ETV Bharat / bharat

ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ: ಎಸಿಪಿ ಪತ್ನಿ, ಮಗ, ಸೊಸೆ ಸಾವು

author img

By

Published : Oct 25, 2021, 2:16 PM IST

ಭೀಕರ ರಸ್ತೆ ಅಪಘಾತದಲ್ಲಿ ಎಸಿಪಿ ಪತ್ನಿ ಮತ್ತು ಎಸಿಪಿ ಸಹೋದರನ ಮಗ ಹಾಗು ಸೊಸೆ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೆಡ್ಚಲ್​ ಜಿಲ್ಲೆಯಲ್ಲಿ ನಡೆದಿದೆ.

ACP family killed, ACP family killed in road accident, ACP family killed in road accident at Medchal, Medchal crime news, ಭೀಕರ ರಸ್ತೆ ಅಪಘಾತ, ಭೀಕರ ರಸ್ತೆ ಅಪಘಾತದಲ್ಲಿ ಎಸಿಪಿ ಕುಟುಂಬ ಸಾವು, ಮೆಡ್ಚಲ್​ನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಎಸಿಪಿ ಕುಟುಂಬ ಸಾವು, ಮೆಡ್ಚಲ್​ ಅಪರಾಧ ಸುದ್ದಿ,
ಭೀಕರ ರಸ್ತೆ ಅಪಘಾತ... ಎಸಿಪಿ ಪತ್ನಿ, ಮಗ, ಸೊಸೆ ಸಾವು!

ಮೆಡ್ಚಲ್​: ಹೈದರಾಬಾದ್​ ಸೈಬರ್​ ಕ್ರೈಂ ಬ್ರಾಂಚ್​ ಎಸಿಪಿ ಕುಟುಂಬದ ಮೂವರು ಸದಸ್ಯರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ಕಿಸರ ತಾಲೂಕಿನ ಯಾದ್ಗಾರ್​ಪಲ್ಲಿಯ ಔಟರ್​ ರಿಂಗ್​ ರೋಡ್​ನಲ್ಲಿ ನಡೆದಿದೆ.

ಹೈದರಾಬಾದ್​ ಸೈಬರ್​ ಕ್ರೈಂ ಬ್ರಾಂಚ್​ ಎಸಿಪಿ ಕೆವಿಯಂ ಪ್ರಸಾದ್​ ಕುಟುಂಬಸ್ಥರು ಪ್ರಕಾಶಂ ಜಿಲ್ಲೆಯ ಚಿರಾಲದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಮದುವೆ ಕಾರ್ಯಕ್ರಮಕ್ಕೆ ಹಾಜರಾಗಿ ವಾಪಸ್ಸಾಗುತ್ತಿದ್ದಾಗ ಎಸಿಪಿ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಯಾದ್ಗಾರ್​ಪಲ್ಲಿಯ ಔಟರ್​ ರಿಂಗ್​ ರೋಡ್ ಬಳಿಯ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ.

ACP family killed, ACP family killed in road accident, ACP family killed in road accident at Medchal, Medchal crime news, ಭೀಕರ ರಸ್ತೆ ಅಪಘಾತ, ಭೀಕರ ರಸ್ತೆ ಅಪಘಾತದಲ್ಲಿ ಎಸಿಪಿ ಕುಟುಂಬ ಸಾವು, ಮೆಡ್ಚಲ್​ನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಎಸಿಪಿ ಕುಟುಂಬ ಸಾವು, ಮೆಡ್ಚಲ್​ ಅಪರಾಧ ಸುದ್ದಿ,
ಎಸಿಪಿ ಪತ್ನಿ, ಮಗ, ಸೊಸೆ ಸಾವು!

ಡಿವೈಡರ್​ಗೆ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜಾಗಿದ್ದು, ಎಸಿಪಿ ಪ್ರಸಾದ್​ ಪತ್ನಿ ಮತ್ತು ಸಹೋದರ ಬಾಲಕೃಷ್ಣ ಮಗನಾದ ಭಾಸ್ಕರ್​ ಮತ್ತು ಆತನ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಎಸಿಪಿ ಸಹೋದರ ಬಾಲಕೃಷ್ಣಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.