ETV Bharat / bharat

ಹಬ್ಬಗಳ ಸೀಸನ್​ನಲ್ಲೇ ಗ್ರಾಹಕರಿಗೆ ಶಾಕ್​.. ಅಮುಲ್, ಮದರ್ ಡೈರಿ ಹಾಲಿನ ದರ ಏರಿಕೆ

author img

By

Published : Oct 15, 2022, 6:54 PM IST

ಹಬ್ಬಗಳ ಸೀಸನ್​ನಲ್ಲೇ ಅಮುಲ್ ಮತ್ತು ಮದರ್ ಡೈರಿಗಳು ಹಾಲಿನ ದರವನ್ನು ತಲಾ ಎರಡು ರೂಪಾಯಿ ಹೆಚ್ಚಿಸಿವೆ.

amul-and-mother-dairy-raises-milk-prices
ಹಬ್ಬಗಳ ಸೀಸನ್​ನಲ್ಲೇ ಅಮುಲ್, ಮದರ್ ಡೈರಿ ಹಾಲಿನ ದರ ಏರಿಕೆ

ನವದೆಹಲಿ: ದೇಶದ ಪ್ರಮುಖ ಹಾಲು ಉತ್ಪಾದಕ ಡೈರಿಗಳಾದ ಅಮುಲ್ ಮತ್ತು ಮದರ್ ಡೈರಿ ದರ ಏರಿಕೆ ಮಾಡಿವೆ. ಪ್ರತಿ ಒಂದು ಲೀಟರ್​ ಹಾಲಿಗೆ ಎರಡೂ ಸಂಸ್ಥೆಗಳು ಕೂಡ ತಲಾ ಎರಡು ರೂಪಾಯಿ ದರ ಹಚ್ಚಳ ಮಾಡಿವೆ.

ಹಬ್ಬಗಳ ಸೀಸನ್​ನಲ್ಲೇ ಹಾಲಿನ ದರ ಏರಿಕೆಯಿಂದ ಇನ್ಮುಂದೆ ಗ್ರಾಹಕರಿಗೆ ಜೇಬಿಗೆ ಹೆಚ್ಚಿನ ಹೊರೆ ಬೀಳಲಿದೆ. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಅಡಿ ಅಮುಲ್​ ಬ್ರಾಂಡ್​ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

ಇದೀಗ ಚುನಾವಣೆ ಎದುರಿಸುತ್ತಿರುವ ಗುಜರಾತ್ ಹೊರತುಪಡಿಸಿ ಎಲ್ಲೆಡೆ ಕೆನೆಭರಿತ ಹಾಲು ಮತ್ತು ಎಮ್ಮೆ ಹಾಲಿನ ದರವನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಿಸುವುದಾಗಿ ಅಮುಲ್​ ಘೋಷಿಸಿದೆ. ಇದರಿಂದ ಕೆನೆಭರಿತ ಹಾಲು ಹಾಲಿನ ದರ ಲೀಟಲ್​​ಗೆ 61 ರೂ.ನಿಂದ 63 ರೂ.ಗೆ ಏರಿಕೆಯಾಗಿದೆ.

ಮತ್ತೊಂದು ಮದರ್ ಡೈರಿ ಕೂಡ ತನ್ನ ಹಾಲಿನ ಬೆಲೆಯನ್ನು ಎರಡು ರೂಪಾಯಿ ಹೆಚ್ಚಳ ಮಾಡಿದೆ. ಕೆನೆಭರಿತ ಹಾಲು ಮತ್ತು ಹಸುವಿನ ಹಾಲಿನ ದರ ಪ್ರತಿ ಲೀಟರ್‌ಗೆ ಎರಡು ರೂಪಾಯಿ ಏರಿಕೆ ಮಾಡಲಾಗಿದ್ದು, ಈ ಪರಿಷ್ಕೃತ ದರ ಭಾನುವಾರದಿಂದ (ಅಕ್ಟೋಬರ್ 16) ಜಾರಿಗೆ ಬರಲಿದೆ.

ಡೈರಿ ಉದ್ಯಮವು ಕಚ್ಚಾ ಹಾಲಿನ ಬೆಲೆಯಲ್ಲಿ ಸ್ಥಿರವಾದ ಏರಿಕೆಯನ್ನು ಅನುಭವಿಸುತ್ತಿದೆ. ಇದು ಕಳೆದ ಎರಡು ತಿಂಗಳಲ್ಲಿ ಪ್ರತಿ ಕೆಜಿಗೆ ಸುಮಾರು ಮೂರು ರೂಪಾಯಿ ಹೆಚ್ಚಾಗಿದೆ ಎಂದು ಮದರ್ ಡೈರಿ ವಕ್ತಾರರು ತಿಳಿಸಿದ್ದಾರೆ.

ಮೇವಿನ ಬೆಲೆ ಏರಿಕೆ ಮತ್ತು ಉತ್ತರದ ಕೆಲವು ರಾಜ್ಯಗಳಲ್ಲಿ ಕಡಿಮೆ ಮಳೆ ಆಗಿರುವುದು ಕೂಡ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ಆದ್ದರಿಂದ ರೈತರಿಗೆ ಬೆಂಬಲ ನೀಡಲು ಮತ್ತು ಗ್ರಾಹಕರಿಗೆ ಗುಣಮಟ್ಟದ ಹಾಲು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬೆಲೆಗಳನ್ನು ಪರಿಷ್ಕರಿಸುವ ಅನಿವಾರ್ಯತೆ ಇದೆ ಎಂದೂ ತಿಳಿಸಿದ್ದಾರೆ.

ಅಮುಲ್ ಮತ್ತು ಮದರ್ ಡೈರಿ ಕೂಡ ಇದೇ ಆಗಸ್ಟ್‌ನಲ್ಲಿ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಳ ಮಾಡಿದ್ದವು. ಈಗ ಎರಡೇ ತಿಂಗಳಲ್ಲಿ ಮತ್ತೆ ಹಾಲಿನ ಬೆಲೆ ಹೆಚ್ಚಿಸಿವೆ.

ಇದನ್ನೂ ಓದಿ: ಕಬ್ಬಿಗೆ ಎಸ್ಎಪಿ ಘೋಷಿಸದಿದ್ದರೆ ಹೋರಾಟ: ಎಥೆನಾಲ್ ಲಾಭ ರೈತರಿಗೂ ಹಂಚುವಂತೆ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.