ETV Bharat / bharat

ಇವಿಎಂ ಯಂತ್ರದ ಮಾಹಿತಿ ನಿಖರ, ವಿವಿಪ್ಯಾಟ್​ ಸ್ಲಿಪ್​ ಹಿಂದಿನ ಬ್ಯಾಲೆಟ್​ ಪೇಪರ್​ ಎಣಿಕೆಗೆ ಸಮ; ಸುಪ್ರೀಂಗೆ ಚುನಾವಣಾ ಆಯೋಗದ ಮಾಹಿತಿ

author img

By ETV Bharat Karnataka Team

Published : Sep 7, 2023, 4:18 PM IST

ಇವಿಎಂಗಳ ಜೊತೆಗೆ ವಿವಿಪ್ಯಾಟ್​ಗಳಲ್ಲಿನ ಮತಚೀಟಿಗಳನ್ನೂ ಎಣಿಕೆ ಮಾಡಬೇಕು ಎಂದು ಕೋರಿದ ಅರ್ಜಿಗೆ ಉತ್ತರವಾಗಿ ಚುನಾವಣಾ ಆಯೋಗ ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದೆ.

ಸುಪ್ರೀಂಗೆ ಚುನಾವಣಾ ಆಯೋಗ ಮಾಹಿತಿ
ಸುಪ್ರೀಂಗೆ ಚುನಾವಣಾ ಆಯೋಗ ಮಾಹಿತಿ

ನವದೆಹಲಿ: ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​(ಇವಿಎಂ) ಬಳಿಕ ಮತ ಎಣಿಕೆ ಸುಲಲಿತ, ತೀಕ್ಷ್ಣ ಮತ್ತು ನಿಖರವಾಗಿದೆ. ಇದರ ಜೊತೆಗೆ ವಿವಿಪ್ಯಾಟ್​ ಸ್ಲಿಪ್​ಗಳ ಎಣಿಕೆ ನಡೆಸಿದಲ್ಲಿ ಅದು ಈ ಹಿಂದಿನ ಬ್ಯಾಲೆಟ್​ ಪೇಪರ್​ ವ್ಯವಸ್ಥೆಗೆ ಮರಳಿದಂತೆ ಎಂದು ಭಾರತೀಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದೆ.

ಮತದಾರ ಹಾಕಿದ ಮತ ನಿಖರವಾಗಿದೆ ಎಂಬುದನ್ನು ತಿಳಿಯಲು ಮತ್ತು ಇವಿಎಂಗಳ ಮೇಲಿನ ದೋಷದ ಮೇಲೆ ವಕೀಲ ಪ್ರಶಾಂತ್​ ಭೂಷಣ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್​, ವಿವಿಪ್ಯಾಟ್ ಎಣಿಕೆಯ ಬಗ್ಗೆ ಅಫಿಡವಿಟ್​ ಸಲ್ಲಿಸಲು ಸೂಚಿಸಿತ್ತು. ಅದರಂತೆ ಚುನಾವಣಾ ಆಯೋಗ ವಿವಿಪ್ಯಾಟ್​ಗಳ ಎಣಿಕೆ ಏಕೆ ಬೇಡ ಎಂಬುದನ್ನು ಅಫಡವಿಟ್​ನಲ್ಲಿ ವಿವರವಾಗಿ ಹೇಳಿದೆ.

ಶೇ.100ರಷ್ಟು ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆಯು ಇವಿಎಂ ಬಳಕೆಗೆ ವಿರುದ್ಧವಾಗಿದೆ. ಇದು ನಮ್ಮನ್ನು ಈ ಹಿಂದಿನ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಮರಳಿಸುತ್ತದೆ. ಇವಿಎಂ ಎಣಿಕೆ ಮತ್ತು ವಿವಿಪ್ಯಾಟ್​ ಸ್ಲಿಪ್‌ಗಳ ಎಣಿಕೆ ನಡುವೆ ವ್ಯತ್ಯಾಸವಿಲ್ಲ. ಇದರಲ್ಲಿ ಮಾನವ ದೋಷದಿಂದ ಮಾತ್ರ ಹೆಚ್ಚು ಕಡಿಮೆ ಫಲಿತಾಂಶ ಬರಬಹುದೇ ವಿನಹಃ ತಾಂತ್ರಿಕವಾಗಿ ಎರಡೂ ಸಮಾನವಾಗಿವೆ ಎಂದು ವರದಿಯಲ್ಲಿ ಹೇಳಿದೆ.

ಚುನಾವಣಾ ಆಯೋಗ 469 ಪುಟಗಳ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ಮತದಾರ ತಮ್ಮ ಮತವನ್ನು ಚಲಾಯಿಸಲಾಗಿದೆ ಎಂಬು ನಿಖರವಾಗಿ ಇವಿಎಂ ಮತ್ತು ವಿವಿಪ್ಯಾಟ್​ನಲ್ಲಿ ದಾಖಲಾಗುತ್ತದೆ. ಇದನ್ನು ಮತದಾರ ವಿವಿಪ್ಯಾಟ್​ ಮೂಲಕ ಪರಿಶೀಲಿಸುವ ಹಕ್ಕು ಇಲ್ಲ. ವಿವಿಪ್ಯಾಟ್​ ಮೂಲಭೂತವಾಗಿ ಮತದಾರನ ಮತ ಬ್ಯಾಲೆಟ್ ಯೂನಿಟ್‌ನಲ್ಲಿ ದಾಖಲಾಗುವ 'ಆಡಿಟ್ ಟ್ರಯಲ್' ಆಗಿದೆ. ಇವಿಎಂಗಳೇ ನಿಖರವಾದ ಮಾಹಿತಿ ನೀಡುವುದರಿಂದ ವಿವಿಪ್ಯಾಟ್​ಗಳ ಅಗತ್ಯವಿಲ್ಲ. ಹಾಗೊಂದು ವೇಳೆ ಅವುಗಳಲ್ಲಿ ಸ್ಲಿಪ್​ಗಳ ಎಣಿಕೆ ನಡೆಸಿದಲ್ಲಿ ನಾವು ಹಿಂದಿನ ಪದ್ಧತಿಯಾದ ಬ್ಯಾಲೆಟ್​ ಪೇಪರ್​ ಎಣಿಕೆಗೆ ಸಮಾನವಾಗುತ್ತದೆ. ಹೀಗಾಗಿ ಮನವಿಯನ್ನು ವಜಾ ಮಾಡಬೇಕು ಎಂದು ಕೋರಿದೆ.

ಇವಿಎಂ ವ್ಯವಸ್ಥೆ ನಿಖರ: ಇವಿಎಂಗಳ ಕಾರ್ಯವೈಖರಿ ಬಗ್ಗೆ ವಿವರಿಸಿರುವ ಆಯೋಗ, ಎಲೆಕ್ಟ್ರಾನಿಕ್​ ವೋಟಿಂಗ್​ ಮಷಿನ್​ ವ್ಯವಸ್ಥೆ ನಿಖರವಾಗಿದೆ. ಅದು ಮತದಾರ ಹಾಕಿದ ಮತವನ್ನು ನಿಚ್ಚಳವಾಗಿ ದಾಖಲಿಸುತ್ತದೆ. ಅದರಲ್ಲಿನ ಯೂನಿಟ್​ ಕಂಟ್ರೋಲ್​ ಮತದಾರನ ಮತವನ್ನು ದಿನಾಂಕ, ಸಮಯವನ್ನು ಮುದ್ರಿಸಿ ದಾಖಲಿಸುತ್ತದೆ. ಇದನ್ನು ಡಿಕೋಡರ್​ ಅಥವಾ ಪ್ರಿಂಟರ್​ ಬಳಸಿ ಪಡೆಯಬಹುದು ಎಂದು ತಿಳಿಸಿದೆ.

ಇವಿಎಂ ಮತ್ತು ವಿವಿಪ್ಯಾಟ್ ಸ್ಲಿಪ್​ಗಳ ಎಣಿಕೆಯಲ್ಲಿ ಮಾನವ ತಪ್ಪಿನಿಂದಾಗಿ ಮಾತ್ರ ಫಲಿತಾಂಶ ಏರಳಿತವಾಗುತ್ತದೆಯೇ ಹೊರತು, ಅವುಗಳ ತಾಂತ್ರಿಕ ವ್ಯವಸ್ಥೆಯಲ್ಲಿ ಯಾವುದೇ ದೋಷವಿಲ್ಲ. ಇಲ್ಲಿಯವರೆಗೆ 34,680 ವಿವಿಪ್ಯಾಟ್​ಗಳಲ್ಲಿನ ಮತ ಚೀಟಿಗಳನ್ನು ಇವಿಎಂನ ಜೊತೆ ತಾಳೆ ಮಾಡಿ ನೋಡಲಾಗಿದೆ. ಮೊದಲ ಅಭ್ಯರ್ಥಿಯ ಮತವನ್ನು ಎರಡನೇ ಅಭ್ಯರ್ಥಿಗೆ ವರ್ಗಾಯಿಸಿದ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ ಎಂದು ದೃಢವಾಗಿ ಹೇಳಿದೆ.

ಹ್ಯಾಕ್​ ಮಾಡಲು ಸಾಧ್ಯವಿಲ್ಲ: ಇವಿಎಂಗಳು ತಾಂತ್ರಿಕ ಸುರಕ್ಷತೆ ಹೊಂದಿವೆ. ಇವುಗಳನ್ನು ಯಾವುದೇ ತಂತ್ರ ಬಳಸಿ ಬದಲಿಸಲು ಸಾಧ್ಯವಿಲ್ಲ. ಅತ್ಯಂತ ಪಾರದರ್ಶಕ ಫಲಿತಾಂಶ ನೀಡುವ ಯಂತ್ರಗಳು ಒನ್ ಟೈಮ್ ಪ್ರೊಗ್ರಾಮೆಬಲ್ (ಒಟಿಪಿ) ಚಿಪ್‌ಗಳನ್ನು ಹೊಂದಿವೆ. ಇದನ್ನು ಹ್ಯಾಕ್ ಮಾಡಲು ಅಥವಾ ಟ್ಯಾಂಪರ್ ಮಾಡಲು ಸಾಧ್ಯವಿಲ್ಲ ಎಂದು ಅಫಿಡವಿಟ್ ಹೇಳಿದೆ. ವಿವಿಪ್ಯಾಟ್‌ಗಳನ್ನು ಪರಿಚಯಿಸಿದ ನಂತರ 118 ಕೋಟಿಗೂ ಹೆಚ್ಚು ಮತದಾರರು ಪೂರ್ಣ ತೃಪ್ತರಾಗಿ ಮತ ಚಲಾಯಿಸಿದ್ದಾರೆ. ಇದರಲ್ಲಿ ಕೇವಲ 25 ದೂರುಗಳನ್ನು ಮಾತ್ರ ಸ್ವೀಕರಿಸಲಾಗಿದೆ. ಇವೆಲ್ಲವೂ ಸುಳ್ಳು ಎಂದು ಸಾಬೀತಾಗಿವೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ: ಏಕಕಾಲಕ್ಕೆ ಚುನಾವಣೆ ನಡೆದರೆ ಇವಿಎಂ-ವಿವಿಪ್ಯಾಟ್ ಖರೀದಿಗೆ ₹9,300 ಕೋಟಿ ವೆಚ್ಚ: ಚುನಾವಣಾ ಆಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.