ಪ್ರವಾದಿಗೆ ಅಪಮಾನ: ಅಲ್ ಖೈದಾದಿಂದ ಭಾರತದಲ್ಲಿ ಆತ್ಮಹತ್ಯಾ ಬಾಂಬ್​​ ದಾಳಿ ಬೆದರಿಕೆ!

author img

By

Published : Jun 8, 2022, 11:56 AM IST

al qaeda
ಸಾಂದರ್ಭಿಕ ಚಿತ್ರ ()

ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲಲು ಬಯಸುತ್ತೇವೆ. ನಮ್ಮ ಪ್ರವಾದಿಯನ್ನು ಅವಮಾನಿಸುವ ಧೈರ್ಯವಿರುವವರನ್ನು ಸ್ಫೋಟಿಸಲು ನಾವು ನಮ್ಮ ದೇಹ, ನಮ್ಮ ಮಕ್ಕಳ ದೇಹಗಳೊಂದಿಗೆ ಸ್ಫೋಟಕಗಳನ್ನು ಸಿದ್ಧಪಡಿಸಿದ್ದೇವೆ. ಅಂತವರು ಈಗ ದೆಹಲಿ, ಉತ್ತರ ಪ್ರದೇಶ, ಗುಜರಾತ್ ಮತ್ತು ಮುಂಬೈನಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ನವದೆಹಲಿ: ಭಾರತದಲ್ಲಿ ಆತ್ಮಹತ್ಯಾ ಬಾಂಬ್​​ ದಾಳಿ ನಡೆಸುವುದಾಗಿ ಅಲ್ ಖೈದಾ ಉಗ್ರಗಾಮಿ ಸಂಘಟನೆ ಬೆದರಿಕೆ ಹಾಕಿದೆ. ಗುಜರಾತ್, ಉತ್ತರ ಪ್ರದೇಶ, ಮುಂಬೈ ಮತ್ತು ದೆಹಲಿಯಲ್ಲಿ ಆತ್ಮಹುತಿ ಮಾಡಿಕೊಳ್ಳಲು ಸಿದ್ಧ ಎಂದು ಅಲ್ ಖೈದಾ ಜೂ.6 ರಂದು ಹೊರಡಿಸಿದ ತನ್ನ ಅಧಿಕೃತ ಪತ್ರದಲ್ಲಿ ತಿಳಿಸಿದೆ.

ಜ್ಞಾನವಾಪಿ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ 10 ದಿನಗಳ ಹಿಂದೆ ಸುದ್ದಿ ವಾಹಿನಿಯ ಸಂವಾದ ಒಂದರಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್‌ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು.

ಪ್ರವಾದಿಯ ಗೌರವಕ್ಕಾಗಿ ಆತ್ಮಹತ್ಯಾ ದಾಳಿ ನಡೆಸುವುದಾಗಿ ಅಲ್ ಖೈದಾ ಹೇಳಿದೆ. ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲಲು ಬಯಸುತ್ತೇವೆ. ನಮ್ಮ ಪ್ರವಾದಿಯನ್ನು ಅವಮಾನಿಸುವ ಧೈರ್ಯವಿರುವವರನ್ನು ಸ್ಫೋಟಿಸಲು ನಾವು ನಮ್ಮ ದೇಹ, ನಮ್ಮ ಮಕ್ಕಳ ದೇಹಗಳೊಂದಿಗೆ ಸ್ಫೋಟಕಗಳನ್ನು ಸಿದ್ಧಪಡಿಸಿದ್ದೇವೆ. ಅಂತವರು ಈಗ ದೆಹಲಿ, ಉತ್ತರ ಪ್ರದೇಶ, ಗುಜರಾತ್ ಮತ್ತು ಮುಂಬೈನಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ನೂಪುರ್ ಶರ್ಮಾ ಅವರ ಹೇಳಿಕೆಗಳು ಜಗತ್ತಿನಾದ್ಯಂತ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿವೆ. ಯಾವುದೇ ಕ್ಷಮೆ ಇರುವುದಿಲ್ಲ. ಈ ವಿಷಯವನ್ನು ಯಾವುದೇ ಖಂಡನೆ ಅಥವಾ ದುಃಖದ ಪದದಿಂದ ಮುಚ್ಚಲಾಗುವುದಿಲ್ಲ. ಮುಂದೆ ನಾವು ಪ್ರವಾದಿಯವರ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಅಲ್ ಖೈದಾ ಹೇಳಿದೆ.

ನೂಪುರ್ ಶರ್ಮಾ ಕುಟುಂಬಕ್ಕೆ ಭದ್ರತೆ: ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಉಚ್ಛಾಟಿತರಾದ ನೂಪುರ್ ಶರ್ಮಾ ಮತ್ತು ಅವರ ಕುಟುಂಬಕ್ಕೆ ದೆಹಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಇವರಿಗೆ ಜೀವ ಬೆದರಿಕೆ ಕರೆ ಹಿನ್ನೆಲೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ತನಗೆ ಬರುತ್ತಿರುವ ಬೆದರಿಕೆಗಳನ್ನು ಉಲ್ಲೇಖಿಸಿ ಭದ್ರತೆ ಒದಗಿಸುವಂತೆ ಶರ್ಮಾ ಪೊಲೀಸರಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ಕಿರುಕುಳ, ಬೆದರಿಕೆ: ನೂಪುರ್​ ಶರ್ಮಾ ಕುಟುಂಬಕ್ಕೆ ದೆಹಲಿ ಪೊಲೀಸ್​ ಭದ್ರತೆ!

ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳನ್ನು ಹಲವು ಮುಸ್ಲಿಂ ರಾಷ್ಟ್ರಗಳು ತೀವ್ರವಾಗಿ ಟೀಕಿಸಿವೆ. ಏತನ್ಮಧ್ಯೆ, ಬಿಜೆಪಿ ಭಾನುವಾರ ಶರ್ಮಾ ಅವರನ್ನು ಅಮಾನತುಗೊಳಿಸಿದೆ ಮತ್ತು ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಉಚ್ಚಾಟಿಸಿದೆ. ಕುವೈತ್, ಕತಾರ್ ಮತ್ತು ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳಿಗೆ ಮುಸ್ಲಿಂ ಗುಂಪುಗಳ ತೀಕ್ಷ್ಣ ಪ್ರತಿಕ್ರಿಯೆ ನಡುವೆ, ಬಿಜೆಪಿ ಹೇಳಿಕೆಯಲ್ಲಿ ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ವ್ಯಕ್ತಿಯನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತವೆ ಎಂದು ಹೇಳಿಕೆ ನೀಡಿತ್ತು.

ಇದನ್ನೂ ಓದಿ: ವಿವಾದಿತ ಹೇಳಿಕೆ: ಬಿಜೆಪಿಯಿಂದ ನೂಪುರ್​ ಶರ್ಮಾ, ನವೀನ್​ ಜಿಂದಾಲ್ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.