ETV Bharat / bharat

ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ: ಕೋವಿಡ್-19 ಕೇರ್ ಕೋಚ್​ ಬಳಸುವಂತೆ ಭಾರತೀಯ ರೈಲ್ವೆ ಕೋರಿಕೆ

author img

By

Published : Apr 16, 2021, 9:46 PM IST

ಆಸ್ಪತ್ರೆಗಳು ಹಾಸಿಗೆಗಳ ಕೊರತೆ ಸಮಸ್ಯೆ ಎದುರಿಸುತ್ತಿದ್ದು, ರೈಲುಗಳ ಕೋವಿಡ್-19 ಕೇರ್ ಕೋಚ್​ಗಳನ್ನು ಬಳಸುವಂತೆ ಭಾರತೀಯ ರೈಲ್ವೇ ರಾಜ್ಯ ಸರ್ಕಾರಗಳನ್ನು ಕೇಳಿಕೊಂಡಿದೆ.

Amid shortage of beds, Railways provides COVID-19 care coaches
Amid shortage of beds, Railways provides COVID-19 care coaches

ನವದೆಹಲಿ: ಕೋವಿಡ್ -19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ವಿವಿಧ ರಾಜ್ಯಗಳ ಆಸ್ಪತ್ರೆಗಳು ಹಾಸಿಗೆಗಳ ಕೊರತೆ ಸಮಸ್ಯೆ ಎದುರಿಸುತ್ತಿವೆ. ಈ ಪರಿಸ್ಥಿತಿಯನ್ನು ನಿಭಾಯಿಸಲು, ಅಗತ್ಯವಿದ್ದಲ್ಲಿ ರೈಲುಗಳ ಕೋವಿಡ್-19 ಕೇರ್ ಕೋಚ್​ಗಳನ್ನು ಬಳಸುವಂತೆ ಭಾರತೀಯ ರೈಲ್ವೇ ರಾಜ್ಯ ಸರ್ಕಾರಗಳನ್ನು ಕೇಳಿಕೊಂಡಿದೆ.

"ನಾವು ಸುಮಾರು 4,000 ಬೋಗಿಗಳನ್ನು ಸಿದ್ಧಪಡಿಸಿದ್ದೇವೆ. ಆ ಬೋಗಿಗಳನ್ನು ಚೆನ್ನಾಗಿ ನಿರ್ವಹಿಸಲಾಗಿದೆ. ಈ ಬೋಗಿಗಳನ್ನು ದೇಶಾದ್ಯಂತ 220 ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇವುಗಳನ್ನು ಬಳಸಬಹುದಾಗಿದೆ" ಎಂದು ರೈಲ್ವೆ ಮಂಡಳಿಯ ಸಿಇಒ ಮತ್ತು ಅಧ್ಯಕ್ಷ ಸುನೀತ್ ಶರ್ಮಾ ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.

amid-shortage-of-beds-railways-provides-covid-19-care-coaches
ಕೋವಿಡ್-19 ಕೇರ್ ಕೋಚ್​ ಬಳಸುವಂತೆ ಭಾರತೀಯ ರೈಲ್ವೆ ಕೋರಿಕೆ

ಇಲ್ಲಿಯವರೆಗೆ ನಾವು ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಿಂದ ಬೇಡಿಕೆ ಸ್ವೀಕರಿಸಿದ್ದೇವೆ ಮತ್ತು 20 ಬೋಗಿಗಳನ್ನು ಅಲ್ಲಿ ಇರಿಸಲಾಗಿದೆ. ಈ ಬೋಗಿಗಳನ್ನು ರಾಜ್ಯ ಸರ್ಕಾರವು ರೋಗಿಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ ವರ್ಷ, ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ಆರೈಕೆಗಾಗಿ ರೈಲುಗಳಲ್ಲಿ ಕೋವಿಡ್-19 ಕೇರ್ ಕೋಚ್​ಗಳನ್ನು ಸಿದ್ಧಪಡಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.