ETV Bharat / bharat

ಲೀಟರ್​ ಪೆಟ್ರೋಲ್​ಗೆ 35 ಕಿ.ಮೀ. ಮೈಲೇಜ್..​​ ಯೂಟ್ಯೂಬ್​ ನೋಡಿ ಸ್ಪೋರ್ಟ್ಸ್​​ ಕಾರ್ ​ತಯಾರಿಸಿದ ಬಾಲಕ!

author img

By

Published : Feb 21, 2022, 6:18 PM IST

Updated : Feb 22, 2022, 2:41 PM IST

ಕಲವೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಅಗ್ನಿವೇಶ್, ಯುಟ್ಯೂಬ್ ಸಹಾಯದಿಂದ ಕಾರ್ ತಯಾರಿಕೆಯ ಸಂಕೀರ್ಣ ಯಂತ್ರಶಾಸ್ತ್ರದ ಬಗ್ಗೆ ಕಲಿತಿದ್ದಾನೆ. ಕಾರಿನ ಎಲ್ಲಾ ಭಾಗಗಳು ಸ್ಥಳೀಯ ಮೂಲದವೇ ಆಗಿವೆ. 100 ಸಿಸಿ ಸ್ಕೂಟರ್ ಎಂಜಿನ್ ಅವನ ಮೂರು ಚಕ್ರಗಳ ಕಾರಿಗೆ ಶಕ್ತಿಯನ್ನು ನೀಡಿದೆ.

ಯೂಟ್ಯೂಬ್​ ನೋಡಿ ಸ್ಪೋರ್ಟ್​ ಕಾರ್ ​ತಯಾರಿಸಿದ ಬಾಲಕ!
ಯೂಟ್ಯೂಬ್​ ನೋಡಿ ಸ್ಪೋರ್ಟ್​ ಕಾರ್ ​ತಯಾರಿಸಿದ ಬಾಲಕ!

ಅಲಪ್ಪುಳ(ಕೇರಳ) : ಬಡವರಿಗೆ ಅದರಲ್ಲೂ ಗ್ರಾಮೀಣ ಭಾಗದ ಯುವಜನರಿಗೆ ಫೆರಾರಿ ಮತ್ತು ಲಂಬೋರ್ಗಿನಿ ಕಾರುಗಳು ದೂರದ ಕನಸಾಗಿರಬಹುದು. ಆದರೆ ಇದಕ್ಕೂ ಮೀರಿದ ಒಂದು ಕನಸನ್ನು ಬಾಲಕ ನನಸು ಮಾಡಿಕೊಂಡಿದ್ದಾನೆ.

ಅಲಪ್ಪುಳದ ವಳವನಾಡಿನ ಹಳ್ಳಿಯಲ್ಲಿ ವಾಸಿಸುವ 15 ವರ್ಷದ ಹೈಯರ್ ಸೆಕೆಂಡರಿ ವಿದ್ಯಾರ್ಥಿ ಎಲ್ಲರ ಅಚ್ಚುಮೆಚ್ಚಾಗಿದ್ದಾನೆ. ಕಾರಣ ಆತನ ವಿಶಿಷ್ಟ ಬುದ್ಧಿ ಕೌಶಲ್ಯ.

ಸ್ಪೋರ್ಟ್ಸ್ ರೇಸಿಂಗ್ ಕಾರನ್ನು ಓಡಿಸುವ ಕನಸನ್ನು ಬಿಟ್ಟುಕೊಡದ ಅಗ್ನಿವೇಶ್, ತಾನೇ ಒಂದು ವಾಹನವನ್ನು ನಿರ್ಮಾಣ ಮಾಡಿದ್ದಾನೆ. ಪರಿಣಾಮ ಅಗ್ನಿವೇಶ್ ಈಗ ವಳವನಾಡಿನಲ್ಲಿ ಹೀರೋ ಆಗಿದ್ದಾನೆ. ಅವನ ಕನಸಿನ ಕಾರನ್ನು ನೋಡಲು ಎಲ್ಲಿಂದೆಲ್ಲಿಂದಲೋ ಜನ ಬರುತ್ತಿದ್ದಾರೆ.

ಯೂಟ್ಯೂಬ್​ ನೋಡಿ ಸ್ಪೋರ್ಟ್ಸ್​​ ಕಾರ್ ​ತಯಾರಿಸಿದ ಬಾಲಕ!

ಕಲವೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಅಗ್ನಿವೇಶ್, ಯುಟ್ಯೂಬ್ ಸಹಾಯದಿಂದ ಕಾರ್ ತಯಾರಿಕೆಯ ಸಂಕೀರ್ಣ ಯಂತ್ರಶಾಸ್ತ್ರದ ಬಗ್ಗೆ ಕಲಿತಿದ್ದಾನೆ. ಕಾರಿನ ಎಲ್ಲಾ ಭಾಗಗಳು ಸ್ಥಳೀಯ ಮೂಲದವೇ ಆಗಿವೆ. 100 ಸಿಸಿ ಸ್ಕೂಟರ್ ಎಂಜಿನ್ ಅವನ ಮೂರು ಚಕ್ರಗಳ ಕಾರಿಗೆ ಶಕ್ತಿಯನ್ನು ನೀಡಿದೆ. ಈತನ ಈ ಕಾರು ಪ್ರತಿ ಲೀಟರ್‌ ಪೆಟ್ರೋಲ್​ಗೆ 35 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಒಬ್ಬರು ಆರಾಮವಾಗಿ ಈ ಕಾರ್​ನಲ್ಲಿ ಪ್ರಯಾಣಿಸಬಹುದಾಗಿದೆ.

ಇದನ್ನೂ ಓದಿ: ಹಣ ಪಡೆದು ಮಕ್ಕಳನ್ನು 'ದೇವರು' ಎಂದು ಘೋಷಿಸುತ್ತಿದ್ದ ಜ್ಯೋತಿಷಿ: ಪೊಲೀಸ್​, ಮಕ್ಕಳ ಹಕ್ಕು ಆಯೋಗದಿಂದ ತನಿಖೆ ಆರಂಭ

ಅಗ್ನಿವೇಶ್ ತಮ್ಮ ತಂದೆಯ ಹಳೆಯ ಸ್ಕೂಟರ್‌ನ ಎಂಜಿನ್ ಅನ್ನೇ ಈ ಕಾರ್​ಗೆ ಬಳಕೆ ಮಾಡಿಕೊಂಡಿದ್ದಾನೆ. ಪ್ರಮುಖವಾಗಿ ಕಾರ್​ನ್ನು ಒಬ್ಬನೇ ನಿರ್ಮಾಣ ಮಾಡಿ ಈಗ ಹೆಸರುವಾಸಿಯಾಗಿದ್ದಾನೆ.

ಅಗ್ನಿವೇಶ್ ಈ ಹಿಂದೆಯೂ ವಾಹನಗಳನ್ನು ನಿರ್ಮಿಸಿದ್ದ. ಇದು ಆತನ ಮೂರನೇ ವಾಹನವಾಗಿದೆ. ಮೊದಲು ತಯಾರಿಸಿದ ವಾಹನಗಳು ಕೃಷಿ ಬಳಕೆಗೆ ಯೋಗ್ಯವಾಗಿವೆ. ಅಗ್ನಿವೇಶ್ ಅವರ ತಂದೆ ಸತ್ಯಪ್ರಕಾಶ್ ಸ್ಥಳೀಯ ಆಡಳಿತ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಾಯಿ ಎಸ್ ಸುಧಾ ಜಿಎಸ್‌ಟಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Last Updated : Feb 22, 2022, 2:41 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.