ETV Bharat / bharat

ದುರ್ಗಾಪೂಜೆ ನಿರ್ವಹಿಸುವ ವಿಶೇಷ ಅರ್ಚಕಿ: ಕಟ್ಟುಪಾಡುಗಳ ಸಂಕೋಲೆ ಕಳಚಿದ ತೃತೀಯ ಲಿಂಗಿ

author img

By

Published : Sep 27, 2022, 5:44 PM IST

ಇಲ್ಲಿಯವರೆಗೆ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿದ್ದ ಬಂಗಾಳಿ ಸಂಪ್ರದಾಯದ ಆಚರಣೆಗಳನ್ನು ಈಗ ಬೈಶಾಲಿ ದಾಸ್ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಜಾತಿ ಮತ್ತು ಲಿಂಗ ವ್ಯವಸ್ಥೆಯ ವಿರುದ್ಧ ಮೌನವಾಗಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ದುರ್ಗಾಪೂಜೆ ನಿರ್ವಹಿಸುವ ವಿಶೇಷ ಅರ್ಚಕಿ: ಕಟ್ಟುಪಾಡುಗಳ ಸಂಕೋಲೆ ಕಳಚಿದ ತೃತೀಯ ಲಿಂಗಿ
A special priest: Transgender woman priest performs Durga Puja

ಕೋಲ್ಕತ್ತಾ: ತೃತೀಯ ಲಿಂಗಿಯಾಗುವುದು ಕೆಲವೊಮ್ಮೆ ಅನಿವಾರ್ಯವಾಗಿರಬಹುದು. ಆದರೆ, ಅದಕ್ಕೆ ಅಂಟಿಕೊಂಡಿರುವ ಸಾಮಾಜಿಕ ಪ್ರತಿಬಂಧಕ ಗ್ರಹಿಕೆಯ ಅಡೆತಡೆಗಳಿಂದ ಹೊರಬರಲು ಮತ್ತು ಅವರ ಸ್ವಂತ ಆಯ್ಕೆಯ ಜೀವನವನ್ನು ನಡೆಸಲು ಖಂಡಿತವಾಗಿಯೂ ಅಪಾರವಾದ ಮಾನಸಿಕ ಧೈರ್ಯ ಬೇಕಾಗುತ್ತದೆ. ಬೈಶಾಲಿ ದಾಸ್ ಇವರು ಪಶ್ಚಿಮ ಬಂಗಾಳದ ಮೊದಲ ಟ್ರಾನ್ಸ್​ಜೆಂಡರ್ (ತೃತೀಯ ಲಿಂಗಿ) ಪೂಜಾರಿಯಾಗಿದ್ದಾರೆ. ಆದರೆ ಇವರು ಹಳೆಯ ಸಂಪ್ರದಾಯದ ಎಲ್ಲ ಕಟ್ಟುಪಾಡುಗಳನ್ನು ಕಳಚಿ ತಮ್ಮದೇ ಆದ ಜೀವನವನ್ನು ಕಟ್ಟಿಕೊಂಡಿದ್ದಾರೆ.

ಇಲ್ಲಿಯವರೆಗೆ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿದ್ದ ಬಂಗಾಳಿ ಸಂಪ್ರದಾಯದ ಆಚರಣೆಗಳನ್ನು ಈಗ ಬೈಶಾಲಿ ದಾಸ್ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಜಾತಿ ಮತ್ತು ಲಿಂಗ ವ್ಯವಸ್ಥೆಯ ವಿರುದ್ಧ ಮೌನವಾಗಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಮೊದಲ ಮಹಿಳಾ ರೋಮನ್ ಕ್ಯಾಥೋಲಿಕ್ ಪಾದ್ರಿ ಮತ್ತು ಹಳೆಯ ರೋಮನ್ ಕ್ಯಾಥೋಲಿಕ್ ಪದ್ಧತಿ ಬದಲಾಯಿಸುವಲ್ಲಿ ಯಶಸ್ವಿಯಾದ ಮೊದಲ ಟ್ರಾನ್ಸ್​​ಜೆಂಡರ್ ರೋಮನ್ ಕ್ಯಾಥೋಲಿಕ್ ಪಾದ್ರಿ ನ್ಯಾನ್ಸಿ ಲೆಡಿನ್ಸ್ ಅವರಂತೆ ಅವಳು ಜನಪ್ರಿಯತೆ ಗಳಿಸಲಿಲ್ಲ ಎಂಬುದು ನಿಜ. ಆದರೆ, ಎಲ್ಲ ವಿರೋಧಾಭಾಸಗಳ ವಿರುದ್ಧ ನಡೆಯುತ್ತ ಪೂಜೆಗಳನ್ನು ಮಾಡುವುದು ಸಮಾಜದ ಅನ್ಯಾಯದ ಪದ್ಧತಿಗಳ ವಿರುದ್ಧ ಇವರ ಮೌನ ಪ್ರತಿಭಟನೆಯಾಗಿದೆ.

ನನ್ನ ತಾಯಿ ಸೀತಾ ದೇವಿಯ ಪೂಜೆ ಮಾಡುವುದನ್ನು ಆಳವಾದ ಭಕ್ತಿಯಿಂದ ನೋಡುತ್ತಿದ್ದೆ. ಅದು ಯಾವಾಗಲೂ ನನ್ನನ್ನು ಆಕರ್ಷಿಸುತ್ತಿತ್ತು. ನನ್ನ ತಾಯಿ ನನಗೆ ಪೂಜೆ ಮಾಡುವುದನ್ನು ಕಲಿಸಿದರು. ದುರ್ಗಾಪೂಜೆಯ ಜೊತೆಗೆ ಮಾನಶಾ ಮತ್ತು ಸೀತಾಳ ಪೂಜೆ ಮಾಡುತ್ತೇನೆ ಎಂದು ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಬೈಶಾಲಿ, 16ನೇ ವಯಸ್ಸಿನಿಂದಲೂ ಪೂಜೆಗಳನ್ನು ಮಾಡುತ್ತಿರುವುದಾಗಿ ತಿಳಿಸಿದರು.

ಪುರೋಹಿತಶಾಹಿಯಲ್ಲಿ ಔಪಚಾರಿಕ ತರಬೇತಿ ಹೊಂದಿರದ ಬೈಶಾಲಿ, ಕಟ್ಟಾ ದೈವಭಕ್ತರಾಗಿದ್ದ ತನ್ನ ತಾಯಿಯಿಂದ ಎಲ್ಲ ವಿಧಿವಿಧಾನಗಳನ್ನು ಕಲಿತರು. ನನ್ನ ತಾಯಿ ನನಗೆ ಪೂಜೆಯ ವಿಧಿವಿಧಾನಗಳನ್ನು ಕಲಿಸುತ್ತಿದ್ದಾಗ ನಾನು ಅವನ್ನು ಮನಸಿಟ್ಟು ಕಲಿತೆ. ಏಕೆಂದರೆ ನನಗೆ ಈ ಆಚರಣೆಗಳಲ್ಲಿ ಆಳವಾದ ನಂಬಿಕೆ ಮತ್ತು ಆಸಕ್ತಿ ಇತ್ತು. ಆದರೆ, ನಾನು ಎಂದಿಗೂ ಪೂಜಾರಿಯಾಗಿರಲು ಬಯಸಿರಲಿಲ್ಲ ಎಂದು ಅವರು ಹೇಳಿದರು.

ನಾನು ಭಕ್ತಿಯಲ್ಲಿ ಮಾತ್ರ ತೊಡಗಿಸಿಕೊಂಡೆ. ದೇವರೊಂದಿಗೆ ಸಮಯ ಕಳೆಯುವುದರಿಂದ ನನಗೆ ಶಾಂತಿ ಸಿಗುತ್ತದೆ ಎಂದು ಅವರು ತಿಳಿಸಿದರು. ಮುಖ್ಯವಾಗಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಪ್ರದರ್ಶನಗೊಳ್ಳುವ ಜಾನಪದ ರಂಗಭೂಮಿಯ ಸಾಂಪ್ರದಾಯಿಕ ವಿನ್ಯಾಸವೃತ್ತಿಯಲ್ಲಿ ಬೈಶಾಲಿ ಜಾತ್ರಾ ಕಲಾವಿದರಾಗಿದ್ದಾರೆ.

ಆದಾಗ್ಯೂ, ಸಾಂಪ್ರದಾಯಿಕ ಪೂಜೆಗಳಲ್ಲಿ ಸಮಾಜವು ತನ್ನನ್ನು ಒಪ್ಪಿಕೊಳ್ಳುತ್ತದೆಯೇ ಎಂಬ ಆತಂಕವೂ ಅವಳಿಗೆ ಇತ್ತು. ಆದರೆ ಅರ್ಧನಾರೀಶ್ವರ ಪೂಜೆಯನ್ನು ಮಾಡುವ ಮೂಲಕ ಅವರು ಅರ್ಚಕರಾಗಿ ವೃತ್ತಿಯನ್ನು ಪ್ರಾರಂಭಿಸಿದರು.

ಇದನ್ನು ಓದಿ:ವಾಮಾಚಾರ ಮಾಡಿದ ಅತ್ತೆ ಕೊಚ್ಚಿ ಕೊಂದ ಸೋದರಳಿಯ.. ಹೀಗೊಂದು ಭೀಕರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.