುಹಿಸುವ ಲಿಂಕ್​ಗೆ 6 ರೂಪಾಯಿ ಪಾವತಿ ಮಾಡುವಂತೆ ಸೂಚಿಸಿದ್ದಾನೆ. ಅದರಂತೆ ಮಹಿಳೆ ಲಿಂಕ್​ ಓಪನ್​ ಮಾಡಿದಾಗ ಆಕೆಯ ಖಾತೆಯಿಂದ ಮೊದಲಿಗೆ 18 ಸಾವಿರ ಬಳಿಕ 800 ರೂಪಾಯಿ ಕಡಿತವಾಗಿದೆ. ಮೋಸಹೋದ ಮಹಿಳೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

'ಅಪರಿಚಿತನ ವಿರುದ್ಧ ವಂಚನೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ. ತನಿಖೆಯ ವೇಳೆ ಇದರಲ್ಲಿ ನೈಜೀರಿಯನ್​ ಗ್ಯಾಂಗ್​ ಕೈವಾಡದ ಶಂಕೆ ಮೂಡಿದೆ' ಎಂದು ನಾಕಾದ ಎಸ್‌ಎಚ್‌ಒ ಬ್ರಿಜೇಶ್ ದ್ವಿವೇದಿ ತಿಳಿಸಿದರು.

ಇದನ್ನೂ ಓದಿ: ಪೊಲೀಸ್ ಕ್ವಾರ್ಟರ್ಸ್​​ನಲ್ಲಿ 40 ತೊಲೆ ಚಿನ್ನಾಭರಣ, ಲಕ್ಷಾಂತರ ನಗದು ಕಳವು: ಪರಿಹಾರಕ್ಕಾಗಿ ಬಾಬಾನ ಮೊರೆ ಹೋದ ಎಎಸ್‌ಐ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.