ETV Bharat / bharat

ಏನಿದು ವಿಸ್ಮಯ : ಮೊಟ್ಟೆಯಿಡಲು ಒಡಿಶಾದ ರುಶಿಕುಲ್ಯ ಬೀಚ್​ಗೆ ಬಂದ ಆಲಿವ್ ರಿಡ್ಲೆ ಆಮೆಗಳು

author img

By

Published : Mar 29, 2022, 12:09 PM IST

ಲಕ್ಷಾಂತರ ಆಲಿವ್ ರಿಡ್ಲಿ ಆಮೆಗಳು ಮೊಟ್ಟೆಯಿಡಲು ಒಡಿಶಾದ ಕೇಂದ್ರಪಾರ ಜಿಲ್ಲೆಯ ಗಹಿರ್ಮತಾ ಸಮುದ್ರ ಅಭಯಾರಣ್ಯ ಸುಮಾರು 100 ಕಿಲೋಮೀಟರ್ ದೂರದಲ್ಲಿ ರುಶಿಕುಲ್ಯದ ಗೋಖರ್ಕುಡ ಮತ್ತು ಪೊಡಂಪೇಟಾ ದ್ವೀಪಕ್ಕೆ ಆಗಮಿಸಿವೆ..

After Gahirmatha, Olive Ridley turtles arrive at Rushikulya, odisha
ಮೊಟ್ಟೆಯಿಡಲು ಒಡಿಶಾದ ರುಶಿಕುಲ್ಯದ ಸಮೀಪದ ದ್ವೀಪಗಳಿಗೆ ಆಗಮಿಸಿದ ಆಲಿವ್ ರಿಡ್ಲೆ ಆಮೆಗಳು

ಬೆರ್ಹಾಂಪುರ,ಒಡಿಶಾ : ಪ್ರಕೃತಿಯ ವಿಸ್ಮಯಗಳು ಒಂದೆರೆಡಲ್ಲ. ಪ್ರಾಣಿಗಳು ಮತ್ತು ಪಕ್ಷಿಗಳು ಬದುಕು ಕೆಲವೊಮ್ಮೆ ನಿಗೂಢ ಮತ್ತು ಅಚ್ಚರಿ ಉಂಟು ಮಾಡುತ್ತದೆ. ಅಳಿವಿನಂಚಿನಲ್ಲಿರುವ ಕಡಲಾಮೆಗಳಾದ ಆಲಿವ್ ರಿಡ್ಲೆ ಆಮೆಗಳು ಗರ್ಹಿಮತಾಗೆ ಅಭಯಾರಣ್ಯಕ್ಕೆ ಆಗಮಿಸಿ, ಮೊಟ್ಟೆಯಿಡುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಸುಮಾರು ಮೂರು ದಿನಗಳಿಂದ ಈ ಪ್ರಕ್ರಿಯೆ ಆರಂಭವಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ಮುಂದುವರೆಯಲಿದೆ.

ಸುಮಾರು 5 ಲಕ್ಷ ಆಲಿವ್ ರಿಡ್ಲಿ ಆಮೆಗಳು ಒಡಿಶಾದ ಕೇಂದ್ರಪಾರ ಜಿಲ್ಲೆಯ ಗಹಿರ್ಮತಾ ಸಮುದ್ರ ಅಭಯಾರಣ್ಯ ಸುಮಾರು 100 ಕಿಲೋಮೀಟರ್ ದೂರದಲ್ಲಿ ರುಶಿಕುಲ್ಯದ ಗೋಖರ್ಕುಡ ಮತ್ತು ಪೊಡಂಪೇಟಾ ದ್ವೀಪಕ್ಕೆ ಆಗಮಿಸಿವೆ. ಮಾರ್ಚ್ 25ರಂದು 2.4 ಲಕ್ಷ ಆಮೆಗಳು, ಮಾರ್ಚ್ 26ರಂದು 1.85 ಲಕ್ಷ ಆಮೆಗಳು, ಮಾರ್ಚ್ 27ರಂದು 65,000 ಆಮೆಗಳು ಮೊಟ್ಟೆಯಿಡಲು ದ್ವೀಪ ಪ್ರದೇಶಕ್ಕೆ ಬಂದಿವೆ. ಈ ಪ್ರಕ್ರಿಯೆಯು ಇನ್ನೂ ನಾಲ್ಕೈದು ದಿನಗಳವರೆಗೆ ಮುಂದುವರಿಯುತ್ತದೆ ಎನ್ನಲಾಗುತ್ತಿದೆ.

  • The natures pageant-mass nesting of Olive Ridleys-continues at Odisha coast. The sight unparalleled 💕 pic.twitter.com/JbCVEYzMqq

    — Susanta Nanda IFS (@susantananda3) March 28, 2022 " class="align-text-top noRightClick twitterSection" data=" ">

ಅಳಿವಿನಂಚಿನಲ್ಲಿರುವ ಪ್ರಬೇಧಗಳಲ್ಲಿ ಆಲಿವ್ ರಿಡ್ಲಿ ಆಮೆಗಳನ್ನು ಪಟ್ಟಿ ಮಾಡಲಾಗಿದ್ದು, ಇವುಗಳನ್ನು ಸಂರಕ್ಷಿಸುವ ಉದ್ದೇಶದಿಂದ 1997ರಲ್ಲಿ ಸರ್ಕಾರವು ಗಹಿರ್ಮತಾದ 1,435 ಚದರ ಕಿ.ಮೀ ವ್ಯಾಪ್ತಿಯನ್ನು ಸಮುದ್ರ ಅಭಯಾರಣ್ಯವೆಂದು ಘೋಷಿಸಿದೆ. ಸುಮಾರು 1 ಸಾವಿರ ಕಿಲೋಮೀಟರ್​​ ದೂರದಿಂದ ಬರುವ ಆಲಿವ್ ರಿಡ್ಲೆ ಆಮೆಗಳು ಇಲ್ಲಿ ಮೊಟ್ಟೆಯಿಡುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಹಲವು ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಸಂಪ್ರದಾಯದಲ್ಲಿ ನವ ಜೀವನಕ್ಕೆ ಕಾಲಿಟ್ಟ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.