ETV Bharat / bharat

ಹಿಜಾಬ್ ತೀರ್ಪಿನ ವಿರುದ್ಧ ಅಸಾದುದ್ದೀನ್ ಓವೈಸಿ ಅಸಮಾಧಾನ.. 15 ಅಂಶಗಳ ಪಟ್ಟಿ ಮಾಡಿದ ಸಂಸದ

author img

By

Published : Mar 15, 2022, 1:29 PM IST

ಕರ್ನಾಟಕ ಹೈಕೋರ್ಟ್ ತೀರ್ಪಿನ ವಿಚಾರವಾಗಿ ಎಐಎಂಐಎಂ ನಾಯಕ ಮತ್ತು ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದು, 15 ಅಂಶಗಳನ್ನು ಟ್ವೀಟ್ ಮಾಡಿ, ಅಸಮಾಧಾನ ಹೊರಹಾಕಿದ್ದಾರೆ.

aimim chief asaduddin owaisi disagree with Karnataka High Court's judgement on hijab
ಹಿಜಾಬ್ ತೀರ್ಪಿನ ವಿರುದ್ಧ 15 ಅಂಶಗಳ ಮೂಲಕ ಅಸಾದುದ್ದೀನ್ ಓವೈಸಿ ಅಸಮಾಧಾನ

ಹೈದರಾಬಾದ್(ತೆಲಂಗಾಣ): ಕರ್ನಾಟದಲ್ಲಿ ಹಿಜಾಬ್ ವಿಚಾರ ಅಂತಾರಾಷ್ಟ್ರೀಯ ಮಟ್ಟದ ಚರ್ಚೆಯಾಗಿತ್ತು. ಈಗ ಕರ್ನಾಟಕ ಹೈಕೋರ್ಟ್ ಹಿಜಾಬ್​ ವಿರುದ್ಧದ ತೀರ್ಪು ನೀಡುತ್ತಿದ್ದಂತೆ ಅನೇಕ ರಾಜಕೀಯ ಗಣ್ಯರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

  • 1. I disagree with Karnataka High Court's judgement on #hijab. It’s my right to disagree with the judgement & I hope that petitioners appeal before SC

    2. I also hope that not only @AIMPLB_Official but also organisations of other religious groups appeal this judgement...

    — Asaduddin Owaisi (@asadowaisi) March 15, 2022 " class="align-text-top noRightClick twitterSection" data=" ">

ಈಗ ಎಐಎಂಐಎಂ ನಾಯಕ ಮತ್ತು ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸುಮಾರು 15 ಟ್ವೀಟ್​ಗಳನ್ನು ಮಾಡಿರುವ ಅಸಾದುದ್ದೀನ್ ಓವೈಸಿ ಹೈಕೋರ್ಟ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವುಗಳು ಇಲ್ಲಿವೆ.

  1. ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ನಾನು ಒಪ್ಪುವುದಿಲ್ಲ. ತೀರ್ಪನ್ನು ಒಪ್ಪದಿರುವುದು ನನ್ನ ಹಕ್ಕು ಮತ್ತು ಅರ್ಜಿದಾರರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.
  2. ಕರ್ನಾಟಕ ಹೈಕೋರ್ಟ್​ನ ತೀರ್ಪು ಧರ್ಮ, ಸಂಸ್ಕೃತಿ, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳನ್ನು ನಿರಾಕರಿಸುತ್ತದೆ. ಆದ್ದರಿಂದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾತ್ರವಲ್ಲದೇ ಇತರ ಧಾರ್ಮಿಕ ಸಂಘಟನೆಗಳೂ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತವೆ ಎಂದು ನಾನು ಭಾವಿಸುತ್ತೇನೆ.
  3. ಸಂವಿಧಾನದ ಪ್ರಸ್ತಾವನೆಯು ವ್ಯಕ್ತಿಗೆ ಆಲೋಚನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವಿದೆ ಎಂದು ಹೇಳುತ್ತದೆ. ನನ್ನ ನಂಬಿಕೆಯ ಪ್ರಕಾರ ನನ್ನ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ ಎಂದು ನಾನು ಭಾವಿಸಿದರೆ, ಅದನ್ನು ವ್ಯಕ್ತಪಡಿಸಲು ನನಗೆ ಹಕ್ಕಿದೆ. ಧರ್ಮನಿಷ್ಠ ಮುಸಲ್ಮಾನರಿಗೆ ಹಿಜಾಬ್ ಕೂಡ ಅನಿವಾರ್ಯವಾಗಿದೆ.
  4. ಅಗತ್ಯವಾದ ಧಾರ್ಮಿಕತೆಯನ್ನು ಪರೀಕ್ಷಿಸುವ ಸಮಯ ಇದಾಗಿದೆ. ಒಬ್ಬ ಧರ್ಮನಿಷ್ಠ ವ್ಯಕ್ತಿಗೆ, ಎಲ್ಲವೂ ಅತ್ಯಗತ್ಯ. ಶ್ರದ್ಧಾವಂತ ಹಿಂದೂ ಬ್ರಾಹ್ಮಣರಿಗೆ ಜನಿವಾರ ಅಗತ್ಯವಿದ್ದಂತೆ, ಬ್ರಾಹ್ಮಣೇತರರಿಗೆ ಅದು ಇಲ್ಲದಿರಬಹುದು. ನ್ಯಾಯಾಧೀಶರು ಇಂತಹ ಅಗತ್ಯವನ್ನು ನಿರ್ಧರಿಸುವುದು ಅಸಂಬದ್ಧವಾಗಿದೆ.
  5. ಯಾವುದೇ ಒಂದು ಧರ್ಮದ ಜನರೇ, ಅವರದ್ದೇ ಧರ್ಮದಲ್ಲಿರುವ ಅಗತ್ಯಗಳನ್ನು ನಿರ್ಧರಿಸುವ ಹಕ್ಕನ್ನು ಹೊಂದಿಲ್ಲ. ಇದು ವ್ಯಕ್ತಿ ಮತ್ತು ದೇವರ ನಡುವೆ ಇದೆ. ಇಂತಹ ವಿಚಾರದಲ್ಲಿ ಬೇರೆಯವರಿಗೆ ಹಾನಿಯಾದರೆ ಮಾತ್ರ ಧಾರ್ಮಿಕ ಹಕ್ಕುಗಳಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಕು. ಹಿಜಾಬ್ ಯಾರಿಗೂ ಹಾನಿ ಮಾಡುವುದಿಲ್ಲ.
  6. ಹಿಜಾಬ್ ಅನ್ನು ನಿಷೇಧಿಸುವುದರಿಂದ ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಖಂಡಿತವಾಗಿಯೂ ಹಾನಿಯಾಗುತ್ತದೆ. ಏಕೆಂದರೆ ಅವರು ಹಿಜಾಬ್ ವಿಚಾರವಾಗಿ ಶಿಕ್ಷಣವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ.
  7. ಸಮವಸ್ತ್ರಗಳು ಹೇಗೆ ಸಮಾನತೆಯನ್ನು ತರುತ್ತವೆ?, ಯಾವ ವಿದ್ಯಾರ್ಥಿ ಬಡಕುಟುಂಬದಿಂದ ಬಂದಿದ್ದಾನೆ?. ಯಾವ ವಿದ್ಯಾರ್ಥಿ ಶ್ರೀಮಂತ ಕುಟುಂಬದಿಂದ ಬಂದಿದ್ದಾನೆ ಎಂಬುದು ಗೊತ್ತಾಗುವುದಿಲ್ಲವೇ? , ಹೆಸರುಗಳಲ್ಲಿ ಅವರವರ ಜಾತಿಗಳು ಗೊತ್ತಾಗುತ್ತದೆ. ಹೇಗೆ ಸಮಾನತೆ ಬರುತ್ತದೆ?
  8. ಶಿಕ್ಷಕರು ತಾರತಮ್ಯ ಮಾಡುವುದನ್ನು ತಡೆಯಬಹುದು, ಸಮವಸ್ತ್ರ ಅವಶ್ಯಕತೆ ಇಲ್ಲ. ವಿವಿಧ ರಾಷ್ಟ್ರಗಳನ್ನು ವೈವಿಧ್ಯತೆ ರಕ್ಷಿಸಲು, ಧರ್ಮಕ್ಕೆ ಅನುಗುಣವಾಗಿ ಸಮವಸ್ತ್ರಗಳನ್ನು ನೀಡಲಾಗುತ್ತಿದೆ.
  9. ಐರ್ಲೆಂಡ್ ಸರ್ಕಾರವು ಹಿಜಾಬ್ ಮತ್ತು ಸಿಖ್ಖರು ಧರಿಸುವ ಟರ್ಬನ್​ಗೆ ಅನುಮತಿ ನೀಡಲು ಸಮವಸ್ತ್ರದ ನಿಯಮಗಳನ್ನ ಬದಲಾವಣೆ ಮಾಡಿದೆ. ಈ ವೇಳೆ ಮೋದಿ ಸರ್ಕಾರ ಐರ್ಲೆಂಡ್ ನಿರ್ಧಾರವನ್ನು ಸ್ವಾಗತ ಮಾಡಿತ್ತು. ಹಾಗಾದರೆ ಸ್ವದೇಶದಲ್ಲಿ ಮತ್ತು ವಿದೇಶದಲ್ಲಿ ಏಕೆ ಎರಡು ಮಾನದಂಡಗಳು?
  10. ಮೊದಲನೆಯದಾಗಿ, ಸರ್ಕಾರವು ಅಸ್ತಿತ್ವದಲ್ಲಿಲ್ಲದ ಸಮಸ್ಯೆ ಸೃಷ್ಟಿಸಿದೆ. ಮಕ್ಕಳು ಹಿಜಾಬ್, ಬಳೆ ಇತ್ಯಾದಿ ಧರಿಸಿ ಶಾಲೆಗೆ ಹೋಗುತ್ತಿದ್ದರು. ಎರಡನೆಯದಾಗಿ, ಹಿಂಸಾಚಾರವನ್ನು ಸರ್ಕಾರ ಪ್ರಚೋದಿಸಿದೆ. ಕೇಸರಿ ಪೇಟಗಳನ್ನು ಧರಿಸಿ, ಪ್ರತಿಭಟನೆಗಳನ್ನು ನಡೆಸಲಾಗಿದೆ.
  11. ಕೇಸರಿ ಪೇಟಗಳು ಅಗತ್ಯವೇ? ಅಥವಾ ಹಿಜಾಬ್‌ಗೆ ಪ್ರತಿಕ್ರಿಯೆಯಾಗಿ ಬಳಸಲಾಗಿದೆಯೇ, ಸರ್ಕಾರ ಮತ್ತು ಹೈಕೋರ್ಟ್ ಮೂಲ ಹಕ್ಕುಗಳನ್ನು ನಿರಾಕರಿಸಿವೆ. ಮಾಧ್ಯಮಗಳು, ಪೊಲೀಸರು ಮತ್ತು ಶಾಲಾ ಆಡಳಿತ ಮಂಡಳಿಗಳು ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಿರುಕುಳ ನೀಡುವುದನ್ನು ನಾವು ನೋಡಿದ್ದೇವೆ. ಮಕ್ಕಳು ಪರೀಕ್ಷೆ ಬರೆಯುವುದನ್ನು ಸಹ ನಿಷೇಧಿಸಲಾಗಿದೆ. ಇದು ನಾಗರಿಕ ಹಕ್ಕುಗಳ ಸಾಮೂಹಿಕ ಉಲ್ಲಂಘನೆಯಾಗಿದೆ.
  12. ಹಿಜಾಬ್ ವಿಚಾರದಲ್ಲಿ ಧರ್ಮವನ್ನು ಗುರಿಯಾಗಿಸಲಾಗಿದೆ ಮತ್ತು ಧಾರ್ಮಿಕ ಆಚರಣೆಯನ್ನು ನಿಷೇಧಿಸಲಾಗಿದೆ. ಸಂವಿಧಾನ ಆರ್ಟಿಕಲ್ 15ರ ಪ್ರಕಾರ ಧರ್ಮದ ಆಧಾರದ ಮೇಲೆ ತಾರತಮ್ಯ ನಿಷೇಧಿಸಲಾಗುತ್ತದೆ. ಇದು ಉಲ್ಲಂಘನೆಯಲ್ಲವೇ? ಸಂಕ್ಷಿಪ್ತವಾಗಿ ಹೈಕೋರ್ಟ್​ ಆದೇಶವು ಮಕ್ಕಳನ್ನು ಶಿಕ್ಷಣ ಮತ್ತು ಅಲ್ಲಾನ ಆಜ್ಞೆಗಳ ನಡುವೆ ಆಯ್ಕೆ ಮಾಡಲು ಒತ್ತಾಯಿಸಿದೆ.
  13. ಮುಸ್ಲಿಮರಿಗೆ ಶಿಕ್ಷಣ ಪಡೆಯುವುದು ಅಲ್ಲಾಹ್​​ನ ಆಜ್ಞೆಯಾಗಿದೆ ಮತ್ತು ಅಲ್ಲಾಹ್​ನ ಕಟ್ಟುಪಾಡುಗಳನ್ನು ಅನುಸರಿಸಬೇಕಿದೆ. ಈಗ ವಿದ್ಯಾರ್ಥಿನಿಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಂಬಿಕೆಗಳು ಇರದ ಅಭಿವ್ಯಕ್ತಿಯಿಂದ ಏನು ಉಳಿಯುತ್ತದೆ?
  14. ಹಿಜಾಬ್ ಧರಿಸಿರುವ ಮಹಿಳೆಯರಿಗೆ ಕಿರುಕುಳ ಮುಂದುವರೆಯುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಬ್ಯಾಂಕ್‌ಗಳು, ಆಸ್ಪತ್ರೆಗಳು, ಸಾರ್ವಜನಿಕ ಸಾರಿಗೆ ಇತ್ಯಾದಿಗಳಲ್ಲಿ ಹಿಜಾಬ್ ಧರಿಸಿದ ಮಹಿಳೆಯರ ವಿರುದ್ಧ ಕಿರುಕುಳ ನಡೆಯುವುದಿಲ್ಲ ಎಂದು ಭಾವಿಸುತ್ತೇನೆ.
  15. ಪೂರ್ಣ ತೀರ್ಪಿನ ಪ್ರತಿ ಲಭ್ಯವಾದಾಗ ಯಾರಾದರೂ ಹೆಚ್ಚು ವಿವರವಾದ ಪ್ರತಿಕ್ರಿಯೆಯನ್ನು ನೀಡಬಹುದು. ಸದ್ಯಕ್ಕೆ ಈ ಟ್ವೀಟ್ ನ್ಯಾಯಾಲಯದಲ್ಲಿನ ಮೌಖಿಕ ಆದೇಶವನ್ನು ಆಧರಿಸಿದೆ.

ಇದನ್ನೂ ಓದಿ: ಹಿಜಾಬ್ ನಿರ್ಬಂಧ ಪ್ರಶ್ನಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿದ ತ್ರಿಸದಸ್ಯ ಪೀಠ: ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.