ETV Bharat / assembly-elections

ಕೆಲವರ ಮಾತಿಗೆಲ್ಲ ನಾನು ಪ್ರತಿಕ್ರಿಯಿಸಲ್ಲ: ಸಚಿವ ವಿ.ಸೋಮಣ್ಣ ಗರಂ

author img

By

Published : Apr 14, 2023, 1:35 PM IST

ಕೆಲವರ ಮಾತಿಗೆಲ್ಲಾ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ರುದ್ರೇಶ್ ವಿರುದ್ಧ ಸಚಿವ ಸೋಮಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Minister V Somanna
ವಿ.ಸೋಮಣ್ಣ

ಚಾಮರಾಜನಗರದಲ್ಲಿ ಸಚಿವ ವಿ.ಸೋಮಣ್ಣ ಮಾತನಾಡಿದರು.

ಚಾಮರಾಜನಗರ: ಕೆಲವರ ಮಾತಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲ್ಲ ಎನ್ನುವ ಮೂಲಕ ರುದ್ರೇಶ್ ವಿರುದ್ಧ ಸಚಿವ ಸೋಮಣ್ಣ ಕಿಡಿಕಾರಿದರು. ಇಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನನ್ನ ವಿರುದ್ಧ ನನ್ನ ಮೇಲ್ಪಟ್ಟವರು ಮಾತನಾಡಿದರೆ ನಾನು ಮಾತನಾಡುತ್ತೇನೆ. ಅದು ಬಿಟ್ಟು ಕೆಲವರಿಗೆ ಪ್ರತಿಕ್ರಿಯಿಸಲ್ಲ. ಆ ಥರದವರ ಬಗ್ಗೆ ನೀವು ಕೂಡ ಪ್ರಶ್ನೆ ಕೇಳಬೇಡಿ ಎಂದು ಗರಂ ಆದರು. ಬಂಡಾಯದ ವಿಚಾರ ಬಗ್ಗೆ ಸಚಿವ ಸೋಮಣ್ಣ ಪ್ರತಿಕ್ರಿಯಿಸಿ ಅದು ಪಕ್ಷದ ಆಂತರಿಕ ವಿಚಾರ, ಪಾರ್ಟಿ ನಾಯಕರು ಎಲ್ಲವನ್ನೂ ಸೆಟರೈಟ್ ಮಾಡುತ್ತಾರೆ. 17 ರಂದು ವರುಣದಲ್ಲಿ 19 ರಂದು ಚಾಮರಾಜನಗರದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನಮ್ಮ ವರಿಷ್ಠರ ಸೂಚನೆ ಮೇರೆಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಜನರು ಬದಲಾವಣೆ ಬಯಸಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲ್ಲಿದೆ. ಚುನಾವಣೆಯಲ್ಲಿ ಸೋಮಣ್ಣನೇ ಸ್ಟಾರ್ ಪ್ರಚಾರಕ, ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಸೋಲ್ತಿನಿ ಅಂತಾ ಇಲ್ಲಿಗೆ ಬಂದಿಲ್ಲ: ಗೋವಿಂದರಾಜನಗರಲ್ಲಿ ಸೋಲುವೆ ಅಂತಾ ಇಲ್ಲಿಗೆ ಬಂದಿಲ್ಲ, ಗೆಲ್ಲುತ್ತೇನೆ ಎಂದು ಬಂದಿರುವೆ ಎಂದು ವಿ.ಸೋಮಣ್ಣ ಗುಡುಗಿದರು. ಟಿಕೆಟ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಚಾಮರಾಜನಗರಕ್ಕೆ ಆಗಮಿಸಿದ ಅವರು ಬಿಜೆಪಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿದರು. ಬಳಿಕ ಮಾತನಾಡಿ, ಗೋವಿಂದರಾಜನಗರದಲ್ಲಿ ಸೋಲ್ತಿನಿ ಅಂತಾ ಸೋಮಣ್ಣ ಇಲ್ಲಿಗೆ ಬಂದಿದ್ದಾರೆ ಅಂತೆಲ್ಲಾ ಕೆಲವರು ಹೇಳ್ತಾರೆ. ಆದರೆ, ಅದು ಸುಳ್ಳು. ಬೆಂಗಳೂರಲ್ಲಿ 5ರಿಂದ 6 ಕ್ಷೇತ್ರ ಗೆಲ್ಲಿಸುವ ಸಾಮರ್ಥ್ಯ ನನಗಿದೆ ಎಂದರು.

ನನಗೆ ಇದು ಬಯಸದೇ ಬಂದ ಭಾಗ್ಯ ಅಂಥಲ್ಲಾ, ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇಟ್ಟು ಈ ಕೆಲಸ ಕೊಟ್ಟಿದೆ, ನಾನೋರ್ವ ಜಾತ್ಯತೀತ ನಾಯಕ, ಸಿದ್ದರಾಮಯ್ಯ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸಿದ್ದಾರೆ. ವರುಣದಲ್ಲಿ ನನ್ನನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಥಕಥೈ ಅಂಥಾ ಕುಣಿತೀದಾರೆ. ಚಾಮರಾಜನಗರಕ್ಕೆ ಏನಾಗಿದೆ ಪುಟ್ ಬಾಲ್, ವಾಲಿಬಾಲ್, ಗೋಲಿ ಎಲ್ಲಾ ಆಡ್ತೀದಿರಾ ಎಂದು ಬಂಡಾಯ ಸಾರಿದ್ದವರಿಗೆ ನಯವಾಗಿ ಚೇಡಿಸಿದರು.

ಜಿಲ್ಲೆ ಘೋಷಣೆಯಾಗಿದ್ದಾಗಿನಿಂದ ಈಗಲೂ ಚಾಮರಾಜನಗರ ಹಾಗೇ ಇದೆ. ಇದರ ಸಮಗ್ರ ಅಭಿವೃದ್ಧಿಯನ್ನು ಸೋಮಣ್ಣ ಮಾಡ್ತಾನೆ, 13ರ ಬಳಿಕ ನಿಮ್ಮ ಸೇವಕನಾಗಿರುತ್ತೇನೆ, ಮೋದಿ ಕಾರ್ಯಕ್ರಮದಲ್ಲಿ ನಂಬಿಕೆ ಇದ್ದರೇ ನನ್ನನ್ನು ಬೆಂಬಲಿಸಿ, ಜನರ ಬಳಿ ತೆರಳಿ ಮತಯಾಚಿಸಿ ಎಂದು ಮನವಿ ಮಾಡಿದರು. ಟಿಕೆಟ್ ಘೋಷಣೆಯಾದ ಬಳಿಕ ಸ್ಫೋಟಗೊಂಡಿದ್ದ ಬಂಡಾಯಕ್ಕೆ ಬಿಜೆಪಿ ಮುಲಾಮು ಹಚ್ಚುವ ಕೆಲಸಕ್ಕೆ ಮುಂದಾಗಿದ್ದು ಟಿಕೆಟ್ ವಂಚಿತರ ಮನೆಗೆ ನಾಯಕರು ಪರೇಡ್ ನಡೆಸಿದರು.

ಅಸಮಾಧಾನ ಶಮನ: ಚಾಮರಾಜನಗರ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗಶ್ರೀ ಪ್ರತಾಪ್ ಮತ್ತು ಅವರ ಬೆಂಬಲಿಗರು ಟಿಕೆಟ್ ಘೋಷಣೆಯಾದ ಬಳಿಕ ಕೆರಳಿ ಕೆಂಡವಾದ ಹಿನ್ನೆಲೆಯಲ್ಲಿ ಸಚಿವ ವಿ.ಸೋಮಣ್ಣ ಅವರು, ಚಾಮರಾಜನಗರ ಜಿಲ್ಲಾ ಚುನಾವಣಾ ಉಸ್ತುವಾರಿ ಹೊತ್ತಿರುವ ಬಿಹಾರದ ಎಂಎಲ್​ಸಿ ಜೈಸ್ವಾಲ್, ಮಾಜಿ ಎಂಪಿ ಕೋಟೆ ಶಿವಣ್ಣ ನಾಗಶ್ರೀ ಪ್ರತಾಪ್ ಅವರ ಮನೆಗೆ ಭೇಟಿಕೊಟ್ಟು ಬಂಡಾಯ ಶಮನಕ್ಕೆ ಮುಂದಾದರು. ಸದ್ಯದ ಪರಿಸ್ಥಿತಿಯಲ್ಲಿ ನಾಗಶ್ರೀ ಅವರು ಯಾವುದೇ ಮಾತುಗಳನ್ನು ಆಡಿಲ್ಲ. ಎರಡು ದಿನ ಯೋಚಿಸಿ, ಬೆಂಬಲಿಗರ ಜೊತೆ ಚರ್ಚಿಸಿ ಮಾತನಾಡುವೆ ಎಂದಷ್ಟೇ ಹೇಳಿದ್ದಾರೆ.

ಇದನ್ನೂ ಓದಿ: ಸೋಮಣ್ಣನಾದ್ರೂ ಬರಲಿ, ಯಾರಾದ್ರೂ ಬರಲಿ ವರುಣಾದಲ್ಲಿ ಗೆಲುವು ನನ್ನದೇ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.