ETV Bharat / bharat

ಈ ಗೋಲ್ಡ್​ ಲೋನ್ ಬ್ರಾಂಚ್​ನಲ್ಲಿ ಬರೋಬ್ಬರಿ 17 ಕೆಜಿ ಚಿನ್ನ ಲೂಟಿ: 5 ಲಕ್ಷ ನಗದು ದರೋಡೆ

author img

By

Published : Jul 17, 2021, 4:49 PM IST

ಗನ್​ನಿಂದ ಬೆದರಿಸಿ, ನಾಲ್ವರು ದುಷ್ಕರ್ಮಿಗಳು 17 ಕೆಜಿ ಚಿನ್ನ ಮತ್ತು ಐದು ಲಕ್ಷ ರೂ. ನಗದು ದೋಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

17-kg-gold-looted-from-mani-rupam-gold-in-agra
ಮಣಪ್ಪುರಂ ಗೋಲ್ಡ್​ ಲೋನ್ ಬ್ರಾಂಚ್​ನಲ್ಲಿ 17 ಕೆಜಿ ಚಿನ್ನ, 5 ಲಕ್ಷ ನಗದು ಲೂಟಿ

ಆಗ್ರಾ(ಉತ್ತರ ಪ್ರದೇಶ): ಮಣಪ್ಪುರಂ ಗೋಲ್ಡ್ ಲೋನ್ ಬ್ರಾಂಚ್​ಗೆ ನುಗ್ಗಿದ ದುಷ್ಕರ್ಮಿಗಳು 17 ಕೆ.ಜಿ ಚಿನ್ನ ಮತ್ತು 5 ಲಕ್ಷ ರೂಪಾಯಿಗೂ ಹೆಚ್ಚು ನಗದು ದೋಚಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಶುಕ್ರವಾರ ಆಗ್ರಾದ ಜಗದೀಶ್​ಪುರದ ಮಣಪ್ಪುರಂ ಗೋಲ್ಡ್ ಲೋನ್ ಬ್ರಾಂಚ್​​ಗೆ ನುಗ್ಗಿದ್ದ ನಾಲ್ವರು ದುಷ್ಕರ್ಮಿಗಳು ಕಚೇರಿಯ ಗನ್ ಮ್ಯಾನ್ ಪಿಯೂಷ್ ಮತ್ತು ಅಸಿಸ್ಟೆಂಟ್​ ಮ್ಯಾನೇಜರ್ ನೀರಜ್​ ಕುಮಾರ್​ಗೆ ಬೆದರಿಸಿ 550 ಪೊಟ್ಟಣಗಳಲ್ಲಿದ್ದ ಚಿನ್ನ ಮತ್ತು ಮತ್ತು ನಗದನ್ನು ದೋಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಬ್ಬಂದಿಗೆ ಬೆದರಿಸುವ ಮೊದಲು ಬ್ರಾಂಚ್​ನಲ್ಲಿದ್ದ ಸಿಸಿಟಿವಿಯ ಕೆಮರಾದ ವೈರ್​​ಗಳನ್ನು ಕತ್ತರಿಸಿ, ಬೆದರಿಸಿ, ಹಣ ದೋಚಲಾಗಿದೆ ಎಂದು ಬ್ರಾಂಚ್ ಸಿಬ್ಬಂದಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸ್ಥಳಕ್ಕೆ ಕಮಲಾನಗರ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ವಿಷಕಾರಿ ಮದ್ಯ ಸೇವಿಸಿ, 16 ಮಂದಿ ಸಾವು: 5 ಮಂದಿ ವಶಕ್ಕೆ ಪಡೆದು ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.