ETV Bharat / bharat

ಹಳಿಗಳ ನವೀಕರಣಕ್ಕೆ ಕಡಿಮೆ ಹಣ, ಅಸಮರ್ಪಕ ಸಿಬ್ಬಂದಿ.. ರೈಲ್ವೆಯ ಗಂಭೀರ ಲೋಪಗಳ ಬಯಲು ಮಾಡಿದ್ದ CAG ವರದಿ

author img

By

Published : Jun 4, 2023, 8:08 PM IST

ದೇಶದಲ್ಲಿ ರೈಲುಗಳು ಹಳಿ ತಪ್ಪಲು ಕಾರಣವಾದ ಪ್ರಮುಖ ಅಂಶಗಳ ಬಗ್ಗೆ 2022ರ ಸಿಎಜಿ ವರದಿ ಬಯಲು ಮಾಡಿದೆ. ಸಿಎಜಿ ವರದಿ ಪ್ರಕಾರ ರೈಲ್ವೆಗಳಲ್ಲಿನ ಪ್ರಮುಖ ಲೋಪಗಳ ಪಟ್ಟಿ ಇಲ್ಲಿದೆ.

2022-cag-report-on-derailments-in-indian-railways-flagged-multiple-shortcomings
ರೈಲ್ವೆಯ ಗಂಭೀರ ಲೋಪಗಳ ಬಯಲು ಮಾಡಿದ್ದ CAG ವರದಿ

ಹೈದರಾಬಾದ್: ಒಡಿಶಾ ತ್ರಿವಳಿ ರೈಲು ಅಪಘಾತ ಸಂಭವಿಸಿ ಮೂರು ದಿನಗಳು ಕಳೆದರೂ ಭೀಕರ ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ರೈಲ್ವೆ ಇಲಾಖೆ ಇನ್ನೂ ವಿವರವಾದ ಹೇಳಿಕೆಯನ್ನು ನೀಡಿಲ್ಲ. ಆದಾಗ್ಯೂ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ತನ್ನ 2022ರ ವರದಿಯಲ್ಲಿ ಭಾರತೀಯ ರೈಲ್ವೆಯ ಸುರಕ್ಷತೆಯಲ್ಲಿ ಹಲವಾರು ಗಂಭೀರ ಲೋಪಗಳನ್ನು ಎತ್ತಿತೋರಿಸಿದೆ.

ಆದ್ಯತೆಯ ಕಾರ್ಯಗಳಿಗೆ ಮೀಸಲಾದ ರೈಲ್ವೆ ನಿಧಿಯ ಬಳಕೆಯಾಗದಿರುವುದು, ಹಳಿಗಳ ನವೀಕರಣದಲ್ಲಿ ನಿಧಿಯ ಕ್ಷೀಣಿಸುತ್ತಿರುವ ಪ್ರವೃತ್ತಿ ಮತ್ತು ಸುರಕ್ಷತಾ ಕಾರ್ಯಾಚರಣೆಗಳಲ್ಲಿ ಅಸಮರ್ಪಕ ಸಿಬ್ಬಂದಿ ಸೇರಿದಂತೆ ಅನೇಕ ಅಂಶಗಳ ಬಗ್ಗೆ ಸಿಎಜಿ ಪಟ್ಟಿ ಮಾಡಿದೆ. ಈ ಸಿಎಜಿ ವರದಿಯು ತಪಾಸಣೆಗಳಲ್ಲಿನ ನ್ಯೂನತೆಗಳು ಮತ್ತು ಅಪಘಾತಗಳ ನಂತರ ವರದಿಗಳನ್ನು ಸಲ್ಲಿಸಲು ಅಥವಾ ಸ್ವೀಕರಿಸಲು ವಿಫಲತೆ. ಸುರಕ್ಷತಾ ಕಾರ್ಯಾಚರಣೆಗಳಲ್ಲಿ ಅಸಮರ್ಪಕ ಸಿಬ್ಬಂದಿಯ ಗಂಭೀರ ಮತ್ತು ಕಳವಳಕಾರಿ ಅಂಶದ ಬಗ್ಗೆಯೂ ಗಮನ ಸೆಳೆದಿದೆ.

ಇದನ್ನೂ ಓದಿ: ರೈಲು ದುರಂತದಲ್ಲಿ ಮೃತರ ಸಂಖ್ಯೆ 288 ಅಲ್ಲ, 275.. ಗಾಯಗೊಂಡವರು 1,175 ಮಂದಿ: ಒಡಿಶಾ ಸರ್ಕಾರ

ಇದೇ ವೇಳೆ ಸಿಎಜಿ ಎರಡು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ರೈಲ್ವೆಯು ಅಪಘಾತ ವಿಚಾರಣೆಗಳನ್ನು ನಡೆಸಲು ಮತ್ತು ಅಂತಿಮಗೊಳಿಸಲು ನಿಗದಿತ ಸಮಯಕ್ಕೆ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು. ಟ್ರ್ಯಾಕ್ ನಿರ್ವಹಣೆ ಮತ್ತು ಸುಧಾರಿತ ತಂತ್ರಜ್ಞಾನಗಳ ಸಂಪೂರ್ಣ ಯಾಂತ್ರೀಕೃತ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿರ್ವಹಣಾ ಚಟುವಟಿಕೆಗಳ ಸಮಯೋಚಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಬಲವಾದ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬಹುದು ಎಂದೂ ಸಿಎಜಿ ಹೇಳಿದೆ.

ಸಿಎಜಿ ವರದಿ ಪ್ರಕಾರ ರೈಲ್ವೆಗಳಲ್ಲಿನ ಪ್ರಮುಖ ನ್ಯೂನತೆಗಳು ಇಲ್ಲಿವೆ..

  • ರೈಲ್ವೆ ಹಳಿಗಳ ಜಿಯೋಮೆಟ್ರಿಕಲ್ ಮತ್ತು ರಚನಾತ್ಮಕ ಸ್ಥಿತಿಗಳನ್ನು ನಿರ್ಣಯಿಸಲು ಅಗತ್ಯವಿರುವ ಟ್ರ್ಯಾಕ್ ರೆಕಾರ್ಡಿಂಗ್ ಕಾರ್‌ಗಳ ತಪಾಸಣೆಯಲ್ಲಿ ಶೇ.30ರಿಂದ 100ರಷ್ಟು ಕೊರತೆಗಳಿವೆ.
  • ಟ್ರ್ಯಾಕ್ ನಿರ್ವಹಣೆ ಚಟುವಟಿಕೆಗಳ ಆನ್‌ಲೈನ್ ಮೇಲ್ವಿಚಾರಣೆಗಾಗಿ ವೆಬ್​ ಆಧಾರಿತ ಟ್ರ್ಯಾಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (Track Management System -TMS) ಅಪ್ಲಿಕೇಶನ್ ಇದೆ. ಆದರೆ, ಟಿಎಂಸಿ ಪೋರ್ಟಲ್‌ನ ಇನ್​ಬಿಲ್ಟ್​ ಮಾನಿಟರಿಂಗ್ ಕಾರ್ಯವಿಧಾನವು ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿಲ್ಲ.
  • 2017ರ ಏಪ್ರಿಲ್​ನಿಂದ 2021ರ ಮಾರ್ಚ್​ವರೆಗೆ ಇಂಜಿನಿಯರ್​ ವಿಭಾಗಕ್ಕೆ ಕಾರಣವಾದ ಒಟ್ಟು 422 ಹಳಿ ತಪ್ಪಿದ ಪ್ರಕರಣಗಳು ವರದಿಯಾಗಿವೆ. ಹಳಿ ತಪ್ಪಲು ಕಾರಣವಾದ ಪ್ರಮುಖ ಅಂಶಗಳಲ್ಲಿ ಹಳಿಗಳ ನಿರ್ವಹಣೆಯೂ ಸೇರಿದೆ.
  • ಮೆಕ್ಯಾನಿಕಲ್​ ವಿಭಾಗದ ಕಾರಣವಾದ ಹಳಿ ತಪ್ಪಿದ ಪ್ರಕರಣಗಳ ಸಂಖ್ಯೆ 182. ಇದರಲ್ಲಿ ಶೇ.37ರಷ್ಟು ಚಕ್ರದ ವ್ಯಾಸದ ವ್ಯತ್ಯಾಸ ಮತ್ತು ಕೋಚ್‌ಗಳು, ವ್ಯಾಗನ್‌ಗಳಲ್ಲಿನ ದೋಷಗಳು ಹಳಿ ತಪ್ಪಲು ಕಾರಣವಾಗಿವೆ.
  • ಲೋಕೋ ಪೈಲಟ್'ಗಳಿಂದಾಗಿ ಸಂಭವಿಸಿದ ಅಪಘಾತಗಳ ಸಂಖ್ಯೆ 154. ಕೆಟ್ಟ ಡ್ರೈವಿಂಗ್, ಅತಿ ವೇಗ ಹಳಿ ತಪ್ಪಲು ಪ್ರಮುಖ ಅಂಶವಾಗಿದೆ.
  • ಕಾರ್ಯನಿರ್ವಹಣಾ ಇಲಾಖೆಗೆ ಕಾರಣವಾದ ಅಪಘಾತಗಳ ಸಂಖ್ಯೆ 275. ಅಂಕಗಳ ತಪ್ಪಾದ ಸೆಟ್ಟಿಂಗ್ ಮತ್ತು ಷಂಟಿಂಗ್ ಕಾರ್ಯಾಚರಣೆಗಳಲ್ಲಿನ ಇತರ ಲೋಪಗಳು ಶೇ.84 ರಷ್ಟಿದೆ.
  • ಶೇ.63ರಷ್ಟು ಪ್ರಕರಣಗಳಲ್ಲಿ ನಿಗದಿತ ಸಮಯದೊಳಗೆ ವಿಚಾರಣಾ ವರದಿಗಳನ್ನು ಅಂಗೀಕಾರ ಪ್ರಾಧಿಕಾರಕ್ಕೆ ಸಲ್ಲಿಸಿಲ್ಲ. ಶೇ.49ರಷ್ಟು ಪ್ರಕರಣಗಳಲ್ಲಿ ಅಧಿಕಾರಿಗಳು ವರದಿಗಳನ್ನು ಸ್ವೀಕರಿಸುವಲ್ಲಿ ವಿಳಂಬವಾಗಿದೆ.
  • ಹೆಚ್ಚಿನ ಹಳಿತಪ್ಪಿದ ಪ್ರಕರಣಗಳಿಗೆ ಐದು ಅಂಶಗಳು ಕಾರಣವಾಗಿದೆ. 1 ನಿಯಮಗಳು ಮತ್ತು ಜಂಟಿ ಕಾರ್ಯವಿಧಾನದ ಆದೇಶಗಳು (JPO), 2. ಸಿಬ್ಬಂದಿಯ ತರಬೇತಿ, ಸಮಾಲೋಚನೆ, 3 ಕಾರ್ಯಾಚರಣೆಗಳ ಮೇಲ್ವಿಚಾರಣೆ, 4 ವಿವಿಧ ಇಲಾಖೆಗಳ ಸಿಬ್ಬಂದಿ ನಡುವೆ ಸಮನ್ವಯ ಮತ್ತು ಸಂವಹನ ಮತ್ತು (5) ನಿಗದಿತ ತಪಾಸಣೆಗಳ ವೈಫಲ್ಯ.
  • ಟ್ರ್ಯಾಕ್ ನವೀಕರಣ ಕಾಮಗಾರಿಗಳಿಗೆ ಹಣ ಹಂಚಿಕೆಯಲ್ಲಿ 9,607.65 ಕೋಟಿ (2018-19)ಯಿಂದ 2019-20ರಲ್ಲಿ 7,417 ಕೋಟಿ ರೂ.ಗೆ ಇಳಿಕೆಯಾಗಿದೆ. ನವೀಕರಣ ಕಾಮಗಾರಿಗೆ ಮೀಸಲಿಟ್ಟ ಹಣವೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. 2017-21ರ ಅವಧಿಯಲ್ಲಿ 1,127 ಹಳಿ ತಪ್ಪಿದ ಘಟನೆಗಳಲ್ಲಿ ಶೇ.26ರಷ್ಟು ಎಂದರೆ 289 ಹಳಿ ತಪ್ಪಿದ ಘಟನೆಗಳು ಟ್ರ್ಯಾಕ್ ನವೀಕರಣಗಳಿಗೆ ಸಂಬಂಧಿಸಿವೆ.
  • ರಾಷ್ಟ್ರೀಯ ರೈಲು ಸಂರಕ್ಷಾ ಕೋಶ್ (ಆರ್​ಆರ್​ಎಸ್​ಕೆ)ದಿಂದ ಆದ್ಯತೆಯ-I ಕಾಮಗಾರಿಗಳ ಒಟ್ಟಾರೆ ವೆಚ್ಚವು 2017-18ರಲ್ಲಿ ಶೇ.81.55ರಿಂದ 2019-20ರಲ್ಲಿ ಶೇ.73.76ಕ್ಕೆ ಇಳಿಕೆಯಾಗಿದ್ದು ತೋರಿಸಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.