ETV Bharat / bharat

ಕರ್ನಾಟಕಕ್ಕೆ 1.62 ಲಕ್ಷ ರೆಮ್ಡೆಸಿವಿರ್‌ ವಯಲ್ಸ್​​ ನಿಗದಿ: ಸದಾನಂದ ಗೌಡ

author img

By

Published : May 1, 2021, 7:59 PM IST

ವಿವಿಧ ರಾಜ್ಯಗಳಿಗೆ ಇಂದು 16.5 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹಂಚಿಕೆ ಮಾಡಲಾಗಿದೆ. ಕರ್ನಾಟಕಕ್ಕೆ 1.62 ಲಕ್ಷ ವಯಲ್ಸ್ ನಿಗದಿಪಡಿಸಿದ್ದೇವೆ. ಇದು ಮೇ 3ರಿಂದ 9ರವರೆಗಿನ ಅವಧಿಯ ಬಳಕೆಗೆಗಾಗಿ ನಿಗದಿಪಡಿಸಲಾಗಿದೆ. ಅದೇ ರೀತಿ ಕರ್ನಾಟಕದ ಆಮ್ಲಜನಕ ಪಾಲನ್ನು (ನಿತ್ಯ) 865 ಮೆಟ್ರಿಕ್ ಟನ್ನಿಗೆ ಏರಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

Remdesivir
Remdesivir

ನವದೆಹಲಿ: ದೇಶದಲ್ಲಿ ರೆಮ್ಡೆಸಿವಿರ್ ಕೊರತೆ ನೀಗಿಸಲು ಕೇಂದ್ರ ಸರ್ಕಾರವು ಇತರ ದೇಶಗಳಿಂದ ಆಮದು ಮಾಡಿಕೊಳ್ಳಲು ಆರಂಭಿಸಿದ್ದು, ಇಂದು ವಿವಿಧ ರಾಜ್ಯಗಳಿಗೆ ಚುಚ್ಚುಮದ್ದು ಹಂಚಿಕೆ ಮಾಡಿದೆ.

ವಿವಿಧ ರಾಜ್ಯಗಳಿಗೆ ಇಂದು 16.5 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹಂಚಿಕೆ ಮಾಡಲಾಗಿದೆ. ಕರ್ನಾಟಕಕ್ಕೆ 1.62 ಲಕ್ಷ ವಯಲ್ಸ್ ನಿಗದಿಪಡಿಸಿದ್ದೇವೆ. ಇದು ಮೇ 3ರಿಂದ 9ರವರೆಗಿನ ಅವಧಿಯ ಬಳಕೆಗೆಗಾಗಿ ನಿಗದಿಪಡಿಸಲಾಗಿದೆ. ಅದೇ ರೀತಿ ಕರ್ನಾಟಕದ ಆಮ್ಲಜನಕ ಪಾಲನ್ನು (ನಿತ್ಯ) 865 ಮೆಟ್ರಿಕ್ ಟನ್ನಿಗೆ ಏರಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

ಎಲ್ಲಾ ರಾಜ್ಯಗಳಿಗೆ ವೈರಸ್ ವಿರೋಧಿ ಔಷಧ ರೆಮ್ಡೆಸಿವಿರ್ ಹಂಚಿಕೆ ಯೋಜನೆ ಪರಿಷ್ಕರಿಸಲಾಗಿದ್ದು, ಅದರ ಉತ್ಪಾದನೆ ಹೆಚ್ಚಿಸಿದ ಕಾರಣ ಲಭ್ಯತೆ ಹೆಚ್ಚಾಗಿದೆ. ಕೋವಿಡ್-19 ಚಿಕಿತ್ಸೆಯಲ್ಲಿ ಬಳಸುತ್ತಿರುವ ಔಷಧದ ಹೆಚ್ಚಳವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ನಿನ್ನೆ ಹೇಳಿದ್ದರು.

ಕೇಂದ್ರ ಸರ್ಕಾರ ಒಡೆತನದ ಕಂಪನಿಯಾದ ʻಎಚ್‌ಎಲ್ಎಲ್ ಲೈಫ್ ಕೇರ್ ಲಿಮಿಟೆಡ್ʼ ಅಮೆರಿಕದ ಔಷಧ ಕಂಪನಿ ಮೆಸರ್ಸ್ ʻಗಿಲ್ಯಾಡ್‌ ಸೈನ್ಸಸ್ ಐಎನ್‌ಸಿʼ ಮತ್ತು ಈಜಿಪ್ತ್‌ನ ಔಷಧ ಕಂಪನಿ ಮೆಸರ್ಸ್ ʻಇವಾ ಫಾರ್ಮಾʼನಿಂದ ರೆಮ್ಡೆಸಿವಿರ್ 4,50,000 ವೈಯಲ್​ ಖರೀದಿಗೆ ಬೇಡಿಕೆ ಇಟ್ಟಿದೆ. ಅಮೆರಿಕದ ಗಿಲ್ಯಡ್ ಸೈನ್ಸಸ್ ಐಎನ್‌ಸಿ ಸಂಸ್ಥೆಯು ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ 75,000 ರಿಂದ 1,00,000 ಸೀಸೆಗಳನ್ನು ರವಾನಿಸುವ ನಿರೀಕ್ಷೆಯಿದೆ. ಮೇ 15ರೊಳಗಾಗಿ ಇನ್ನೂ ಒಂದು ಲಕ್ಷದಷ್ಟು ಸೀಸೆಗಳನ್ನು ಪೂರೈಸಲಿದೆ ಎಂದು ಕೇಂದ್ರ ನಿನ್ನೆ ಪ್ರಕಟಣೆಯಲ್ಲಿ ತಿಳಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.