ETV Bharat / bharat

ಚರಂಡಿಗೆ ಬಿದ್ದು ಅಕ್ಕ- ತಮ್ಮ ದಾರುಣ ಸಾವು

author img

By

Published : Jan 18, 2022, 1:17 AM IST

ಸೋಮವಾರ ಸಂಜೆ 4:30ಕ್ಕೆ ಹಿರಿಯ ಮಗಳು ರುಬೀನಾ (9) ಹತ್ತು ತಿಂಗಳ ಕಿರಿಯ ಸಹೋದರ ಸುಮಿತ್ ಕುಮಾರ್​ನ ಜೊತೆ ಮನೆ ಬಳಿ ಆಟವಾಡುತ್ತಿದ್ದಳು. ಈ ವೇಳೆ ಇಬ್ಬರೂ ಅನುಮಾನಾಸ್ಪದವಾಗಿ ಚರಂಡಿಗೆ ಬಿದ್ದು ಸಾವಿಗೀಡಾಗಿದ್ದಾರೆ.

ಚರಂಡಿಗೆ ಬಿದ್ದು ಅಕ್ಕ- ತಮ್ಮ ದಾರುಣ ಸಾವು
ಚರಂಡಿಗೆ ಬಿದ್ದು ಅಕ್ಕ- ತಮ್ಮ ದಾರುಣ ಸಾವು

ನೋಯ್ಡಾ: ಮನೆಯ ಹೊರಗೆ ಆಟವಾಡುತ್ತಿದ್ದಾಗ ಇಬ್ಬರು ಮಕ್ಕಳು ಚರಂಡಿಗೆ ಬಿದ್ದು ಸಾವಿಗೀಡಾಗಿದ್ದಾರೆ. ಘಟನೆಯ ನಂತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಬಿಹಾರದ ಸಮಸ್ತಿಪುರದ ನಿವಾಸಿ ಶಂಭು ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಸಿ -14, ಸೆಕ್ಟರ್ -85 ರಲ್ಲಿ ತಮ್ಮ ಪತ್ನಿ ಮತ್ತು ಐದು ಮಕ್ಕಳೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದಾರೆ. ಸೋಮವಾರ ಸಂಜೆ 4:30ಕ್ಕೆ ಹಿರಿಯ ಮಗಳು ರುಬೀನಾ (9) ಹತ್ತು ತಿಂಗಳ ಕಿರಿಯ ಸಹೋದರ ಸುಮಿತ್ ಕುಮಾರ್​ನ ಜೊತೆ ಮನೆ ಬಳಿ ಆಟವಾಡುತ್ತಿದ್ದಳು. ಈ ವೇಳೆ ಇಬ್ಬರೂ ಅನುಮಾನಾಸ್ಪದವಾಗಿ ಚರಂಡಿಗೆ ಬಿದ್ದಿದ್ದಾರೆ.

ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಅವರನ್ನು ಹುಡುಕತೊಡಗಿದಾಗ ಸುಮಾರು ಅರ್ಧ ಗಂಟೆಯ ನಂತರ ರುಬೀನಾ ಮತ್ತು ಅವಳ ಸಹೋದರ ಚರಂಡಿಯಲ್ಲಿ ಕಂಡುಬಂದಿದ್ದಾರೆ.

ಸಂಬಂಧಿಕರು ಇಬ್ಬರನ್ನೂ ಚರಂಡಿಯಿಂದ ಹೊರತೆಗೆದು ಸೆಕ್ಟರ್-137ರಲ್ಲಿರುವ ಫೆಲಿಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಬ್ಬರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಈ ಚರಂಡಿ ಸುಮಾರು 15 ಅಡಿ ಆಳವಿದ್ದು, ಮಕ್ಕಳಿಬ್ಬರೂ ಚರಂಡಿಯಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ಪಡೆದು ತಂದೆಯೇ ಅಲ್ಲಿಗೆ ಇಳಿದು ಮಕ್ಕಳುನ್ನು ಹೊರ ತೆಗೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.