ಜನರ ಮೇಲೆ ಬಿದ್ದ ರಾವಣನ ಪ್ರತಿಕೃತಿ.. ತಪ್ಪಿದ ಭಾರಿ ಅನಾಹುತ; ರಾಮಲೀಲಾದಲ್ಲಿ ಕಳೆ ಕಟ್ಟಿದ ದಸರಾ

author img

By

Published : Oct 5, 2022, 8:40 PM IST

ಯಮುನಾನಗರದಲ್ಲಿ ಜನರ ಮೇಲೆ ಬಿದ್ದ ರಾವಣನ ಪ್ರತಿಕೃತಿ

ದಸರಾ ಪ್ರಯುಕ್ತ ಲೇಹ್‌ನ ಪೋಲೋ ಮೈದಾನದಲ್ಲಿ ರಾವಣ ದಹನ ಪ್ರದರ್ಶನಗೊಂಡಿತು.

ಹರಿಯಾಣ: ಯಮುನಾನಗರದಲ್ಲಿ ದಸರಾ ಮಹೋತ್ಸವದ ವೇಳೆ ನೆರೆದಿದ್ದ ಜನರ ಮೇಲೆ ರಾವಣನ ಪ್ರತಿಕೃತಿ ಬಿದ್ದ ಪರಿಣಾಮ ಭಾರೀ ಅನಾಹುತ ತಪ್ಪಿದೆ. ಕೆಲವರಿಗೆ ಗಾಯಗಳಾಗಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಯಮುನಾನಗರದಲ್ಲಿ ಜನರ ಮೇಲೆ ಬಿದ್ದ ರಾವಣನ ಪ್ರತಿಕೃತಿ

ದೆಹಲಿ: ರಾಮ್ ಲೀಲಾ ಮೈದಾನದಲ್ಲಿ ನಡೆದ ದಸರಾ ಸಂಭ್ರಮಾಚರಣೆಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ದೆಹಲಿಯ ಲೆಫ್ಟಿನೆಂಟ್​ ಗರ್ವನರ್​ ವಿನಯ್ ಕುಮಾರ್ ಸಕ್ಸೇನಾ ಮತ್ತು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರೊಂದಿಗೆ ಭಾಗವಹಿಸಿದರು.

ನವರಾತ್ರಿ ಆಚರಣೆಯ ಅಂತಿಮ ದಿನದಂದು ಕೆಂಪು ಕೋಟೆಯಲ್ಲಿ ರಾಮಾಯಣ ಪ್ರದರ್ಶಿಸಲಾಯಿತು. ಈ ವೇಳೆ ತೆಲುಗು ನಟ ಪ್ರಭಾಸ್, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದರು.

ಉತ್ತರ ಪ್ರದೇಶ: ಕಾನ್ಪುರದಲ್ಲಿ ಇಂದು ಭಾರಿ ಮಳೆಯಾಗುತ್ತಿದೆ. ಪರಿಣಾಮ ನವರಾತ್ರಿ ಆಚರಣೆಯ ಅಂತಿಮ ದಿನದಂದು ದಹಿಸಲಾಗಿದ್ದ ರಾವಣನ ಪ್ರತಿಕೃತಿಗಳು ಹಾಳಾದವು. ಹೀಗಾಗಿ ಭಕ್ತರು ನಿರಾಸೆಗೊಳಗಾದರೂ, ಆದರೂ ಜನ ಹಬ್ಬದ ಸಂಭ್ರಮ ಸವಿದರು.

ಲಡಾಖ್: ದಸರಾ ಪ್ರಯುಕ್ತ ಲೇಹ್‌ನ ಪೋಲೋ ಮೈದಾನದಲ್ಲಿ 'ರಾವಣ ದಹನ್' ಪ್ರದರ್ಶನಗೊಂಡಿತು.

ಓದಿ: ಕುಲು ದಸರಾ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.