ETV Bharat / bharat

ಮೇಘಸ್ಫೋಟದಿಂದ ಸ್ಥಗಿತಗೊಂಡ ಅಮರನಾಥ ಯಾತ್ರೆ ಪುನರಾರಂಭ; ದರ್ಶನ ಭಾಗ್ಯಕ್ಕೆ ಭಕ್ತರ ಕಾತರ

author img

By

Published : Jul 11, 2022, 7:26 AM IST

Updated : Jul 11, 2022, 8:31 AM IST

ದಕ್ಷಿಣ ಕಾಶ್ಮೀರದ ಪವಿತ್ರ ಗುಹಾಲಯದ ಸಮೀಪದಲ್ಲಿ ಶುಕ್ರವಾರ ಉಂಟಾದ ಮೇಘಸ್ಫೋಟದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಸೋಮವಾರ ಬೆಳಗ್ಗೆ ಪುನರಾರಂಭವಾಗಿದೆ.

Amarnath Yatra resumes today
ಅಮರನಾಥ ಯಾತ್ರೆ ಪುನರಾರಂಭ

ಬಲ್ತಾಲ್ (ಜಮ್ಮು ಮತ್ತು ಕಾಶ್ಮೀರ): ಮೇಘಸ್ಫೋಟದಿಂದ ತಾತ್ಕಾಲಿಕವಾಗಿ ಮೊಟಕುಗೊಂಡಿದ್ದ ಅಮರನಾಥ ಯಾತ್ರೆ ಇಂದು ಬೆಳಗ್ಗೆ ನುನ್ವಾನ್ ಪಹಲ್ಗಾಮ್ ಕಡೆಯಿಂದ ಮತ್ತೆ ಶುರುವಾಗಿದೆ ಎಂದು ಅಮರನಾಥ ಕ್ಷೇತ್ರ ಆಡಳಿತ ಮಂಡಳಿ ತಿಳಿಸಿದೆ. ಬಾಲ್ಟಾಲ್ ಬೇಸ್ ಕ್ಯಾಂಪ್‌ನಲ್ಲಿ ಕಾಯುತ್ತಿದ್ದ ಯಾತ್ರಾರ್ಥಿಗಳು ಸೋಮವಾರ ತಮ್ಮ ಯಾತ್ರೆ ಪುನರಾರಂಭಿಸಿದ್ದಾರೆ.

  • J&K | Amarnath yatra which was partially suspended due to cloudburst has resumed. After being halted in Jammu, the fresh batch of #Amarnath pilgrims have started to move from the Jammu base camp pic.twitter.com/OkDCh8Vpwc

    — ANI (@ANI) July 10, 2022 " class="align-text-top noRightClick twitterSection" data=" ">

ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಈಗ ತೀರ್ಥಯಾತ್ರೆ ಪುನರಾರಂಭವಾಗಿದೆ. ಅಮರನಾಥ ಯಾತ್ರಿಕರ ಹೊಸ ಬ್ಯಾಚ್ ಜಮ್ಮುವಿನ ಮೂಲ ಶಿಬಿರದಿಂದ ತೆರಳಲು ಪ್ರಾರಂಭಿಸಿವೆ.

ಜು.8ರಂದು ಪವಿತ್ರ ಗುಹೆಯ ಸಮೀಪ ಉಂಟಾದ ದಿಢೀರ್‌ ಪ್ರ‌ವಾಹದಿಂದಾಗಿ ಶಿಬಿರಗಳಲ್ಲಿ ತಂಗಿದ್ದ ಯಾತ್ರಿಕರಲ್ಲಿ 16 ಜನರು ಮೃತಪಟ್ಟು, ಸುಮಾರು 40 ಮಂದಿ ನಾಪತ್ತೆಯಾಗಿದ್ದರು. ಅಮರನಾಥ ಕ್ಷೇತ್ರದಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಆದರೆ ಬದುಕುಳಿಯುವ ಸಾಧ್ಯತೆ ಕ್ಷೀಣವಾಗಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಮನೋಜ್ ಸಿನ್ಹಾ ಅವರು ಭಾನುವಾರ ಪಹಲ್ಗಾಮ್‌ನಲ್ಲಿರುವ ಬೇಸ್ ಕ್ಯಾಂಪ್‌ಗೆ ಭೇಟಿ ನೀಡಿ ಯಾತ್ರಾರ್ಥಿಗಳನ್ನು ಭೇಟಿ ಮಾಡಿದ್ದರು. "ಭದ್ರತಾ ಸಿಬ್ಬಂದಿ ದಕ್ಷ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಪ್ರಾಣ ಕಳೆದುಕೊಂಡವರಿಗೆ ನಾವು ಸಂತಾಪ ಸೂಚಿಸುತ್ತೇವೆ. ಮಾರ್ಗವನ್ನು ಸರಿಪಡಿಸುವ ಜೊತೆಗೆ ಯಾತ್ರೆಯನ್ನು ಪುನರಾರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಯಾತ್ರಾರ್ಥಿಗಳು ಬರಬೇಕು, ನಾವು ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತೇವೆ." ಸಿನ್ಹಾ ಭರವಸೆ ನೀಡಿದರು.

ಇದನ್ನೂ ಓದಿ: Amarnath Cloudburst: 15 ಸಾವಿರ ಯಾತ್ರಿಗಳು ಸ್ಥಳಾಂತರ, 15 ಜನ ಸಾವು, 65ಕ್ಕೂ ಹೆಚ್ಚು ಮಂದಿಗೆ ಗಾಯ

Last Updated :Jul 11, 2022, 8:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.