ETV Bharat / bharat

ಕೇರಳದಲ್ಲಿ ಕಾಂಗ್ರೆಸ್‌ಗೆ ಮತ್ತೆ ಹೊಡೆತ: ಮಾಜಿ ಜಿಲ್ಲಾಧ್ಯಕ್ಷ ಬಾಲಚಂದ್ರನ್ ರಾಜೀನಾಮೆ

author img

By

Published : Oct 6, 2021, 12:01 PM IST

ಕಾರ್ಯಕರ್ತರ ಹಿತಾಸಕ್ತಿಗೆ ಅನುಗುಣವಾಗಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗೊತ್ತಾಗುತ್ತಿದೆ. ಆದ್ದರಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಬಾಲಚಂದ್ರನ್ ಹೇಳಿದ್ದಾರೆ.

Another setback for Congress in Kerala, former DCC President PV Balachandran resigns
ಕೇರಳ ಕಾಂಗ್ರೆಸ್​​ನಲ್ಲಿ ಮತ್ತೆ ಅಸಮಾಧಾನ: ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಬಾಲಚಂದ್ರನ್ ರಾಜೀನಾಮೆ

ವಯನಾಡು(ಕೇರಳ): ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಆರಂಭವಾಗಿದೆ. ಇತ್ತೀಚೆಗೆ ಅಸಮಾಧಾನ ಕಾಣಿಸಿಕೊಂಡಿದ್ದ ಕೇರಳ ಕಾಂಗ್ರೆಸ್​​ನಲ್ಲಿ ಹೊಸ ಬೆಳವಣಿಗೆ ಕಾಣಿಸಿಕೊಂಡಿದೆ. ವಯನಾಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಪಿ.ವಿ.ಬಾಲಚಂದ್ರನ್ ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಪಿ.ವಿ.ಬಾಲಚಂದ್ರನ್ ಅವರು ಸುಮಾರು 52 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು, ಮಂಗಳವಾರಕ್ಕೆ ಪಕ್ಷದೊಂದಿಗಿನ ಅವರ ಒಡನಾಟ ಕೊನೆಗೊಂಡಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯರಾಗಿದ್ದ ಅವರು ಕಾಂಗ್ರೆಸ್ ಪಕ್ಷ ತನ್ನ ದಿಕ್ಕನ್ನು ಬದಲಾಯಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷಕ್ಕೆ ರಾಜೀನಾಮೆ ನೀಡುವ ವೇಳೆ ಪ್ರತಿಕ್ರಿಯೆ ನೀಡಿದ ಅವರು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್‌ನಿಂದ ದೂರವಾಗುತ್ತಿವೆ ಮತ್ತು ಜನರು ತನ್ನ ದಿಕ್ಕನ್ನು ಬದಲಾಯಿಸಿದ ಪಕ್ಷದೊಂದಿಗೆ ಇರುವುದಿಲ್ಲ. ಬಿಜೆಪಿಯ ಬೆಳವಣಿಗೆಯನ್ನು ತಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್​ನಲ್ಲಿರುವ ನಾಯಕತ್ವವು ಜನರ ಸಮಸ್ಯೆಗಳ ಬಗ್ಗೆ ನಿಲುವು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಪಕ್ಷದ ಕಾರ್ಯಕರ್ತರ ಹಿತಾಸಕ್ತಿಗೆ ಅನುಗುಣವಾಗಿ ಪಕ್ಷವು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗೊತ್ತಾಗುತ್ತಿದೆ. ಆದ್ದರಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಬಾಲಚಂದ್ರನ್ ಹೇಳಿದರು.

ಇಷ್ಟೇ ಅಲ್ಲದೇ ಮಂಗಳವಾರ ಬೆಳಗ್ಗೆ ತಿರುವನಂತಪುರಂ ಜಿಲ್ಲಾ ಕಾಂಗ್ರೆಸ್​​ ಕಾರ್ಯದರ್ಶಿಯಾದ ರಶ್ಮಿ ಎಂಬುವವರು ಪಕ್ಷನನ್ನು ತೊರೆದು ಭಾರತೀಯ ಕಮ್ಯುನಿಸ್ಟ್ ಪಕ್ಷಕ್ಕೆ (ಸಿಪಿಐ) ಸೇರ್ಪಡೆಯಾದರು. ಸೆಪ್ಟೆಂಬರ್‌ನಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಕೆ.ಪಿ.ಅನಿಲ್ ಕುಮಾರ್ ಕಾಂಗ್ರೆಸ್ ತೊರೆದು ಸಿಪಿಐಗೆ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: ಇಬ್ಬರು ಸಿಎಂಗಳ ಜೊತೆ ಲಖಿಂಪುರಕ್ಕೆ ಭೇಟಿಕೊಡಲು ಪ್ರಯತ್ನಿಸುತ್ತೇವೆ: ರಾಹುಲ್ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.