ETV Bharat / bharat

ಹವಾಮಾನ ವೈಪರೀತ್ಯದಿಂದ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತ

author img

By

Published : Jul 7, 2023, 9:00 PM IST

ಹವಾಮಾನ ವೈಪರೀತ್ಯದಿಂದಾಗಿ ಅಧಿಕಾರಿಗಳು ಶುಕ್ರವಾರ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶಿಬಿರದಲ್ಲಿರುವ ಯಾತ್ರಾರ್ಥಿಗಳು ಹವಾಮಾನ ಸುಧಾರಿಸಲು ಕಾಯುತ್ತಿದ್ದಾರೆ.

Amarnath yatra
ಹವಾಮಾನ ವೈಪರೀತ್ಯದಿಂದ ಅಮರನಾಥ ತಾತ್ಕಾಲಿಕವಾಗಿ ಯಾತ್ರೆ ಸ್ಥಗಿತ

ಪಹಲ್ಗಾಮ್(ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರ ಕಣಿವೆಯಲ್ಲಿ ಅಮರನಾಥ ಯಾತ್ರೆ ಸಂಭ್ರಮ ಮತ್ತು ಧಾರ್ಮಿಕ ಶ್ರದ್ಧೆಯಿಂದ ಮುಂದುವರೆದಿತ್ತು. 50 ಸಾವಿರಕ್ಕೂ ಹೆಚ್ಚು ಭಕ್ತರು ಶಿವನ ದರ್ಶನ ಪಡೆದಿದ್ದಾರೆ. ಆದರೆ ಪಹಲ್ಗಾಮ್‌ನ ನೈನ್ ಒನ್ ಯಾತ್ರಾ ಬೇಸ್ ಕ್ಯಾಂಪ್ ಮತ್ತು ಬಾಲ್ ತಾಲ್‌ನಿಂದ ಐದನೇ ಬ್ಯಾಚ್ ಯಾತ್ರಾರ್ಥಿಗಳು ಇಂದು ಅಮರನಾಥ ಪವಿತ್ರ ಗುಹೆಯಲ್ಲಿರುವ ಶಿವಲಿಂಗದ ದರ್ಶನಕ್ಕೆ ತೆರಳಿದ್ದರು. ಮಳೆಯಿಂದಾಗಿ ಯಾತ್ರಿಕರನ್ನು ಬೆಳಗ್ಗೆ ಬೇಸ್ ಕ್ಯಾಂಪ್‌ನಲ್ಲಿ ತಡೆದು ನಿಲ್ಲಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ಅಧಿಕಾರಿಗಳು ಶುಕ್ರವಾರ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

  • #WATCH | Jammu & Kashmir | Amarnath Yatra temporarily suspended due to bad weather.

    Amarnath Yatra began on July 1 and will end on August 31, 2023.

    (Visuals from Baltal, Ganderbal) pic.twitter.com/TeebGsh1rK

    — ANI (@ANI) July 7, 2023 " class="align-text-top noRightClick twitterSection" data=" ">

ಮಳೆಯಿಂದ ಯಾತ್ರೆ ತಾತ್ಕಾಲಿಕ ಸ್ಥಗಿತ: "ಮಳೆಯಿಂದಾಗಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜಿಲ್ಲಾಡಳಿತದಿಂದ ಎಲ್ಲರನ್ನೂ ನೋಡಿಕೊಳ್ಳುತ್ತಿದೆ. ಸ್ಥಳೀಯರು ಸಹ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ನನ್ನ ಅಮರನಾಥ ಯಾತ್ರೆಯು ಜುಲೈ 1ರಂದು ಪ್ರಾರಂಭವಾಗಿತ್ತು. 2023ರ ಆಗಸ್ಟ್ 31ರಂದು ಈ ಯಾತ್ರೆ ಕೊನೆಗೊಳ್ಳಲಿದೆ'' ಎಂದು ಯಾತ್ರಿಕ ಜಮ್ಮು ಮತ್ತು ಕಾಶ್ಮೀರ ಮಂಜೋಯ್ ಕುಮಾರ್ ತಿಳಿಸಿದ್ದಾರೆ.

  • Jammu & Kashmir | Amarnath Yatra temporarily suspended as bad weather hits Nunwan Base Camp in Pahalgam.

    Amarnath Yatra began on July 1 and will end on August 31, 2023. pic.twitter.com/0U6DyqeanV

    — ANI (@ANI) July 7, 2023 " class="align-text-top noRightClick twitterSection" data=" ">

''ಪ್ರಕೃತಿಯ ಮುಂದೆ ಮನುಷ್ಯ ಅಸಹಾಯಕ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಹಿತದೃಷ್ಟಿಯಿಂದ ಯಾತ್ರೆ ಸ್ಥಗಿತಗೊಳಿಸಿರುವುದು ಉತ್ತಮ ಕ್ರಮವಾಗಿದೆ. ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಕೆಟ್ಟ ವಾತಾವರಣದ ಮುಂದೆ ಜಿಲ್ಲಾಡಳಿತವೂ ಅಸಹಾಯಕವಾಗಿದೆ. ಹವಾಮಾನವು ಶೀಘ್ರದಲ್ಲೇ ಸುಧಾರಿಸುತ್ತದೆ. ತೀರ್ಥಯಾತ್ರೆಯನ್ನು ಪುನರಾರಂಭಿಸಬಹುದೆಂದು ನಾವು ಭಾವಿಸುತ್ತೇವೆ'' ಎಂದು ಯಾತ್ರಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

  • Jammu & Kashmir | "Due to rainfall the Yatra has been temporarily suspended. The management is taking care of everyone . The local people are also supporting us...," says Manjoy Kumar, a pilgrim pic.twitter.com/MbGvMtkfe1

    — ANI (@ANI) July 7, 2023 " class="align-text-top noRightClick twitterSection" data=" ">

ಅಮರನಾಥ ಯಾತ್ರಿ ಶವ ಪತ್ತೆ: ವಾರ್ಷಿಕ ಅಮರನಾಥ ಯಾತ್ರೆ ಮಧ್ಯೆ, ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಪಹಲ್ಗಾಮ್ ಪ್ರದೇಶದ ಬೇಸ್ ಕ್ಯಾಂಪ್‌ನಲ್ಲಿ ಶುಕ್ರವಾರ ಯಾತ್ರಿಯೊಬ್ಬರ ಶವ ಪತ್ತೆಯಾಗಿದೆ. ಮೃತ ಬಿಹಾರದ ಮೋಹಿ ಅಲ್ದಿ ನಗರ ಜಿಲ್ಲೆಯ ಸಮಸ್ತಿಪುರ ನಿವಾಸಿ ಜಮಾದರ್ ಸಿಂಗ್ ಅವರ ಪುತ್ರ ಸುಮಾರು 68 ವರ್ಷದ ನವೀನ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತ ಯಾತ್ರಿಕರ ಗುರುತಿನ ಚೀಟಿ ಸಂಖ್ಯೆ 565830 ಆಗಿದೆ.

ಮೂಲಗಳ ಪ್ರಕಾರ, ಯಾತ್ರಿ ಬೇಸ್ ಕ್ಯಾಂಪ್ ಪಂಜ್ತರ್ನಿಯಲ್ಲಿ ತಂಗಿದ್ದರು. ಅವರನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಷ್ಟೋತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ. ಅವರ ಸಾವಿಗೆ ನಿಜವಾದ ಕಾರಣ ತಿಳಿದು ಬಂದಿಲ್ಲ.

67,566 ಯಾತ್ರಾರ್ಥಿಗಳು ಭೇಟಿ: ಜುಲೈ 1ರಿಂದ ಆರಂಭವಾಗಿರುವ ಅಮರನಾಥ ಯಾತ್ರೆಯಲ್ಲಿ 67,566 ಯಾತ್ರಾರ್ಥಿಗಳು ಅಮರನಾಥ ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಅಮರನಾಥ ದೇಗುಲ ಮಂಡಳಿ ಇತ್ತೀಚೆಗೆ ಮಾಹಿತಿ ನೀಡಿತ್ತು. 18,354 ಯಾತ್ರಿಕರು ಬಾಲ್ಟಾಲ್ ಬೇಸ್ ಕ್ಯಾಂಪ್ ಹಾಗೂ ನುನ್ವಾನ್ ಬೇಸ್ ಕ್ಯಾಂಪ್‌ನಿಂದ ಅಮರನಾಥ ಗುಹೆ ದೇವಸ್ಥಾನಕ್ಕೆ ತೆರಳಿದ್ದರು. ಇವರಲ್ಲಿ 12,483 ಪುರುಷರು, 5,146 ಮಹಿಳೆಯರು, 457 ಮಕ್ಕಳು, 266 ಸಾಧುಗಳು ಹಾಗೂ 2 ಸಾಧ್ವಿಗಳು ಇದ್ದರು ಎಂದು ಅಧಿಕೃತ ಹೇಳಿಕೆ ನೀಡಿತ್ತು.

ಇದನ್ನೂ ಓದಿ: Watch... ನಿರಂತರ ಸುರಿದ ಮಳೆಗೆ ಪೊಲೀಸ್​ ಠಾಣೆಯೇ ಜಲಾವೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.