ETV Bharat / bharat

ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್ : ಸೇಮಿಸ್​ನಲ್ಲಿ ಪಿ ವಿ ಸಿಂಧು ಪರಾಭವ

author img

By

Published : Mar 20, 2021, 9:52 PM IST

Updated : Mar 20, 2021, 10:42 PM IST

ಆರಂಭಿಕ ಟೂರ್ನಿಗಳಲ್ಲಿ ಎಡವಿದ್ದ ಸಿಂಧು ಕ್ವಾಟರ್​ ಫೈನಲ್​ನಲ್ಲಿ ಲಯಕ್ಕೆ ಮರಳಿದ್ದರು. ಅಲ್ಲದೆ ಯಮಗುಚಿ ವಿರುದ್ಧ ಮೊದಲ ಸೆಟ್ (16-21) ಸೋತರೂ, ಬಳಿಕ ಕಂಬ್ಯಾಕ್ ಮಾಡಿ ಎರಡು ಸೆಟ್​ಗಳಲ್ಲಿ 21-16, 21-19 ಅಂತರದ ಗೆಲುವು ಸಾಧಿಸಿದರು..

sindhu defeatin semis
ಸೇಮಿಸ್​ನಲ್ಲಿ ಪಿವಿ ಸಿಂಧು ಪರಾಭವ

ಹೈದರಾಬಾದ್ ​: ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನ ಸೆಮಿಫೈನಲ್​ನಲ್ಲಿ ಪಿ ವಿ ಸಿಂಧು ಥಾಯ್ಲೆಂಡ್​ನ ಪಾರ್ನ್‌ಪಾವೀ ಚೊಚುವಾಂಗ್ ವಿರುದ್ಧ ಸೋಲುಂಡು ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್​ನ 11ನೇ ಕ್ರಮಾಂಕದ ಪ್ರತಿಸ್ಪರ್ಧಿ ಚೊಚುವಾಂಗ್ ವಿರುದ್ಧ ವೇಗ ಮತ್ತು ನಿಖರತೆಯ ಮುಂದೆ ಸಿಂಧು ಆಟ ನಡೆಯಲಿಲ್ಲ. ಆರಂಭದಲ್ಲೇ ನಿಧಾನಗತಿಯ ಆಟಕ್ಕೆ ಸಿಂಧು ಒತ್ತು ನೀಡಿದ್ದರು. ಇದರ ಲಾಭ ಪಡೆದ ಚೋಚುವಾಂಗ್ ಆಕ್ರಮಣಕಾರಿ ಆಟವಾಡಿ ಆರಂಭದಲ್ಲೇ ಮೇಲುಗೈ ಸಾಧಿಸಿದರು.

ಇದರ ನಡುವೆ ಸಿಂಧು ಮೊದಲ ಸೆಟ್​ನಲ್ಲಿ ಕಂಬ್ಯಾಕ್ ಮಾಡುವ ಸೂಚನೆ ನೀಡಿದರೂ ಚೊಚುವಾಂಗ್ ಆಟದ ಮುಂದೆ ಅಂತಿಮ ಹಂತದಲ್ಲಿ ಮಂಕಾದರು. ಇನ್ನು, 2ನೇ ಸೆಟ್​ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಥಾಯ್ಲೆಂಡ್ ಆಟಗಾರ್ತಿ ಯಾವುದೇ ಹಂತದಲ್ಲೂ ಸಿಂಧುಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ.

ಪರಿಣಾಮ 43 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಪಿವಿ ಸಿಂಧು 17-21 9-21 ಅಂತರದಿಂದ ಪರಭಾವಗೊಂಡರು. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್​ನ ಅಕಾನೆ ಯಮಗುಚಿ ವಿರುದ್ಧ ಗೆಲ್ಲುವ ಮೂಲಕ ವಿವಿ ಸಿಂಧು ಸಮಿಫೈನಲ್​ಗೆ ಲಗ್ಗೆ ಇಟ್ಟಿದ್ದರು.

ಯಮಗುಚಿ ವಿರುದ್ಧ ಮೊದಲ ಸೆಟ್ (16-21) ಸೋತರೂ, ಬಳಿಕ ಕಂಬ್ಯಾಕ್ ಮಾಡಿ ಎರಡು ಸೆಟ್​ಗಳಲ್ಲಿ 21-16, 21-19 ಅಂತರದ ಗೆಲುವು ಸಾಧಿಸಿದರು. ಈ ಮೂಲಕ ಪ್ರತಿಷ್ಠಿತ ಟೂರ್ನಿಯಲ್ಲಿ ಎರಡನೇ ಬಾರಿಗೆ ಸಿಂಧು ಸೆಮಿಫೈನಲ್‌ಗೆ ಪ್ರವೇಶಿಸಿದ್ದರು.

Last Updated : Mar 20, 2021, 10:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.