ETV Bharat / bharat

ಸೇನಾ ಹೆಲಿಕಾಪ್ಟರ್​​​​ ಪತನ: ಕೇವಲ 27 ವರ್ಷದ ಲ್ಯಾನ್ಸ್​​​​ ನಾಯ್ಕ್ ಸಾಯಿ ತೇಜ್ ವಿಧಿವಶ​!

author img

By

Published : Dec 8, 2021, 10:59 PM IST

Updated : Dec 9, 2021, 8:42 AM IST

ಮೂರು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಹೆಲಿಕಾಪ್ಟರ್​​ ತಮಿಳುನಾಡಿನ ಕುನೂರಿನಲ್ಲಿ ಸಮೀಪ ಪತನಗೊಂಡಿದ್ದು, ರಾವತ್​​ ಸೇರಿ 13 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಕೇವಲ 27 ವರ್ಷದ ಲ್ಯಾನ್ಸ್ ನಾಯ್ಕ್​ ಸಾಯಿ ತೇಜ್​​ ನಿಧನರಾಗಿದ್ದಾರೆ.

Andhra Pradesh Jawan Died in Tamilnadu Chopper Crash
ಸೇನಾ ಹೆಲಿಕಾಪ್ಟರ್​​​​ ಪತನ: ಕೇವಲ 27 ವರ್ಷದ ಲ್ಯಾನ್ಸ್​​​​ ನಾಯ್ಕ್ ಸಾಯಿ ತೇಜ್ ವಿಧಿವಶ

ಹೈದರಾಬಾದ್​​: ತಮಿಳುನಾಡಿನ ನೀಲಿಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನ ಅವಘಡದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್​ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಕೆಲವರು ಅತಿ ಕಡಿಮೆ ವಯಸ್ಸಿನ ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ನಡೆದಿರುವ ಸೇನಾ ಹೆಲಿಕಾಪ್ಟರ್​ ಅವಘಡದಲ್ಲಿ ಕೇವಲ 27 ವರ್ಷದ ಲ್ಯಾನ್ಸ್​ ನಾಯ್ಕ್​ ಸಾಯಿ ತೇಜ್​ ನಿಧನರಾಗಿದ್ದಾರೆ. ಬಿಪಿನ್​ ರಾವತ್​​​ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಆಗಿದ್ದ ಸಾಯಿ ತೇಜ್​​ ಮೂಲತಃ ಆಂಧ್ರಪ್ರದೇಶದವರು. 2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್​​ಗೆ ಸೇರಿದ್ದ ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಮೂರು ವರ್ಷದ ಗಂಡು ಮಗು ಹಾಗೂ ಎರಡು ವರ್ಷದ ಹೆಣ್ಣು ಮಗುವಿದೆ. ಕಳೆದ ಕೆಲ ದಿನಗಳ ಹಿಂದೆ ಇವರು ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಸೇರಿಕೊಂಡಿದ್ದರು.

  • In pictures from left to right- Madhulika Rawat, wife of CDS Gen Bipin Rawat, Lance Naik Vivek Kumar 1 Para (SF), NK Gurushewak Singh 9 Para (SF), Lance Naik BS Teja 11 Para (SF)

    Gen Rawat, his wife, & 11 Army, IAF personnel died in a chopper crash in Coonoor, Tamil Nadu today pic.twitter.com/8wy5qKxFFl

    — ANI (@ANI) December 8, 2021 " class="align-text-top noRightClick twitterSection" data=" ">
Tamilnadu Chopper Crash
ಪತ್ನಿ, ಮಗುವಿನೊಂದಿಗೆ ಲ್ಯಾನ್ಸ್​ ನಾಯ್ಕ್ ಸಾಯಿ ತೇಜ್​​

ಲ್ಯಾನ್ಸ್ ನಾಯ್ಕ್ ಸಾಯಿ ತೇಜ್​​ ಕಳೆದ ಸೆಪ್ಟೆಂಬರ್​ ತಿಂಗಳಲ್ಲಿ ಮನೆಗೆ ಭೇಟಿ ನೀಡಿದ್ದರು. ಇನ್ನು ಇವರ ಸಹೋದರ ಮಹೇಶ್​ ಬಾಬು ಕೂಡ ಭಾರತೀಯ ಸೇನೆಯಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿರಿ: ಹೆಲಿಕಾಪ್ಟರ್ ಪತನದಲ್ಲಿ ಬಿಪಿನ್​​ ರಾವತ್​ ನಿಧನ: ಶುಕ್ರವಾರ ಅಂತ್ಯಕ್ರಿಯೆ

ಲ್ಯಾನ್ಸ್ ನಾಯ್ಕ್​ ಸಾಯಿ ತೇಜ್​ ಸಾವನ್ನಪ್ಪಿರುವ ಮಾಹಿತಿ ತಿಳಿಯುತ್ತಿದ್ದಂತೆ ಕುರಬಾಳ ಮಂಡಲದ ಯಗುವರೆಗಡ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಪಾರ್ಥಿವ ಶರೀರ ನಾಳೆ ಆಂಧ್ರಪ್ರದೇಶಕ್ಕೆ ಬರಲಿದ್ದು, ಶುಕ್ರವಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

Last Updated : Dec 9, 2021, 8:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.