ETV Bharat / bharat

ಹಿಂಸಾಚಾರದ ಸುದ್ದಿಗಳ ನಡುವೆ ಕೋಮು ಸಾಮರಸ್ಯ ಸ್ಥಾಪನೆ.. ರಾಮನವಮಿ ರಥ ಮುನ್ನಡೆಸಿದ ಮುಸ್ಲಿಂ ವ್ಯಕ್ತಿ

author img

By

Published : Apr 5, 2023, 6:50 AM IST

ರಾಮನವಮಿ ದಿನ ಬಿಹಾರದ ವಿವಿಧೆಡೆ ಭಾರಿ ಹಿಂಸಾಚಾರ ಭುಗಿಲೆದ್ದಿತ್ತು. ಆದರೆ ನಳಂದಾ ಮತ್ತು ರೋಹ್ತಾಸ್​ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಮರುಸ್ಥಾಪನೆ ಆಗುತ್ತಿದೆ. ಇದು ಆ ರಾಜ್ಯದ ಜನರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

Amid violence in Bihar, Muslim charioteer sets an example
ಹಿಂಸಾಚಾರದ ಸುದ್ದಿಗಳ ನಡುವೆ ಕೋಮು ಸಾಮರಸ್ಯ ಸ್ಥಾಪನೆ!

ನಳಂದಾ( ಬಿಹಾರ): ಬಿಹಾರದ ನಳಂದಾ ಮತ್ತು ರೋಹ್ತಾಸ್ ಜಿಲ್ಲೆಗಳಲ್ಲಿ ರಾಮನವಮಿ ಮೆರವಣಿಗೆಯ ನಂತರ ಭುಗಿಲೆದ್ದಿದ್ದ ಹಿಂಸಾಚಾರ ಶಾಂತವಾಗಿದೆ. ಈ ನಡುವೆ ಈ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಮತ್ತೆ ಮರು ಸ್ಥಾಪನೆ ಆಗಿದೆ. ಪರಸ್ಪರ ಅನ್ಯ ಸಮುದಾಯಗಳ ನಡುವೆ ಪರಸ್ಪರ ನಂಬಿಕೆ ಮತ್ತು ಸಹೋದರತ್ವ ಭಾವನೆ ಹೆಚ್ಚಾಗಿ ಕಂಡು ಬಂದಿದೆ. ನಳಂದ ಜಿಲ್ಲೆಯಲ್ಲಿ ಕೋಮು ಸೌಹಾರ್ದದ ಚಿತ್ರ ಎಲ್ಲಡೆ ಮನೆ ಮಾಡಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸದಸ್ಯರು ರಾಮನವಮಿ ಹಬ್ಬದ ಎರಡನೇ ದಿನದಂದು ಭಗವಾನ್ ಶ್ರೀರಾಮನ ಮೆರವಣಿಗೆಯನ್ನು ಯಾವುದೇ ವಿಘ್ನವಿಲ್ಲದೇ ನೆರವೇರಿಸಿ ಕೋಮು ಸಾಮರಸ್ಯ ನಮ್ಮಲ್ಲಿ ಕದಡಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.


ಇದನ್ನು ಓದಿ:2023ರ ಛತ್ತೀಸ್‌ಗಢ ಚುನಾವಣೆಗೆ ಮುನ್ನ 'ಹಿಂದುತ್ವ ರಾಷ್ಟ್ರ ರಾಜಕಾರಣ'.. ಕಾಂಗ್ರೆಸ್​ ವಾಗ್ದಾಳಿ

ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳನ್ನು ರಥದ ಮೇಲೆ ಸ್ಥಾಪಿಸಿ ಭರ್ಜರಿ ಮೆರವಣಿಗೆ ಮಾಡಲಾಯಿತು. ರಾಮನವಮಿ ಮೆರವಣಿಗೆ ಬಗ್ಗೆ ಮಾತನಾಡಿದ ಮೊಹಮ್ಮದ್ ಫೇಕು, "ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಆದ್ದರಿಂದಲೇ ನಾನು ಶ್ರೀರಾಮನ ಸಾರಥಿ" ಎಂದು ಹರ್ಷ ವ್ಯಕ್ತಪಡಿಸಿದರು. ‘ಹಿಂದೂ-ಮುಸ್ಲಿಂ ಐಕ್ಯತೆಗೆ ಮಾದರಿಯಾಗಲು ನಾನು ಶ್ರೀರಾಮನ ಸಾರಥಿಯಾಗಲು ಮುಂದೆ ಬಂದಿದ್ದೇನೆ. ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸದಸ್ಯರು ಇದ್ದರೂ ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಯಿತು. ಈ ಮೂಲಕ ನಳಂದಾ ಕೋಮು ಸಾಮರಸ್ಯಕ್ಕೆ ಕಾರಣವಾಯಿತು.

ಇದನ್ನು ಓದಿ:ಈಟಿವಿ ಬಾಲ ಭಾರತ್​ನಲ್ಲಿ ಬೇಸಿಗೆ ರಜೆಗೆ ನೂತನ ಕಾರ್ಯಕ್ರಮಗಳು.. ಮಕ್ಕಳ ಮನರಂಜನೆಗಿಲ್ಲ ಕೊರತೆ

"ನಾನು ಕಳೆದ ಹಲವು ವರ್ಷಗಳಿಂದ ಈ ವೃತ್ತಿಯೊಂದಿಗೆ ಸಂಬಂಧ ಹೊಂದಿದ್ದೇನೆ. ರಥ ಸೇವೆಯ ಜೊತೆಗೆ ಧಾರ್ಮಿಕ ಮೆರವಣಿಗೆಗಳಿಗೆ ಅಗತ್ಯವಾದ ಕುದುರೆಗಳು ಮತ್ತು ಆನೆಗಳನ್ನು ಒದಗಿಸುತ್ತಿದ್ದೇನೆ. ಹಿಂಸೆಯ ದಿನದಂದು ನಾನು ರಥವನ್ನು ನಡೆಸುತ್ತಿದ್ದೆ ಮತ್ತು ಮುಂಭಾಗದಿಂದ ಮೆರವಣಿಗೆಯ ನೇತೃತ್ವ ವಹಿಸಿದ್ದೆ. ಹಿಂಸಾಚಾರವು ಹೇಗೆ ಪ್ರಾರಂಭವಾಯಿತು ಎಂಬುದು ಗೊತ್ತಾಗಲಿಲ್ಲ. ಇದ್ದಕ್ಕಿದಂತೆ ಆರಂಭವಾದ ಜಗಳದಿಂದಾಗಿ ಜನರು ಸುರಕ್ಷತೆಗಾಗಿ ಓಡಿಹೋಗಲು ಪ್ರಾರಂಭಿಸಿದರು‘‘ ಎಂದು ಫೇಕು ಘಟನೆ ಬಗ್ಗೆ ವಿವರಿಸಿದರು.

‘‘ಸಮಾಜದಲ್ಲಿ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂದು ನಾನು ಎಲ್ಲರಿಗೂ ಪ್ರಾಮಾಣಿಕವಾಗಿ ಮನವಿ ಮಾಡುತ್ತೇನೆ ಅಂತಾರೆ ಮೊಹಮ್ಮದ್ ಫಾಕು. "ನಾನು ಸೌಹಾರ್ದಯುತ ಬದುಕು ನಡೆಸಲು ಬಯಸುತ್ತೇನೆ. ಧಾರ್ಮಿಕ ಮೆರವಣಿಗೆಗೆ ರಥ, ಕುದುರೆ ಮತ್ತು ಆನೆಗಳನ್ನು ನೀಡುತ್ತೇನೆ. ಜೊತೆಗೆ, ನನಗೆ ಎಲ್ಲ ಧರ್ಮಗಳು ಮತ್ತು ನಂಬಿಕೆಗಳ ಬಗ್ಗೆ ಅಪಾರ ಗೌರವವಿದೆ. ನಾನು ಹಿಂದೆಂದೂ ನಳಂದಾದಲ್ಲಿ ಇಂತಹ ಘಟನೆಯನ್ನು ನೋಡಿರಲಿಲ್ಲ‘‘ ಎಂದು ಪ್ರತ್ಯಕ್ಷದರ್ಶಿ ಮೊಹಮ್ಮದ್​ ಫೇಕು ಹೇಳಿದರು.

ಇದನ್ನು ಓದಿ:ಶಿಂಧೆ ಗುಂಪಿನ ಕಾರ್ಯಕರ್ತರಿಂದ ಉದ್ಧವ್ ಠಾಕ್ರೆ ಗುಂಪಿನ ಮಹಿಳೆ ಮೇಲೆ ಹಲ್ಲೆ

ಬಿಹಾರದ ವಿವಿಧ ಭಾಗಗಳಲ್ಲಿ ರಾಮನವಮಿ ಸಂದರ್ಭದಲ್ಲಿ ಹಿಂಸಾಚಾರ ಘಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಪಾಟ್ನಾದ ಎಸ್‌ಎಸ್‌ಬಿಯಲ್ಲಿ ನಡೆಯಬೇಕಿದ್ದ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು.

'ಹಿಂಸಾಚಾರದಿಂದ ಊರು ಬಿಟ್ಟಿದ್ದ ಹಿಂದೂಗಳು': ಬಿಹಾರದ ಸಸಾರಮ್‌ನಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಅನೇಕ ಜನರು ತಮ್ಮ ಮನೆಗಳನ್ನು ತೊರೆದು ನಗರದಿಂದ ದೂರದ ಹಳ್ಳಿಗಳಿಗೆ ತೆರಳಿದ್ದರು. ಈ ವದಂತಿ ಬಿಹಾರದಲ್ಲಿ ವ್ಯಾಪಕವಾಗಿ ಹರಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.