ETV Bharat / bharat

3 ಮಕ್ಕಳು ಸೇರಿದಂತೆ ಪತ್ನಿಯನ್ನ ಬರ್ಬರವಾಗಿ ಕೊಂದು ನೇಣಿಗೆ ಶರಣಾದ ಮನೆ ಯಜಮಾನ?

author img

By

Published : Apr 16, 2022, 10:17 AM IST

Updated : Apr 16, 2022, 12:14 PM IST

ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ವ್ಯಕ್ತಿಯೊಬ್ಬ ತನ್ನ ಮೂರು ಮುದ್ದಾದ ಮಕ್ಕಳ ಜೊತೆ ತನ್ನ ಹೆಂಡ್ತಿಯನ್ನು ಕೊಂದು ನೇಣಿಗೆ ಶರಣಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

single family members murder in Uttar Pradesh, PrayagRaj crime news, UttarPradesh police investigation on murder case, ಉತ್ತರಪ್ರದೆಶದಲ್ಲಿ ಒಂದೇ ಕುಟುಂಬ ಸದಸ್ಯರ ಕೊಲೆ, ಪ್ರಯಾಗ್​ರಾಜ್​ ಅಪರಾಧ ಸುದ್ದಿ, ಕೊಲೆಯ ಬಗ್ಗೆ ಉತ್ತರಪ್ರದೇಶ ಪೊಲೀಸರಿಂದ ತನಿಖೆ, ಉತ್ತರಪ್ರದೇಶ ಸುದ್ದಿ,
ಕೊಲೆ

ಪ್ರಯಾಗರಾಜ್‌(ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಮತ್ತೊಮ್ಮೆ ಸಾಮೂಹಿಕ ಹತ್ಯೆ ಪ್ರಕರಣ ಸಂಚಲನ ಮೂಡಿಸಿದೆ. ನವಾಬ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಖಗಲ್‌ಪುರ್ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯೊಳಗೆ ಪತ್ತೆಯಾದ ಐದು ಮೃತದೇಹಗಳ ಪೈಕಿ ನಾಲ್ವರನ್ನು ಚೂಪಾದ ಆಯುಧದಿಂದ ಹತ್ಯೆ ಮಾಡಲಾಗಿದ್ದು, ಮನೆಯ ಯಜಮಾನನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಓದಿ: ಬೆಳಗಿನ ಉಪಹಾರ ನೀಡಲಿಲ್ಲ ಎಂದು ಸೊಸೆಯನ್ನೇ ಗುಂಡಿಕ್ಕಿ ಕೊಂದ ಮಾವ!

ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ತಂಡಗಳು ಪರಿಶೀಲನೆ ನಡೆಸಿದರು. ಶುಕ್ರವಾರ ತಡರಾತ್ರಿ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಈ ಪೈಕಿ ನಾಲ್ವರ ಮೃತದೇಹಗಳು ರಕ್ತಸಿಕ್ತವಾಗಿದ್ದು, ಕುಟುಂಬದ ಮುಖ್ಯಸ್ಥ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ರಾಹುಲ್ ತಿವಾರಿ, ಅವರ ಪತ್ನಿ ಪ್ರೀತಿ ಮತ್ತು ಮೂವರು ಪುತ್ರಿಯರಾದ ಮಹಿ, ಪಿಹು ಮತ್ತು ಪೊಹು ಎಂದು ಗುರುತಿಸಲಾಗಿದೆ.

ಓದಿ: ಕಾಂಗ್ರೆಸ್​ ಮುಖಂಡ ಹತ್ಯೆ ಪ್ರಕರಣ : ಲವರ್​ಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದ ಸೊಸೆ!

ಘಟನೆಯ ಮಾಹಿತಿಯ ನಂತರ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು. ಸ್ಥಳಕ್ಕೆ ಶ್ವಾನದಳ ಹಾಗೂ ಕ್ಷೇತ್ರ ದಳದ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ರಾಹುಲ್​ ತಿವಾರಿ ತನ್ನ ಪತ್ನಿ ಪ್ರೀತಿ ಸೇರಿದಂತೆ ಮೂವರು ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಕೊಲೆ ಮಾಡಿದ್ದಾನೆ. ಬಳಿಕ ರಾಹುಲ್​ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಪ್ರಕರಣದ ಸಂಪೂರ್ಣ ಮಾಹಿತಿ ತನಿಖೆ ನಂತರವೇ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

Last Updated : Apr 16, 2022, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.