ETV Bharat / bharat

ಗ್ರಾಮ ಸರ್ಪಂಚ್ ಆದ ಆಂಧ್ರ ವಿಧಾನಸಭಾ ಸ್ಪೀಕರ್ ಪತ್ನಿ

author img

By

Published : Feb 18, 2021, 3:46 PM IST

ಆಂಧ್ರಪ್ರದೇಶದ ವಿಧಾನಸಭಾ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಪತ್ನಿ ತಮ್ಮಿನೇನಿ ವನಿಸ್ರಿ ಶ್ರೀಕಾಕುಲಂ ಜಿಲ್ಲೆಯ ಅಮದಲವಾಲಸ ಮಂಡಲದ ತೊಗರಾಮ್ ಗ್ರಾಮದ ಸರ್ಪಂಚ್ ಸ್ಥಾನವನ್ನು ಪಡೆದಿದ್ದಾರೆ.

andhra-assembly-speakers-wife-set-to-become-sarpanch
ಆಂಧ್ರ ವಿಧಾನಸಭಾ ಸ್ಪೀಕರ್ ತಮ್ಮಿನೆನಿ ಸೀತಾರಾಮ್ ಪತ್ನಿ ತಮ್ಮಿನೇನಿ ವನಿಸ್ರಿ ಸರ್ಪಂಚ್ ಆಗಿ ಆಯ್ಕೆ

ಅಮರಾವತಿ: ಮೂರನೇ ಹಂತದ ಪಂಚಾಯತ್ ಚುನಾವಣೆಯಲ್ಲಿ ಆಂಧ್ರಪ್ರದೇಶದ ವಿಧಾನಸಭಾ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಪತ್ನಿ ತಮ್ಮಿನೇನಿ ವನಿಸ್ರಿ ಅವರು ಶ್ರೀಕಾಕುಲಂ ಜಿಲ್ಲೆಯ ಅಮದಲವಾಲಸ ಮಂಡಲದ ತೊಗರಾಮ್ ಗ್ರಾಮದ ಸರ್ಪಂಚ್ ಆಗಿ ಆಯ್ಕೆಯಾಗಿದ್ದಾರೆ.

1,460 ಮತಗಳಲ್ಲಿ 1,123 ಮತ ಚಲಾವಣೆಯಾಗಿದ್ದವು. ಇದರಲ್ಲಿ ರನ್ನರ್ ಅಪ್ 298 ಮತ ಪಡೆದರೆ ವನಿಸ್ರಿ 808 ಮತಗಳನ್ನು ಪಡೆದರು.

ಹಾಗೆಯೇ ರಂಪಾಚೋಡಾವರಂ ಶಾಸಕ ನಾಗುಲಪಲ್ಲಿ ಧನಲಕ್ಷ್ಮಿ ತಾಯಿ ನಾಗುಲಪಲ್ಲಿ ರಾಘವ ಅಡ್ಡತೀಗಲಾ ಮಂಡಲದ ಗೊಂಡೊಲು ಗ್ರಾಮದ ಸರ್ಪಂಚ್ ಆಗಿ ಆಯ್ಕೆಯಾಗಿದ್ದಾರೆ.

ಚಿತ್ತೂರು ಜಿಲ್ಲೆಯಲ್ಲಿ 23 ವರ್ಷದ ಬಂಡಿ ಶಶಿಕಲಾ ಹೆಸರಿನ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಒಬ್ಬರು ಮೂರನೇ ಹಂತದ ಚುನಾವಣೆಯಲ್ಲಿ ಸರ್ಪಂಚ್ ಹುದ್ದೆಯನ್ನು ಪಡೆದಿದ್ದಾರೆ.

ಅಂತೆಯೇ, ಗುಂಟೂರು ಜಿಲ್ಲೆಯ ಎಂಎಲ್​ಸಿ ಮಗ ಸರ್ಪಂಚ್ ಹುದ್ದೆ ಪಡೆದಿದ್ದಾರೆ. ಗುಂಟೂರು ಜಿಲ್ಲೆಯ ದಚೆಪಲ್ಲಿ ಮಂಡಲದ ಗಮಲಪಾಡು ಗ್ರಾಮದಲ್ಲಿ ಜಂಗಾ ಕೃಷ್ಣಮೂರ್ತಿಯವರ ಪುತ್ರ ಜಂಗಾ ಸುರೇಶ್ ಸರ್ಪಂಚ್ ಹುದ್ದೆ ಗೆದ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.