ETV Bharat / bharat

ಭಾರತ ವಿರುದ್ಧದ ಗೆಲುವು ಇಸ್ಲಾಂಗೆ ಸಂದ ಜಯ ಎಂದ ಪಾಕ್​ ಸಚಿವ... ತಿರುಗೇಟು ನೀಡಿದ ಓವೈಸಿ

author img

By

Published : Oct 28, 2021, 2:32 AM IST

ಟಿ-20 ವಿಶ್ವಕಪ್​ನಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡ ಪಾಕ್​ ವಿರುದ್ಧ ಟೀಂ ಇಂಡಿಯಾ ಸೋಲು ಕಾಣುತ್ತಿದ್ದಂತೆ ಅದು ರಾಜಕೀಯ ಬಣ್ಣ ಪಡೆದುಕೊಂಡಿದ್ದು,ಕೇಸರೆರಚಾಟ ಮುಂದುವರೆದಿದೆ.

Asaduddin Owaisi
Asaduddin Owaisi

ಮುಜಾಫರ್​ನಗರ(ಉತ್ತರ ಪ್ರದೇಶ): ಐಸಿಸಿ ಟಿ-20 ವಿಶ್ವಕಪ್​​​ನಲ್ಲಿ ಭಾರತದ ವಿರುದ್ಧ ಪಾಕ್​ ಗೆಲುವು ದಾಖಲು ಮಾಡಿದ್ದಕ್ಕಾಗಿ ಇದು ಪಾಕಿಸ್ತಾನದ ಗೆಲುವಲ್ಲ, ಇಸ್ಲಾಮಿನ ಗೆಲುವು ಎಂದು ಪಾಕ್​ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿಕೆ ನೀಡಿದ್ದರು. ಇದಕ್ಕೆ ಅಸಾದುದ್ದೀನ್​ ಓವೈಸಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನದ ಗೆಲುವು ಇಸ್ಲಾಮಿನ ಗೆಲುವು ಎಂದು ನೇರೆಯ ದೇಶದ ಸಚಿವರು ಹೇಳಿಕೆ ನೀಡಿದ್ದಾರೆ. ಇಸ್ಲಾಂ ಧರ್ಮಕ್ಕೂ ಕ್ರಿಕೆಟ್​​​ ಪಂದ್ಯಗಳಿಗೂ ಏನು ಸಂಬಂಧ? ಎಂದು ಪ್ರಶ್ನೆ ಮಾಡಿರುವ ಓವೈಸಿ, ಭಾರತದ ವಿಚಾರದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಕ್​ ಸಚಿವರಿಗೆ ತಿರುಗೇಟು ನೀಡಿದ ಓವೈಸಿ

ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ಮಾತನಾಡಿದ ಓವೈಸಿ, ರಾಜ್ಯ ರಾಜಕೀಯದಲ್ಲಿ ಮುಸ್ಲಿಮರ ಪ್ರಭಾವ ಕ್ಷೀಣಿಸಲು ಕಾಂಗ್ರೆಸ್​, ಎಸ್​ಪಿ, ಬಿಎಸ್​​ಪಿ ,ತ್ತು ಆರ್​ಎಲ್​ಡಿ ನೇರ ಕಾರಣವಾಗಿವೆ.ರಾಜ್ಯದಲ್ಲಿ ಸಮಾಜವಾದಿ ಸರ್ಕಾರದ ಅವಧಿಯಲ್ಲಿ 70 ಮುಸ್ಲಿಂ ಶಾಸಕರು ವಿಧಾನಸಭೆಯಲ್ಲಿದ್ದರು. ಮುಜಾಫರ್​ನಗರ ಗಲಭೆ ವೇಳೆ ಎಲ್ಲರೂ ಮೌನವಹಿಸಿದ್ದರು. 2022ರ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ತಮ್ಮ ಮತ ವಿಭಜನೆಯಾಗಲು ಬಿಡಬೇಡಿ ಎಂದರು.

ಇದನ್ನೂ ಓದಿರಿ: ಪಾಕ್​ ಗೆಲುವಿಗೆ ಸಂಭ್ರಮ: ಶಿಕ್ಷಕಿ ಸೇರಿ ಮೂವರು ಎಂಜಿನಿಯರಿಂಗ್​ ವಿದ್ಯಾರ್ಥಿಗಳ ಬಂಧನ

ಇದೇ ವೇಳೆ ಎನ್​​ಆರ್​ಸಿ ಮತ್ತು ಸಿಎಎ ವಿರುದ್ಧ ಮುಸ್ಲಿಮರು ನಡೆಸುತ್ತಿರುವ ಪ್ರತಿಭಟನೆ ಒಳ್ಳೆಯದು ಎಂದಿರುವ ಅವರು, ಈ ಕಪ್ಪು ಕಾನೂನುಗಳ ಪ್ರತಿಗಳನ್ನ ಸಂಸತ್ತಿನಲ್ಲಿ ನಾನೇ ಹರಿದು ಹಾಕಿದ್ದೇನೆ ಎಂದರು. ಮುಂದಿನ ವರ್ಷ ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲ ಪಕ್ಷಗಳು ಭರದ ತಯಾರಿಯಲ್ಲಿ ಮಗ್ನವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.