ETV Bharat / bharat

ಆಂಟಿಲಿಯಾ ಪ್ರಕರಣದ ಬಳಿಕ ಮತ್ತೆ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ

author img

By

Published : Aug 15, 2022, 1:44 PM IST

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆಗಳು ಬಂದಿವೆ. 8 ಬಾರಿ ಕರೆ ಮಾಡಲಾಗಿದೆ ಎಂದು ವರದಿಯಾಗಿದೆ.

Ambani family threatened  Ambani family threatened again after Antilia case  Ambani family news  Antilia case update  ಮತ್ತೆ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ  ಆಂಟಿಲಿಯಾ ಪ್ರಕರಣದ ಬಳಿಕ ಮತ್ತೆ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ  ಅಂಬಾನಿ ಕುಟುಂಬ ಸುದ್ದಿ  ಆಂಟಿಲಿಯಾ ಪ್ರಕರಣ ಸುದ್ದಿ
ಮತ್ತೆ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ

ಮುಂಬೈ, ಮಹಾರಾಷ್ಟ್ರ: ಆಂಟಿಲಿಯಾ ಪ್ರಕರಣದ ಬಳಿಕ ಅಂಬಾನಿ ಕುಟುಂಬಕ್ಕೆ ಮತ್ತೆ ಬೆದರಿಕೆ ಬಂದಿದೆ. ಈ ವೇಳೆ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಡಿಸ್ಪ್ಲೇ ನಂಬರ್‌ಗೆ ಬೆದರಿಕೆ ಕರೆ ಬಂದಿದೆ. ಕರೆ ಮಾಡಿದವರು ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಬಳಿಕ ಆಸ್ಪತ್ರೆಯ ಜನರು ಡಿಬಿ ಮಾರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಒಟ್ಟು 8 ಬೆದರಿಕೆ ಕರೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. ಸದ್ಯ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ಈ ಹಿಂದೆಯೂ ಆಂಟಿಲಿಯಾ ಪ್ರಕರಣದಲ್ಲಿ ಇದೇ ರೀತಿಯ ಘಟನೆ ಮುನ್ನೆಲೆಗೆ ಬಂದಿತ್ತು.

ಅಂಬಾನಿ ಮತ್ತು ಅವರ ಕುಟುಂಬಕ್ಕೆ ಅಪರಿಚಿತ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆ ಬಂದಿದೆ ಎಂದು ವರದಿಯಾಗಿದೆ. ಒಂದೇ ದಿನದಲ್ಲಿ 8 ಬಾರಿ ಕರೆ ಮಾಡಲಾಗಿದ್ದು, ವರದಿಗಳ ಪ್ರಕಾರ, ಕರೆ ಮಾಡಿದವರು ಅಂಬಾನಿ ಕುಟುಂಬಕ್ಕೆ ಮೂರು ಗಂಟೆಗಳೊಳಗೆ ಏನಾದರೂ ದೊಡ್ಡದು ಅನಾಹುತವಾಗಲಿದೆ ಎಂದು ಹೇಳಿದ್ದಾರೆ. ಸದ್ಯ ಆಸ್ಪತ್ರೆ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ.

ದೂರು ಬಂದ ತಕ್ಷಣ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ. ಸದ್ಯ ಹೇಳಿಕೆಗಳನ್ನು ದಾಖಲಿಸಿಕೊಂಡು ಕರೆ ಮಾಡಿದವರನ್ನು ಪತ್ತೆ ಹಚ್ಚುವ ಪ್ರಯತ್ನ ಪೊಲೀಸರು ಮಾಡುತ್ತಿದ್ದಾರೆ. ಆಸ್ಪತ್ರೆಗೆ ಭದ್ರತೆ ಹೆಚ್ಚಿಸುವ ಕಾರ್ಯ ಪೊಲೀಸರು ಮಾಡಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಕೈಗಾರಿಕೋದ್ಯಮಿಗೆ ಸರ್ಕಾರದಿಂದ ಬಿಗಿ ಭದ್ರತೆ ಒದಗಿಸಲಾಗಿದೆ.

ಓದಿ: Antilia explosives case: ಆರೋಪಿಗಳಿಗೆ ಚಾರ್ಜ್​ಶೀಟ್​ ನಕಲು ನೀಡಲು ಎನ್​ಐಎ ನಕಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.