ETV Bharat / bharat

ಓದಿದ್ದು 10ನೇ ತರಗತಿ, ಹಲವು ಕೃಷಿ ಸಾಧನಗಳ ಆವಿಷ್ಕಾರ!: ಧಾರವಾಡದ ರೈತ ಅಬ್ದುಲ್‌ ಖಾದರ್‌ಗೆ 'ಪದ್ಮಶ್ರಿ'

author img

By

Published : Mar 28, 2022, 9:07 PM IST

ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ರೈತ ಅಬ್ದುಲ್‌ ಖಾದರ್​ ನಡಕಟ್ಟಿನ ಮಾರ್ಚ್​​​ 3, 1953ರಲ್ಲಿ ಜನಿಸಿದರು. ಶಿಕ್ಷಣ ಪಡೆದಿರುವುದು 10ನೇ ತರಗತಿಯಾದರೂ ಇವರ ಕೃಷಿ ಸಂಶೋಧನೆಗಳು ಎಲ್ಲೆಡೆ ಗಮನ ಸೆಳೆದಿವೆ.

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಬ್ದುಲ್ ಖಾದರ್ ನಡಕಟ್ಟಿನ್
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಬ್ದುಲ್ ಖಾದರ್ ನಡಕಟ್ಟಿನ್

ನವದೆಹಲಿ/ಧಾರವಾಡ: ಧಾರವಾಡದ ಕೃಷಿ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿನ್ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಇಂದು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ದೇಶಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡುವ 40ಕ್ಕೂ ಹೆಚ್ಚು ಆವಿಷ್ಕಾರಗಳಿಗೆ ಇವರು ಈ ವಿಶೇಷ ಮನ್ನಣೆ ಪಡೆದಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಬ್ದುಲ್ ಖಾದರ್ ನಡಕಟ್ಟಿನ್
ಪ್ರಧಾನಿ ಮೋದಿಗೆ ನಮಿಸಿದ ಪದ್ಮಶ್ರೀ ಪ್ರಶಸ್ತಿ ವಿಜೇತ ಅಬ್ದುಲ್ ಖಾದರ್ ನಡಕಟ್ಟಿನ್

'ನಾನು ಸಾಮಾನ್ಯ ರೈತ. ಆದರೆ, ಕಳೆದ 35 ವರ್ಷಗಳಲ್ಲಿ ಕೃಷಿಯಲ್ಲಿ ಬಳಸುವ ಯಂತ್ರಗಳ ಕುರಿತು ಮಾಡಿದ ಸಂಶೋಧನೆಗಾಗಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇದನ್ನು ದೇಶದ ಎಲ್ಲ ರೈತರಿಗೆ ಅರ್ಪಿಸಲು ಬಯಸುತ್ತೇನೆ' ಎಂದು ಅವರು ಹೇಳಿದರು.

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಬ್ದುಲ್ ಖಾದರ್ ನಡಕಟ್ಟಿನ್
ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಬ್ದುಲ್ ಖಾದರ್ ನಡಕಟ್ಟಿನ್

ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಅಬ್ದುಲ್‌ ಖಾದರ್​ ನಡಕಟ್ಟಿನ ಮಾರ್ಚ್​​​ 3, 1953ರಲ್ಲಿ ಜನಿಸಿದರು. ಶಿಕ್ಷಣ ಪಡೆದಿರುವುದು 10ನೇ ತರಗತಿವರೆಗಾದರೂ ಕೃಷಿ ಕ್ಷೇತ್ರದಲ್ಲಿ ಇವರ ಸಂಶೋಧನೆಗಳು ಎಲ್ಲೆಡೆ ಗಮನ ಸೆಳೆದಿವೆ.

ಇದನ್ನೂ ಓದಿ: ಅಣ್ಣಿಗೇರಿಯ ಅಬ್ದುಲ್ ಖಾದರ್ ನಡಕಟ್ಟಿನ ಅವರಿಗೆ ಒಲಿದ ಪದ್ಮಶ್ರೀ ಗೌರವ

ಪ್ರಮುಖವಾಗಿ ನಡಕಟ್ಟಿನ ಅವರು ಹುಣಸೆ ಹಣ್ಣಿನಿಂದ ಹುಣಸೆ ಬೀಜ ಬೇರ್ಪಡಿಸುವ ಯಂತ್ರ, ಎತ್ತಿನ ಚಕ್ಕಡಿಯನ್ನು ಆಟೋಮ್ಯಾಟಿಕ್ ಆಗಿ ಅನ್ಲೋಡ್ ಮಾಡುವ ಚಕ್ಕಡಿ ಕಂಡುಹಿಡಿದಿದ್ದಾರೆ. ಡೀಸೆಲ್ ಉಳಿತಾಯ ಮಾಡುವ ಗಾಲಿ ಕುಂಟೆ ಸೇರಿದಂತೆ ಹಲವು ಸಂಶೋಧನೆಗಳು ಇವರ ಗಮನಾರ್ಹ ಸಾಧನೆಯಾಗಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.