ETV Bharat / bharat

ಪರಿಹಾರ ಪೂಜೆಗಾಗಿ ಹಾವಿನ ಮುಂದೆ ನಾಲಿಗೆ ಚಾಚಿದ ಅಧಿಕಾರಿ.. ಪರಿಸ್ಥಿತಿ ಮುಂದೇನಾಯ್ತು ನೋಡಿ

author img

By

Published : Nov 26, 2022, 2:21 PM IST

ಪರಿಹಾರ ಪೂಜೆಗಾಗಿ ಹಾವಿನ ಮುಂದೆ ನಾಲಿಗೆ ಚಾಚಿದ ವ್ಯಕ್ತಿಗೆ ಹಾವು ಕಚ್ಚಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ.

a-snake-bit-a-person-tongue
ಪರಿಹಾರ ಪೂಜೆಗಾಗಿ ಹಾವಿನ ಮುಂದೆ ನಾಲಿಗೆ ಚಾಚಿದ ವ್ಯಕ್ತಿಗೆ ಹಾವು ಕಡಿತ

ಈರೋಡ್(ತಮಿಳುನಾಡು): ಪರಿಹಾರ ಪೂಜೆಗಾಗಿ ಹಾವಿನ ಮುಂದೆ ನಾಲಿಗೆ ಚಾಚಿದ ಕೇಂದ್ರ ಸರ್ಕಾರಿ ಅಧಿಕಾರಿಯೊಬ್ಬರಿಗೆ ಹಾವು ಕಚ್ಚಿದೆ. ಗಾಯಗೊಂಡು ಆಸ್ಪತ್ರೆ ಸೇರಿದ್ದ ಅಧಿಕಾರಿ ಇದೀಗ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆ: ಅಧಿಕಾರಿಗೆ ಆಗಾಗ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದವಂತೆ. ಮನೆಯವರ ಬಳಿ ಹೇಳಿದಾಗ ಜ್ಯೋತಿಷ್ಯರ ಬಳಿ ಕರೆದೊಯ್ದಿದ್ದರು. ಜ್ಯೋತಿಷ್ಯರು ಈರೋಡಿನಲ್ಲಿರುವ ಹಾವು ಪೂಜಿಸುವ ಪೂಜಾರಿಯ ಬಳಿಗೆ ಕಳುಹಿಸಿದ್ದರು. ಈ ವೇಳೆ ಪೂಜಾರಿಯು ಕನಸಿನಲ್ಲಿ ಯಾವ ರೀತಿಯ ಹಾವು ಕಾಣಿಸುತ್ತದೆ ಎಂದೆಲ್ಲಾ ಪ್ರಶ್ನಿಸಿದ್ದು, ಕನ್ನಡಿ ಹಾವು ಕಾಣಿಸುತ್ತಿತ್ತು ಎಂದು ಹೇಳಿದ್ದಾರೆ. ಅದಕ್ಕೆ ಪೂಜಾರಿಯು ಆ ಹಾವನ್ನು ಪೂಜಿಸಿ ಕ್ಷಮೆಯಾಚಿಸಬೇಕೆಂದು ಹೇಳಿದ್ದರಂತೆ. ಅದರಂತೆ ಮನೆಯವರು ಒಪ್ಪಿ ಪೂಜೆಗೆ ಏರ್ಪಾಡು ಮಾಡಿದ್ದರು.

ಪೂಜಾರಿಯು ಹಾವನ್ನು ಕೈಯಲ್ಲಿ ಹಿಡಿದು ಮೂರು ಬಾರಿ ಊದುವಂತೆ ಹೇಳಿದ್ದಾರೆ. ಅಧಿಕಾರಿಯು ಅವರು ಹೇಳಿದದಂತೆ ಎರಡು ಬಾರಿ ಊದುವಾಗ ಸುಮ್ಮನಿದ್ದ ಹಾವು ಮೂರನೇ ಬಾರಿ ಊದುವ ವೇಳೆ ನಾಲಿಗೆಯನ್ನೇ ಕಚ್ಚಿದೆ.

ಇದನ್ನು ಕಂಡ ಪೂಜಾರಿಯು ವಿಷ ಹರಡದಂತೆ ರಕ್ಷಿಸುತ್ತೇನೆ ಎಂದು ನಾಲಿಗೆಯನ್ನೇ ತುಂಡರಿಸಿದ್ದಾನೆ. ಬಳಿಕ ಆಸ್ಪತ್ರೆಗೆ ಆ ಅಧಿಕಾರಿಯನ್ನು ದಾಖಲಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಇವರಿಗೆ ಏಳು ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಇದೀಗ ವ್ಯಕ್ತಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಶಾಕಿಂಗ್​ ಸಂಗತಿ: ತನಗೆ ಕಚ್ಚಿದ್ದ ಹಾವಿಗೆ ತಿರುಗಿ ಕಚ್ಚಿದ ಪೋರ.. ಹಾವು ಸಾವು, ಬಾಲಕ ಜೀವಂತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.