ETV Bharat / bharat

ಮುಂಬೈನಲ್ಲಿ ಮಾಜಿ ಪತಿಯಿಂದಲೇ ಕೊಲೆ - ಆರೋಪಿ ಅಂದರ್​!

author img

By

Published : Nov 12, 2021, 6:38 AM IST

ತನ್ನ ಮಾಜಿ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಆರ್‌ಸಿಎಫ್ ಪೊಲೀಸರು ಬಂಧಿಸಿದ್ದಾರೆ.

mumbai murder case
ಮುಂಬೈ ಕೊಲೆ ಪ್ರಕರಣ

ಮುಂಬೈ: ನಗರದ ಚೆಂಬೂರ್ ಪ್ರದೇಶ (Chembur area of mumbai) ದಲ್ಲಿ ಮಹಿಳೆಯೊಬ್ಬರನ್ನು ಸ್ವತಃ ಆಕೆಯ ಮಾಜಿ ಪತಿಯೇ ಕೊಲೆ ಮಾಡಿದ್ದಾನೆ (murder of lady) ಎಂಬ ಆರೋಪ ಕೇಳಿಬಂದಿದೆ. ಕೊಲೆ ಆರೋಪದ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸರು (Mumbai city police) ಗುರುವಾರ ತಿಳಿಸಿದ್ದಾರೆ.

ಮೃತ ಮಹಿಳೆಯನ್ನು ವಾಶಿ ನಾಕಾ ಪ್ರದೇಶ(Vashi Naka area of Mumbai)ದ 21 ವರ್ಷದ ಆಕಾಂಕ್ಷಾ ಖರತ್ಮೋಲ್ (Akanksha Kharatmol) ಎಂದು ಗುರುತಿಸಲಾಗಿದೆ.

ಧಾರಾವಿಯ ಆಸ್ಪತ್ರೆಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯು, ಆಟೋದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆರೋಪಿ ಅಕ್ಷಯ್ ಅಥ್ವಾಲೆ (24) ಬೈಕ್​ನಲ್ಲಿ ಆಕೆಯನ್ನು ಹಿಂಬಾಲಿಸಿ ರಾಹುಲ್ ನಗರ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಅಡ್ಡಗಟ್ಟಿದ್ದಾನೆ. ಬಳಿಕ ಆಕಾಂಕ್ಷಾಳ ಹೊಟ್ಟೆ, ಮುಖ ಮತ್ತು ತೋಳುಗಳ ಮೇಲೆ ಚಾಕುವಿನಿಂದ ಇರಿದಿದ್ದಾನೆಂದು ( Akshay stabbed Akanksha) ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆರ್‌ಸಿಎಫ್ ಪೊಲೀಸರು(rcf police) ಕೊಲೆ ಆರೋಪದಲ್ಲಿ ಅಕ್ಷಯ್‌ನನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ 5.5 ಕೋಟಿ ರೂ. ಮೌಲ್ಯದ ಸ್ಯೂಡೋಪೆಡ್ರೈನ್ ವಶ..

ಆಕಾಂಕ್ಷಾ ಮತ್ತು ಅಕ್ಷಯ್(Akshay Athwale) 2019 ರಲ್ಲಿ ವಿವಾಹವಾಗಿದ್ದರು. ಆದರೆ ಅವರ ಸಂಬಂಧ ಉತ್ತಮವಾಗಿರಲಿಲ್ಲ. ನಾಲ್ಕು ತಿಂಗಳ ನಂತರ ಆಕೆ ತನ್ನ ಹೆತ್ತವರ ಮನೆಗೆ ಮರಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.