ETV Bharat / bharat

ಹೈದರಾಬಾದ್‌ ಅಪ್ರಾಪ್ತೆ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

author img

By

Published : Jun 5, 2022, 5:09 PM IST

ಈ ಅಪ್ರಾಪ್ತ ಬಾಲಕಿ ಮೇ 31ರಂದು ನಾಪತ್ತೆಯಾಗಿದ್ದಳು. ನಂತರ ಆಕೆಯ ಸಂಬಂಧಿಕರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363ರಡಿ ಪ್ರಕರಣ ದಾಖಲಿಸಲಾಗಿತ್ತು..

ಹೈದರಾಬಾದ್‌ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ
ಹೈದರಾಬಾದ್‌ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ

ಹೈದರಾಬಾದ್(ತೆಲಂಗಾಣ) : ನಗರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 28ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಹೇಳಲಾದ ಕೆಲವು ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಈ ಅಪ್ರಾಪ್ತ ಬಾಲಕಿ ಮೇ 31ರಂದು ನಾಪತ್ತೆಯಾಗಿದ್ದಳು. ನಂತರ ಆಕೆಯ ಸಂಬಂಧಿಕರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಪೊಲೀಸ್ ತಂಡ ಆಕೆಯನ್ನು ಪತ್ತೆ ಮಾಡಿದೆ.

ಆರೋಪಿಗಳನ್ನು ಕ್ಯಾಬ್ ಚಾಲಕ ಶೇಕ್ ಕಲೀಂ ಅಲಿ ಅಲಿಯಾಸ್ ಕಲೀಂ ಮತ್ತು ಮೊಹಮ್ಮದ್ ಲುಕ್ಮಾನ್ ಅಹ್ಮದ್ ಯಜ್ದಾನಿ ಅಲಿಯಾಸ್ ಲುಕ್ಮಾನ್ ಎಂದು ಗುರುತಿಸಲಾಗಿದೆ. ಜೂನ್ 1ರಂದು ಬೆಳಿಗ್ಗೆ 5 ಗಂಟೆಗೆ ಪೊಲೀಸ್ ಗಸ್ತು ತಂಡವು ಹುಡುಗಿಯನ್ನು ಪತ್ತೆ ಮಾಡಿದ್ದು, ನಂತರ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೈದರಾಬಾದ್‌ನ ಮೊಘಲ್‌ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್​ಸ್ಪೆಪೆಕ್ಟರ್ ಮಾಹಿತಿ ನೀಡಿದ್ದಾರೆ.

ವಿವರ : ಅಪ್ರಾಪ್ತೆ ತನ್ನ ಪೋಷಕರ ಮನೆಯಾದ ಪಹಾಡಿ ಶರೀಫ್‌ಗೆ ಹೋಗುವ ಉದ್ದೇಶದಿಂದ ವಾಹನಕ್ಕಾಗಿ ಕಾದು ನಿಂತಿದ್ದಾಳೆ. ಈ ವೇಳೆ ಕಲೀಂ ಅಲಿ ಅಲಿಯಾಸ್ ಕಲೀಂ ಎಂಬ ಕ್ಯಾಬ್ ಡ್ರೈವರ್​ ಈಕೆ ಒಬ್ಬಳೇ ಇರುವುದನ್ನು ಗಮನಿಸಿ ಎಲ್ಲಿಗಾದರೂ ಹೋಗಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಬಾಲಕಿ, ತನ್ನ ಬಳಿ ಹಣವಿಲ್ಲ. ಆದರೆ, ತಾನು ಶಾಹೀನ್ ನಗರಕ್ಕೆ ಹೋಗಬೇಕು ಎಂದು ಉತ್ತರಿಸಿದ್ದಾಳೆ.

ಕಲೀಂ ಅಪ್ರಾಪ್ತ ಬಾಲಕಿಯನ್ನು ಡ್ರಾಪ್ ಮಾಡುವುದಾಗಿ ಹೇಳಿ ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ. ದಾರಿಯಲ್ಲಿ ಹೋಗುವಾಗ ರಾತ್ರಿ 10 ಗಂಟೆಗೆ ಆತ ಎರಡನೇ ಆರೋಪಿಯಾದ ಮೊಹಮ್ಮದ್ ಲುಕ್ಮಾನ್ ಅಹ್ಮದ್ ಯಜ್ದಾನಿ ಅಲಿಯಾಸ್ ಲುಕ್ಮಾನ​ನ್ನು ಕಾರಿನಲ್ಲಿ ಕೂರಿಸಿಕೊಂಡು ಮುಂದೆ ಸಾಗಿದ್ದಾನೆ.

ಇಬ್ಬರೂ ಸೇರಿ ಬಾಲಕಿಯನ್ನು ಕೊಂಡೂರ್ಗ್ ಗ್ರಾಮದಲ್ಲಿರುವ ಆರೋಪಿ ಲುಕ್ಮಾನ್ ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆರೋಪಿಗಳಾದ ಕಲೀಂ ಮತ್ತು ಲುಕ್ಮಾನ್ ಅಪ್ರಾಪ್ತ ಬಾಲಕಿಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರ ಕಲೀಂ ತನ್ನ ಕ್ಯಾಬ್‌ನಲ್ಲಿ ಬೆಳಗ್ಗೆ 5 ಗಂಟೆಗೆ ಸುಲ್ತಾನ್‌ಶಾಹಿಯಲ್ಲಿ ಅಪ್ರಾಪ್ತೆಯನ್ನು ಡ್ರಾಪ್ ಮಾಡಿದ್ದಾನೆ. ಭರೋಸಾ ಕೇಂದ್ರದಲ್ಲಿ ಅಪ್ರಾಪ್ತೆಯ ಹೇಳಿಕೆಯನ್ನು ಆಧರಿಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರತಿ 3ನೇ ಶನಿವಾರ ರಾಜ್ಯಾದ್ಯಂತ ವಿದ್ಯುತ್​ ಅದಾಲತ್ ​: ಸಚಿವ ಸುನಿಲ್​ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.