ETV Bharat / bharat

ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ತೈಲದ ಮೇಲೆ ತೆರಿಗೆ ಕಡಿತ.. ಯಾವ ರಾಜ್ಯದಲ್ಲಿ ಎಷ್ಟು ಇಳಿಕೆ?

author img

By

Published : Nov 4, 2021, 11:18 AM IST

Updated : Nov 4, 2021, 11:30 AM IST

ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದಲೂ ದೀಪಾವಳಿ ಗಿಫ್ಟ್​​​ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್​ ದರದಲ್ಲಿ ಭಾರೀ ಇಳಿಕೆಯಾಗಿದೆ. ಕೆಲ ದಿನಗಳಿಂದ ನಿರಂತರವಾಗಿ ತೈಲ ದರದಲ್ಲಿ ಏರಿಕೆಯಾಗುತ್ತಲೇ ಸಾಗಿತ್ತು. ಆದರೆ ನಿನ್ನೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿದ್ದು, ಬಿಜೆಪಿ ಆಡಳಿತ ರಾಜ್ಯ ಸರ್ಕಾರಗಳು ಸಹ ತೆರಿಗೆ ಕಡಿತಗೊಳಿಸಿವೆ.

9-bjp-ruled-states-announce-additional-cuts-in-fuel-rates-see-prices-here
ಅಬಕಾರಿ ಸುಂಕ ಕಡಿತ ಬೆನ್ನಲ್ಲೆ ಬಿಜೆಪಿ ಆಡಳಿತ ರಾಜ್ಯದಲ್ಲಿ ತೈಲದ ಮೇಲೆ ತೆರಿಗೆ ಕಡಿತ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ರೂಪಾಯಿ ಮತ್ತು 10 ರೂಪಾಯಿ ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಜನತೆಗೆ ದೀಪಾವಳಿ ಕೊಡುಗೆ ನೀಡಿದೆ.

  • ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರಕಾರ ಡೀಸಲ್ ಮೇಲೆ 10 ರೂ ಹಾಗೂ ಪೆಟ್ರೋಲ್ 05 ರೂ ಕಡಿಮೆ ಗೊಳಿಸಿದ್ದು ಸ್ವಾಗತಾರ್ಹ ಜನರಿಗೆ ದೀಪಾವಳಿಯ ಉಡಗೊರೆ ಕೊಟ್ಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು,
    1/3

    — Basavaraj S Bommai (@BSBommai) November 3, 2021 " class="align-text-top noRightClick twitterSection" data=" ">

ಕೇಂದ್ರ ಸರ್ಕಾರ ಈ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಆಡಳಿತ 9 ರಾಜ್ಯಗಳಲ್ಲೂ ತೆರಿಗೆ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿವೆ. ಇದರಿಂದಾಗಿ ತೈಲ ದರ ಇಳಿಕೆಯಾಗಲಿದ್ದು, ಹಲವು ಕಡೆ ಲೀಟರ್​ಗೆ 100 ರೂಪಾಯಿಗಿಂತಲೂ ಕೆಳಗಿಳಿಯಲಿದೆ.

  • उत्तराखण्ड में पेट्रोल ₹7 होगा सस्ता।

    केंद्र सरकार द्वारा पेट्रोल और डीजल पर क्रमशः ₹5 और ₹10 एक्साइज ड्यूटी घटाने के फैसले पर माननीय प्रधानमंत्री श्री @narendramodi ji का समस्त प्रदेश वासियों की ओर से हार्दिक आभार।#1NoUttarakhand pic.twitter.com/Dc25hFj7Be

    — Pushkar Singh Dhami (@pushkardhami) November 3, 2021 " class="align-text-top noRightClick twitterSection" data=" ">

ಪ್ರಮುಖವಾಗಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 103.97 ಮತ್ತು ಡೀಸೆಲ್ ದರ 86.67ಕ್ಕೆ ಇಳಿದಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ಗೆ 109.98 ಹಾಗೂ ಡೀಸೆಲ್ 94.14 ರೂಪಾಯಿಯಾಗಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ಹಾಗೂ ಡೀಸೆಲ್ ದರ ಕ್ರಮವಾಗಿ 104.67 ಮತ್ತು 89.79 ರೂಪಾಯಿಯಾಗಿದೆ.

  • The Modi Govt. has given a great Diwali gift to all Indians, by announcing reduction in Excise Duty on Petrol and Diesel.

    I thank the Hon'ble PM @narendramodi Ji as this decision shall give great relief to common man and help control inflation. 1/2

    — Dr. Pramod Sawant (@DrPramodPSawant) November 3, 2021 " class="align-text-top noRightClick twitterSection" data=" ">

ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಅಬಕಾರಿ ಸುಂಕದ ಜೊತೆಗೆ ವ್ಯಾಟ್​ ಕಡಿತಗೊಳಿಸಲಾಗಿದ್ದು, ಜನತೆಗೆ ಡಬಲ್ ಆಫರ್ ಸಿಕ್ಕಂತಾಗಿದೆ. ಈ ಹಿನ್ನೆಲೆ ಆಯಾ ರಾಜ್ಯದ ಮುಖ್ಯಮಂತ್ರಿಗಳು ಟ್ವೀಟ್ ಮಾಡಿ ಪ್ರಸ್ತುತ ತೈಲ ದರದ ಮಾಹಿತಿ ಹಂಚಿಕೊಂಡಿದ್ದಾರೆ.

ಕರ್ನಾಟಕ

  • The Modi Govt. has given a great Diwali gift to all Indians, by announcing reduction in Excise Duty on Petrol and Diesel.

    I thank the Hon'ble PM @narendramodi Ji as this decision shall give great relief to common man and help control inflation. 1/2

    — Dr. Pramod Sawant (@DrPramodPSawant) November 3, 2021 " class="align-text-top noRightClick twitterSection" data=" ">

ಅಬಕಾರಿ ಸುಂಕ ಕಡಿತದಿಂದಾಗಿ ಬೆಂಗಳೂರಲ್ಲಿ ಇದೀಗ ಪ್ರತೀ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಕಡಿತವಾಗಿತ್ತು. ಈ ಬೆನ್ನಲ್ಲೆ ಸಿಎಂ ಬೊಮ್ಮಾಯಿ ತೆರಿಗೆ ವಿನಾಯಿತಿ ನೀಡಿ ಪೆಟ್ರೋಲ್ ಹಾಗೂ ಡೀಸೆಲ್​ ಮೇಲೆ ತಲಾ 7 ರೂಪಾಯಿ ಕಡಿತಕ್ಕೆ ಮುಂದಾಗಿದ್ದಾರೆ. ಈ ದರ ಗುರುವಾರ ಸಂಜೆಯಿಂದಲೇ ಜಾರಿಯಾಗಲಿದೆ ಎಂದಿದ್ದಾರೆ. ಈ ನಮ್ಮ ನಿರ್ದಾರದಿಂದ ರಾಜ್ಯ ಸರಕಾರಕ್ಕೆ ಅಂದಾಜು 2,100 ಕೋಟಿ ರೂಪಾಯಿ ಕೆ.ಎಸ್.ಟಿ ಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ರಾಜ್ಯದಲ್ಲಿ ಪೆಟ್ರೋಲ್ ದರ ಅಂದಾಜು 95.50 ರೂ ಹಾಗೂ ಡಿಸೇಲ್ ಅಂದಾಜು 81.50 ರೂ ಆಗುವ ನೀರಿಕ್ಷೆಯಿದೆ‌ ಎಂದು ಟ್ವೀಟ್ ಮಾಡಿದ್ದಾರೆ.

  • কেন্দ্র সরকারের পর এবার রাজ্য সরকারের সিদ্ধান্তের ফলে ত্রিপুরায় পেট্রোলের দাম প্রতি লিটারে ১২ টাকা ও ডিজেলের দাম ১৭ টাকা হ্রাস পেলো।

    রাজ্য সরকার প্রতি লিটার পেট্রোল ও ডিজেলে ৭ টাকার ছাড় দিয়েছে। এখন আগরতলায় পেট্রোল ৯৮.৩৩ টাকা ও ডিজেল ৮৫.৬৩ টাকা প্রতি লিটার হবে। pic.twitter.com/1OPfiRNzyH

    — Biplab Kumar Deb (@BjpBiplab) November 3, 2021 " class="align-text-top noRightClick twitterSection" data=" ">

ಅಸ್ಸೋಂ

ಇದರ ಜೊತೆ ಬಿಜೆಪಿ ಆಡಳಿತ ರಾಜ್ಯ ಅಸ್ಸೋಂನಲ್ಲೂ ತೈಲ ದರದಲ್ಲಿ ಭಾರಿ ಇಳಿಕೆಯಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ತಲಾ ₹7 ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಪೆಟ್ರೋಲ್‌ ದರದಲ್ಲಿ ಒಟ್ಟು 12 ರೂಪಾಯಿ ಮತ್ತು ಡೀಸೆಲ್‌ ದರದಲ್ಲಿ 17 ರೂಪಾಯಿ ಇಳಿಯಾಗಲಿದೆ.

  • Heartening to learn Central Govt decision to reduce excise duty on petrol and diesel. In consonance with the decision of Honble PM @narendramodi, I am pleased to announce that Assam Govt will also reduce VAT on petrol and diesel each by Rs 7/- with immediate effect @nsitharaman

    — Himanta Biswa Sarma (@himantabiswa) November 3, 2021 " class="align-text-top noRightClick twitterSection" data=" ">

ಮಣಿಪುರ

ಕೇಂದ್ರದ ಘೋಷಣೆಯ ಬೆನ್ನಲ್ಲೇ ಮಣಿಪುರ ಸಹ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ತಲಾ 7 ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಗೋವಾ

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸಹ ಈ ಕುರಿತಂತೆ ಟ್ವೀಟ್ ಮಾಡಿದ್ದು, ಪೆಟ್ರೋಲ್‌, ಡೀಸೆಲ್‌ ಎರಡರ ಮೇಲಿನ ತೆರಿಗೆಯನ್ನು 7 ರೂಪಾಯಿ ಕಡಿಮೆ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಪೆಟ್ರೋಲ್ ಪ್ರತಿ ಲೀಟರ್​ಗೆ 12 ರೂಪಾಯಿ ಇಳಿಕೆಯಾದರೆ ಡೀಸೆಲ್ ದರದಲ್ಲಿ 17 ರೂಪಾಯಿ ಇಳಿಕೆಯಾದಂತಾಗುತ್ತದೆ.

  • आदरणीय प्रधानमंत्री श्री @narendramodi जी द्वारा जनहित में पेट्रोल और डीजल पर एक्साइज ड्यूटी कम करने के निर्णय ने दीपावली को अतिरिक्त उल्लास से भर दिया है।

    यह निर्णय समाज के हर वर्ग को राहत पहुंचाने वाला है।

    सभी प्रदेशवासियों की ओर से आदरणीय प्रधानमंत्री जी का हार्दिक आभार।

    — Yogi Adityanath (@myogiadityanath) November 3, 2021 " class="align-text-top noRightClick twitterSection" data=" ">

ಉತ್ತರಾಖಂಡ್

ಉತ್ತರಾಖಂಡ್​​ನಲ್ಲಿಯೂ ತೈಲ ದರ ಇಳಿಯಾಗಿದೆ. ಪೆಟ್ರೋಲ್‌ ಮೇಲಿನ ತೆರಿಗೆಯನ್ನು 2 ರೂಪಾಯಿ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ. ಇದರಿಂದಾಗಿ ಪೆಟ್ರೋಲ್‌ ದರ ಲೀಟರ್‌ಗೆ ಒಟ್ಟು 7 ರೂಪಾಯಿ ಕಡಿಮೆಯಾಗಲಿದೆ.

ಸಿಕ್ಕಿಂ

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌ ಅವರು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಲೀಟರ್‌ಗೆ 7 ರೂಪಾಯಿಯಷ್ಟು ಕಡಿಮೆ ಮಾಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಪ್ರತಿ ಲೀಟರ್‌ ಪೆಟ್ರೋಲ್‌ 12 ಮತ್ತು ಡೀಸೆಲ್‌ 17 ರೂಪಾಯಿ ಕಡಿಮೆಯಾಗಲಿದೆ.

ತ್ರಿಪುರ

ಪೆಟ್ರೋಲ್‌ ದರದಲ್ಲಿ 12 ಮತ್ತು ಡೀಸೆಲ್‌ ದರದಲ್ಲಿ 17 ರೂಪಾಯಿ ಕಡಿಮೆ ಮಾಡುವುದಾಗಿ ತ್ರಿಪುರ ಸರ್ಕಾರ ಸಹ ಘೋಷಿಸಿದೆ. ರಾಜ್ಯ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ತಲಾ ₹7 ಇಳಿಕೆ ಮಾಡಿದೆ.

ಉತ್ತರ ಪ್ರದೇಶ

ಉತ್ತರ ಪ್ರದೇಶ ಸರ್ಕಾರವು ಪೆಟ್ರೋಲ್‌ ಮೇಲಿನ ತೆರಿಗೆಯನ್ನು 7 ರೂಪಾಯಿ ಮತ್ತು ಡೀಸೆಲ್‌ ಮೇಲಿನ ತೆರಿಗೆ 2 ರೂಪಾಯಿ ಇಳಿಸಲು ನಿರ್ಧರಿಸಿದೆ. ಈ ಮೂಲಕ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 12 ರೂಪಾಯಿ ಇಳಿಕೆಯಾಗಲಿದೆ.

Last Updated : Nov 4, 2021, 11:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.