ETV Bharat / bharat

VIDEO ನೋಡಿ: ಆಳವಾದ ಬಾವಿಗೆ ಬಿದ್ದ ಮರಿ ಆನೆ.. ಕೊನೆಗೂ ಸಿಕ್ಕಿತು ರಕ್ಷಣೆ

author img

By

Published : Jan 10, 2022, 7:37 AM IST

ಕಾಡಿನಿಂದ ನಾಡಿಗೆ ಬಂದು ಆಳವಾದ ಬಾವಿಯಲ್ಲಿ ಬಿದ್ದ ಆನೆ ಮರಿಯೊಂದನ್ನು ಗ್ರಾಮಸ್ಥರ ಸಹಾಯದಿಂದ ಅರಣ್ಯಾಧಿಕಾರಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾವಿಗೆ ಬಿದ್ದ ಮರಿ ಆನೆ ರಕ್ಷಣೆ, elephant calf
ಬಾವಿಗೆ ಬಿದ್ದ ಮರಿ ಆನೆ ರಕ್ಷಣೆ

ಮಯೂರ್‌ಭಂಜ್‌( ಒಡಿಶಾ): ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿರೋದು ಹೆಚ್ಚಾಗುತ್ತಿದೆ. ಅದರಲ್ಲೂ ಆನೆಗಳಂತೂ ನಾಡಿಗೆ ನುಗ್ಗಿ ಅನಾಹುತಗಳನ್ನೇ ಸೃಷ್ಟಿಸುತ್ತಿವೆ. ಕಾಡಿನಿಂದ ನಾಡಿಗೆ ಬಂದು ಆಳವಾದ ಬಾವಿಯಲ್ಲಿ ಬಿದ್ದ ಆನೆ ಮರಿಯೊಂದನ್ನು ಗ್ರಾಮಸ್ಥರ ಸಹಾಯದಿಂದ ಅರಣ್ಯಧಿಕಾರಿಗಳು ರಕ್ಷಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಮಯೂರ್‌ಭಂಜ್‌ನ ರಾಸ್‌ಗೋವಿಂದಪುರ ಅರಣ್ಯ ವ್ಯಾಪ್ತಿಯ ಚಕುಂದಪದ ಗ್ರಾಮದಲ್ಲಿ ಆಳವಾದ ಬಾವಿಗೆ ಬಿದ್ದ ಆನೆಮರಿಯನ್ನು ರಕ್ಷಿಸಲಾಗಿದೆ ಎಂದು ಎಸಿಎಫ್ ರಬಿನಾರಾಯಣ ಮೊಹಾಂತಿ ತಿಳಿಸಿದ್ದಾರೆ.

ಆನೆಗಳ ಹಿಂಡಿನೊಂದಿಗೆ ಬಂದ ಈ ಮರಿ ಆನೆಯು ಆಯತಪ್ಪಿ ಆಳವಾದ ಬಾವಿಗೆ ಬಿದ್ದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಬಾವಿಗೆ ನೀರು ಬಿಟ್ಟು ಮರಿ ಆನೆ ಮೇಲೆ ಬರುವಂತೆ ಮಾಡಿದ್ದಾರೆ. ನೀರಿನಿಂದ ಹೊರ ಬಂದ ಆನೆ ಮರಿ ಸಂತಸದಿಂದ ಹೆಜ್ಜೆ ಹಾಕುತ್ತಾ ತಾಯಿಯೊಂದಿಗೆ ಮುಂದೆ ಸಾಗಿತು.

ಬಾವಿಗೆ ಬಿದ್ದ ಮರಿ ಆನೆ ರಕ್ಷಣೆ

ಓದಿ: ಇಂದಿನಿಂದ ಬೂಸ್ಟರ್​ ಡೋಸ್​ ಲಸಿಕಾ ಅಭಿಯಾನ... ರಾಜ್ಯದಲ್ಲಿ ಸಿಎಂರಿಂದ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.