ETV Bharat / bharat

ದೆಹಲಿ ಮಹಾನಗರ ಪಾಲಿಕೆ ಉಪಚುನಾವಣೆ: ‘ಆಪ್’ ಆರ್ಭಟ, ‘ಕೈ’ಗೆ ತೃಪ್ತಿ.. ಪಂಚ ಸ್ಥಾನಗಳಲ್ಲೂ ‘ಬಿಜೆಪಿ’ ಪಂಚರ್

author img

By

Published : Mar 3, 2021, 11:45 AM IST

ದೆಹಲಿ ಮಹಾನಗರ ಪಾಲಿಕೆ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಭರ್ಜರಿ ವಿಜಯಪತಾಕೆ ಹಾರಿಸಿದ ನಂತರ ದೆಹಲಿ ಆಪ್​ ಸರ್ಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.

ನವದೆಹಲಿ: ದೆಹಲಿ ಮುನ್ಸಿಪಲ್​ ಕಾರ್ಪೋರೇಷನ್​ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣೆ ನಡೆದ 5 ಸ್ಥಾನಗಳಲ್ಲಿ ಆಪ್​ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿ ಭರ್ಜರಿ ಗೆಲುವು ದಾಖಲಿಸಿದ್ದರೆ, ಬಿಜೆಪಿ ವೈಟ್​ ವಾಷ್​ ಆಗಿದೆ.

ರೋಹಿಣಿ-ಸಿ (ವಾರ್ಡ್ ಸಂಖ್ಯೆ 32 ಎನ್), ತ್ರಿಲೋಕ್‌ಪುರಿ (ವಾರ್ಡ್ ಸಂಖ್ಯೆ 02 ಇ), ಕಲ್ಯಾಣ್‌ಪುರಿ (ವಾರ್ಡ್ 008 ಇ) ಮತ್ತು ಶಾಲಿಮಾರ್ ಬಾಗ್ ನಾರ್ಥ್​ (ವಾರ್ಡ್ ಸಂಖ್ಯೆ 62 ಎನ್) ವಾರ್ಡ್​ಗಳಲ್ಲಿ ಆಪ್​ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಚೌಹಾಣ್​ ಬಂಗಾರ್ ವಾರ್ಡ್​ನಲ್ಲಿ 10,642 ಮತಗಳಿಂದ ಕಾಂಗ್ರೆಸ್​ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.

ಫೆ.28 ರಂದು ದೆಹಲಿಯ ಪುರಸಭೆ ಐದು ವಾರ್ಡ್​ಗಳಿಗೆ ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ ಆಪ್​, ಬಿಜೆಪಿ, ಕಾಂಗ್ರೆಸ್​ ನಡುವೆ ತೀವ್ರ ಪೈಟೋಟಿ ಏರ್ಪಟ್ಟಿತ್ತು.

ಭರ್ಜರಿ ವಿಜಯ ಪತಾಕೆ ಹಾರಿಸಿದ ನಂತರ ದೆಹಲಿ ಆಪ್​ ಸರ್ಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ. "ಎಂಸಿಡಿ ಉಪಚುನಾವಣೆಯಲ್ಲಿ 5 ಸ್ಥಾನಗಳಲ್ಲಿ 4 ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆಗಳು" ಎಂದು ಅವರು ಟ್ವೀಟ್​ ಮಾಡಿದ್ದಾರೆ.

  • एमसीडी उपचुनाव में 5 में से 4 सीटें जीतने पर आम आदमी पार्टी कार्यकर्ताओं को बधाई.

    बीजेपी के शासन से दिल्ली की जनता अब दुखी हो चुकी है. अगले साल होने वाले MCD चुनाव में जनता @ArvindKejriwal जी की ईमानदार और काम करने वाली राजनीति को लेकर आएगी

    — Manish Sisodia (@msisodia) March 3, 2021 " class="align-text-top noRightClick twitterSection" data=" ">
ETV Bharat Logo

Copyright © 2024 Ushodaya Enterprises Pvt. Ltd., All Rights Reserved.