ETV Bharat / bharat

ಏರ್​ ಇಂಡಿಯಾ ವಿಮಾನದ ಪೈಲಟ್, ನಾಲ್ವರು ಸಿಬ್ಬಂದಿಗೆ ಶೋಕಾಸ್​ ನೋಟಿಸ್​ ಜಾರಿ

author img

By

Published : Jan 7, 2023, 10:47 PM IST

ಏರ್​ ಇಂಡಿಯಾ ವಿಮಾನದಲ್ಲಿ ಪುರುಷ ಪ್ರಯಾಣಿಕನೋರ್ವ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ವಿಮಾನದ ಪೈಲಟ್ ಮತ್ತು ನಾಲ್ವರು ಸಿಬ್ಬಂದಿಗೆ ಟಾಟಾ ಗ್ರೂಪ್ ಏರ್‌ಲೈನ್‌ನ ಸಿಇಒ ಶೋಕಾಸ್​ ನೋಟಿಸ್​ ಜಾರಿ ಮಾಡಿದ್ದಾರೆ.

air-india-issues-show-cause-notices-to-four-cabin-crew-and-pilot
ಏರ್​ ಇಂಡಿಯಾ ವಿಮಾನದ ಪೈಲಟ್, ನಾಲ್ವರು ಸಿಬ್ಬಂದಿಗೆ ಶೋಕಸ್​ ನೋಟಿಸ್​ ಜಾರಿ

ಮುಂಬೈ (ಮಹಾರಾಷ್ಟ್ರ): ನ್ಯೂಯಾರ್ಕ್‌ನಿಂದ ದೆಹಲಿ ಬರುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಪುರುಷ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಟಾ ಗ್ರೂಪ್ ವಿಮಾನಯಾನ ಸಂಸ್ಥೆಯು ವಿಮಾನದ ಪೈಲಟ್ ಮತ್ತು ನಾಲ್ವರು ಸಿಬ್ಬಂದಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ. ಅಲ್ಲದೇ, ಈ ಘಟನೆಯನ್ನು ವಿಮಾನದ ಸಿಬ್ಬಂದಿ ಇನ್ನೂ ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಸಿಇಒ ಕ್ಯಾಂಬೆಲ್ ವಿಲ್ಸನ್ ಹೇಳಿದ್ದಾರೆ.

ಕಳೆದ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್​ ಇಂಡಿಯಾ (AI-102) ವಿಮಾನದಲ್ಲಿ 70 ವರ್ಷದ ಮಹಿಳೆಯ ಮೇಲೆ ಸಹ ಪ್ರಯಾಣಿಕರ ಶಂಕರ್ ಮಿಶ್ರಾ ಎಂಬಾತ ಮೂತ್ರ ವಿಸರ್ಜನೆ ಮಾಡಿ ದುರ್ವರ್ತನೆ ತೋರಿದ್ದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಲ್ಲದೇ, ವಿಮಾನಯಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವೆ ಶಂಕರ್ ಮಿಶ್ರಾನನ್ನು ಶುಕ್ರವಾರ ಪತ್ತೆ ಹಚ್ಚಿ ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿ: ಏರ್​ ಇಂಡಿಯಾದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ

ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಮಿಶ್ರಾ ಕುಡಿದ ನಶೆಯಲ್ಲಿ ಸಹ ಪ್ರಯಾಣಿಕ ಮಹಿಳೆ ಮೇಲೆ ಈ ಮೂತ್ರ ವಿಸರ್ಜನೆ ಮಾಡಿ ದುಷ್ಕೃತ್ಯ ಎಸಗಿದ್ದ. ಈ ವೇಳೆ ವಿಮಾನದ ಸಿಬ್ಬಂದಿ ಸಂತ್ರಸ್ತೆಯ ನೆರವಿಗೆ ಬಂದಿಲ್ಲ ಎಂಬ ಆರೋಪ ಸಹ ಕೇಳಿ ಬಂದಿತ್ತು. ಹೀಗಾಗಿ ಏರ್ ಇಂಡಿಯಾದ ಒಡೆತನವನ್ನು ಹೊಂದಿರುವ ಟಾಟಾ ಗ್ರೂಪ್​, ನಾಲ್ವರು ಕ್ಯಾಬಿನ್ ಸಿಬ್ಬಂದಿ ಮತ್ತು ವಿಮಾನದ ಪೈಲಟ್​ಗೆ​ ಬಿಸಿ ಮುಟ್ಟಿಸಲು ಮುಂದಾಗಿದೆ.

ಈ ಕುರಿತು ಟಾಟಾ ಗ್ರೂಪ್ ಏರ್‌ಲೈನ್‌ನ ಸಿಇಒ ಕ್ಯಾಂಬೆಲ್ ವಿಲ್ಸನ್ ಹೇಳಿಕೆ ಬಿಡುಗಡೆ ಮಾಡಿದ್ದು, ಅಂದು ಮಹಿಳೆಯೊಂದಿಗೆ ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆರೋಪಿಯ ವರ್ತನೆಯನ್ನು ನಿಯಂತ್ರಿಸಲು ವಿಫಲವಾದ ಕಾರಣಕ್ಕೆ Cambell Wilson ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿ ಮತ್ತು ಪೈಲಟ್‌ಗೆ ಶೋಕಾಸ್ ನೋಟಿಸ್‌ ನೀಡಲಾಗಿದೆ. ಏರ್‌ಲೈನ್‌ನಿಂದ ಡಿ-ರೋಸ್ಟರ್ (ಹಾರಾಟದ ಕರ್ತವ್ಯದಿಂದ ತೆಗೆದುಹಾಕಲಾಗಿದೆ) ಮಾಡಲಾಗಿದ್ದು, ಬಾಕಿ ಉಳಿದಿರುವ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಬದಲಿ ಸೀಟಿಗಾಗಿ ಎರಡು ಗಂಟೆ ಕಾದಿದ್ದ ಸಂತ್ರಸ್ತೆ: ನ.26ರಂದು ವಿಮಾಣದಲ್ಲಿ ಪ್ರಯಾಣಿಸುತ್ತಿದ್ದ ಶಂಕರ್ ಮಿಶ್ರಾ ಕುಡಿದ ನಶೆಯಲ್ಲಿದ್ದ. ಮಧ್ಯಾಹ್ನದ ಊಟದ ವಿಮಾನದ ಲೈಟ್‌ಗಳನ್ನು ಆಫ್ ಮಾಡಲಾಗಿತ್ತು. ಇತ್ತ, ಕುಡಿದ ಅಮಲಿನಲ್ಲಿದ್ದ ಆರೋಪಿ ಮಹಿಳೆಯ ಸೀಟ್​ ಕಡೆ ತೆರಳಿ, ಆ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆರೋಪಿ ಮೂತ್ರ ವಿಸರ್ಜನೆ ಮಾಡಿದ್ದರಿಂದ ಮಹಿಳೆ ಒದ್ದೆಯಾಗಿದ್ದರು. ಈ ಸಮಯದಲ್ಲಿ ಇಬ್ಬರು ಗಗನಸಖಿಯರು ಮಾತ್ರ ಆಕೆಯ ಸಹಾಯ ಬಂದಿದ್ದರು ಎಂದು ಅಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸುಗತ ಭಟ್ಟಾಚಾರ್ಯ ಎಂಬುವವರು ತಿಳಿಸಿದ್ದರು.

ಆದರೆ, ವಿಮಾನದ ಕ್ಯಾಪ್ಟನ್ ಆಗಿರುವ ಪೈಲಟ್​​ ಸಂತ್ರಸ್ತೆಗೆ ಬೇರೆಯೊಂದು ಸೀಟಿನ ವ್ಯವಸ್ಥೆ ಮಾಡಲು ಎರಡು ಗಂಟೆಗಳ ಕಾಲ ಆಕೆಯುನ್ನು ಕಾಯುವಂತೆ ಮಾಡಿದ್ದರು. ಅಲ್ಲದೇ, ಇದಕ್ಕೂ ಮುನ್ನ 20 ನಿಮಿಷಗಳ ಕಾಲ ಸೀಟು ಸಿಗದೆ ಆಕೆ ನಿಂತುಕೊಂಡೇ ಇದ್ದರು. ನಂತರ ಸಿಬ್ಬಂದಿ ತಾವು ಬಳಸುವ ಸಣ್ಣ ಸೀಟನ್ನು ಮಹಿಳೆಗೆ ನೀಡಿದ್ದರು. ಇಷ್ಟೇ ಅಲ್ಲ, ಆರೋಪಿ ಮೂತ್ರ ವಿಸರ್ಜನೆ ಮಾಡಿದ್ದ ಸೀಟಿಗೆ ಮರಳಲು ಆ ಮಹಿಳೆಗೆ ಸೂಚನೆ ನೀಡಲಾಗಿತ್ತು. ಆದರೆ, ಇದಕ್ಕೆ ಆ ಮಹಿಳೆ ನಿರಾಕರಿಸಿದಾಗ ಉಳಿದ ಪ್ರಯಾಣಕ್ಕಾಗಿ ಬದಲಿ ಸೀಟು ನೀಡಲಾಗಿತ್ತು ಎಂದು ಏರ್​ ಇಂಡಿಯಾ ಸಂಸ್ಥೆಗೆ ಬರೆದ ಪತ್ರದಲ್ಲಿ ಸುಗತ ಭಟ್ಟಾಚಾರ್ಯ ಉಲ್ಲೇಖಿಸಿದ್ದರು.

ಇದನ್ನೂ ಓದಿ: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಕೇಸ್​: 4 ಗ್ಲಾಸ್ ವಿಸ್ಕಿ ಕುಡಿದು ತೇಲಾಡುತ್ತಿದ್ದ ಆರೋಪಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.