ETV Bharat / bharat

7 ವರ್ಷಗಳಲ್ಲಿ 4 ಕೋಟಿ ನಕಲಿ ಪಡಿತರ ಚೀಟಿ ರದ್ದು.. ಕೇಂದ್ರ ಸರ್ಕಾರದ ಮಾಹಿತಿ

author img

By

Published : Apr 4, 2022, 3:01 PM IST

ದೇಶದಲ್ಲಿ ಕಳೆದ 7 ವರ್ಷಗಳಲ್ಲಿ 4.28 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಇದರಲ್ಲಿ ಉತ್ತರಪ್ರದೇಶ(1.70 ಕೋಟಿ), ಮಹಾರಾಷ್ಟ್ರ (41.65 ಲಕ್ಷ), ಪಶ್ಚಿಮಬಂಗಾಳ(41.09) ಲಕ್ಷ ನಕಲಿ ಚೀಟಿಗಳನ್ನು ಹೊಂದಿದ್ದವು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

bogus-ration-cards
ನಕಲಿ ಪಡಿತರ ಚೀಟಿ

ನವದೆಹಲಿ: ದೇಶದಲ್ಲಿ 2014 ರಿಂದ 2021 ರವರೆಗೆ 4 ಕೋಟಿಗೂ ಹೆಚ್ಚು ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಶಕ್ತರಾಗಿದ್ದರೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸೃಷ್ಟಿಸಲಾಗಿದ್ದ ನಕಲಿ ಪಡಿತರ ಚೀಟಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.

ಈ ಬಗ್ಗೆ ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ದೇಶದಲ್ಲಿ 2014 ರಿಂದ 2021 ರ 7 ವರ್ಷದ ಅವಧಿಯಲ್ಲಿ 4.28 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ತಾವು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

1.70 ಕೋಟಿ ನಕಲಿ ಪಡಿತರ ಚೀಟಿ ಹೊಂದಿದ್ದ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರ 41.65 ಲಕ್ಷ, ಪಶ್ಚಿಮ ಬಂಗಾಳ 41.09 ಲಕ್ಷ ನಕಲಿ ಚೀಟಿಗಳನ್ನು ಹೊಂದಿದ್ದ ಪ್ರಮುಖ ಮೂರು ರಾಜ್ಯಗಳಾಗಿವೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್) ನಿಯಂತ್ರಣ ಆದೇಶ- 2015, ಅಗತ್ಯ ಸರಕುಗಳ ಕಾಯ್ದೆ-1955 ರ ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಅಶ್ವಿನಿಕುಮಾರ್​ ಚೌಬೆ ಮಾಹಿತಿ ನೀಡಿದರು.

ಓದಿ: 2ನೇ ಬಾರಿಗೆ ಗ್ರ್ಯಾಮಿ ಅವಾರ್ಡ್ ಪಡೆದ ಬೆಂಗಳೂರಿನ ರಿಕಿ ಕೇಜ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.