ETV Bharat / bharat

ಬೊಲೆರೊಗೆ ಟ್ರಕ್ ಡಿಕ್ಕಿ: ನಾಲ್ವರ ದುರ್ಮರಣ, 7 ಮಂದಿಗೆ ಗಾಯ

author img

By

Published : Feb 22, 2022, 12:01 PM IST

ಮೂಲಗಳ ಪ್ರಕಾರ, ಕಾಳಹಂಡಿ ಜಿಲ್ಲೆಯ ಟಿಟ್ಕೆಲಾ ಗ್ರಾಮದ ಕುಟುಂಬವೊಂದು ಮದುವೆಯ ಔತಣದಲ್ಲಿ ಪಾಲ್ಗೊಂಡು ಬೊಲೆರೋದಲ್ಲಿ ಹಿಂತಿರುಗುತ್ತಿದ್ದ ವೇಳೆ ತುರ್ಲಖ್ಮಾನ್ ಬಳಿ ಎದುರಿನಿಂದ ಬರುತ್ತಿದ್ದ ಅಕ್ಕಿ ತುಂಬಿದ್ದ ಟ್ರಕ್‌ ಗುದ್ದಿದೆ..

ಬೊಲೆರೊಗೆ ಟ್ರಕ್ ಡಿಕ್ಕಿ
ಬೊಲೆರೊಗೆ ಟ್ರಕ್ ಡಿಕ್ಕಿ

ಭವಾನಿಪಟ್ಟಣ(ಒಡಿಶಾ) : ಬೊಲೆರೊ ಹಾಗೂ ಟ್ರಕ್ ಡಿಕ್ಕಿಯಾದ ಪರಿಣಾಮ ಮೂವರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಒಡಿಶಾದ ಕಾಳಹಂಡಿ ಜಿಲ್ಲೆಯ ಭವಾನಿಪಟ್ಟಣದ ತುರ್ಲಖ್ಮಾನ್ ಬಳಿ ನಡೆದಿದೆ.

ಘಟನೆಯಲ್ಲಿ ಇನ್ನೂ 7 ಮಂದಿ ಗಾಯಗೊಂಡಿದ್ದಾರೆ. ಅವರುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಎಲ್ಲರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮದುವೆ ಮುಗಿಸಿ ಬರುತ್ತಿದ್ದ ವಾಹನ ಕಮರಿಗೆ ಬಿದ್ದು 10 ಜನರ ದುರ್ಮರಣ

ಮೂಲಗಳ ಪ್ರಕಾರ, ಕಾಳಹಂಡಿ ಜಿಲ್ಲೆಯ ಟಿಟ್ಕೆಲಾ ಗ್ರಾಮದ ಕುಟುಂಬವೊಂದು ಮದುವೆಯ ಔತಣದಲ್ಲಿ ಪಾಲ್ಗೊಂಡು ಬೊಲೆರೋದಲ್ಲಿ ಹಿಂತಿರುಗುತ್ತಿದ್ದ ವೇಳೆ ತುರ್ಲಖ್ಮಾನ್ ಬಳಿ ಎದುರಿನಿಂದ ಬರುತ್ತಿದ್ದ ಅಕ್ಕಿ ತುಂಬಿದ್ದ ಟ್ರಕ್‌ ಗುದ್ದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.