ETV Bharat / bharat

ಮಹಾರಾಷ್ಟ್ರ: ದಿನಕ್ಕೆ 23ರಂತೆ 6 ತಿಂಗಳಲ್ಲಿ 4,872 ಹಸುಗೂಸುಗಳ ಸಾವು!

author img

By PTI

Published : Dec 20, 2023, 5:16 PM IST

Infant Mortality rate in Maharashtra: ಮಹಾರಾಷ್ಟ್ರ ರಾಜ್ಯಾದ್ಯಂತ ಈ ವರ್ಷದ ಏಪ್ರಿಲ್​ನಿಂದ ಅಕ್ಟೋಬರ್ ತಿಂಗಳ​ ನಡುವೆ 4,872 ನವಜಾತ ಶಿಶುಗಳ ಸಾವು ವರದಿಯಾಗಿದೆ ಎಂದು ಸರ್ಕಾರದ ಅಧಿಕೃತ ಅಂಕಿಅಂಶಗಳೇ ಹೇಳುತ್ತಿವೆ.

Maharashtra: 4,872 infants died during April-October, assembly told
ಮಹಾರಾಷ್ಟ್ರ: ಪ್ರತಿದಿನಕ್ಕೆ 23 ಶಿಶುಗಳಂತೆ 6 ತಿಂಗಳಲ್ಲಿ 4,872 ಹಸುಗೂಸುಗಳ ಮರಣ!

ನಾಗ್ಪುರ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸಾಕಷ್ಟು ಕಳವಳಕ್ಕೆ ಕಾರಣವಾಗಿರುವ ಶಿಶುಗಳ ಮರಣದ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದೇ ವರ್ಷದ ಏಪ್ರಿಲ್​ನಿಂದ ಅಕ್ಟೋಬರ್ ತಿಂಗಳ​ ನಡುವೆ ರಾಜ್ಯಾದ್ಯಂತ 4,800ಕ್ಕೂ ಅಧಿಕ ಕಂದಮ್ಮಗಳು ಸಾವಿಗೀಡಾಗಿವೆ ಎಂದು ರಾಜ್ಯ ಆರೋಗ್ಯ ಸಚಿವ ತಾನಜಿ ಸಾವಂತ್​ ಬುಧವಾರ ವಿಧಾನಸಭೆಗೆ ಅಂಕಿಅಂಶ ಒದಗಿಸಿದ್ದಾರೆ.

''ಮಹಾರಾಷ್ಟ್ರದಲ್ಲಿ ಏಪ್ರಿಲ್​-ಅಕ್ಟೋಬರ್​ನ ಆರು ತಿಂಗಳ ಅವಧಿಯಲ್ಲಿ ಒಟ್ಟಾರೆ 4,872 ನವಜಾತ ಶಿಶುಗಳು ಮರಣ ಹೊಂದಿವೆ. ಮೃತ ಶಿಶುಗಳ ವಯಸ್ಸು ಶೂನ್ಯದಿಂದ 28 ದಿನಗಳು ಮಾತ್ರ. ಇದನ್ನು ಸರಾಸರಿಗೆ ಹೋಲಿಸಿದರೆ ಪ್ರತಿದಿನ 23 ಶಿಶುಗಳ ಸಾವು ಸಂಭವಿಸಿವೆ'' ಎಂದು ಸಚಿವರು ಹೇಳಿದ್ದಾರೆ. ಶಾಸಕ ಸಚಿನ್​ ಕಲ್ಯಾಣಶೆಟ್ಟಿ ಕೇಳಿದ ಪ್ರಶ್ನೆಗೆ ಈ ಲಿಖಿತ ಉತ್ತರ ನೀಡಲಾಗಿದೆ.

ಇದರಂತೆ, 4,872 ಶಿಶುಗಳ ಪೈಕಿ 795 ಹಸುಗೂಸುಗಳು ಉಸಿರಾಟ ಸಮಸ್ಯೆಗೆ ಸಂಬಂಧಿಸಿದ ಕಾಯಿಲೆಗಳಿಂದ ಕೊನೆಯುಸಿರೆಳೆದಿವೆ. ಅತ್ಯಧಿಕ ಸಾವುಗಳು ರಾಜ್ಯಧಾನಿ ಮುಂಬೈ, ಥಾಣೆ, ಸೊಲ್ಲಾಪೂರ, ಅಕೋಲಾ, ನಂದೂರ್​ಬಾದ್​ನಲ್ಲಿ ಸಂಭವಿಸಿವೆ. ಮಹಾರಾಷ್ಟ್ರದಲ್ಲಿ ಒಟ್ಟಾರೆ 52 ವಿಶೇಷ ನವಜಾತ ಶಿಶು ಆರೈಕೆ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಅನಾರೋಗ್ಯ ಶಿಶುಗಳಿಗೆ ಉಚಿತವಾಗಿ ಔಷಧಿ, ಪರೀಕ್ಷೆ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಜನಿಸಿದ ಒಂದೇ ದಿನದಲ್ಲಿ ಶಿಶು ಸಾವನ್ನಪ್ಪಿದೆ ಎಂದು ಮರಣ ಪ್ರಮಾಣಪತ್ರ ನೀಡಿದ್ದ ವೈದ್ಯರು.. ಅಂತ್ಯಕ್ರಿಯೆ ವೇಳೆ ಅತ್ತ ಕೂಸು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.