ETV Bharat / assembly-elections

ರಾಜಸ್ಥಾನ ವಿಧಾನಸಭೆ ಚುನಾವಣೆ: ಕಾಂಗ್ರೆಸ್​ನ 25 ಸಚಿವರ ಪೈಕಿ 17 ಮಂದಿಗೆ ಸೋಲು

author img

By ETV Bharat Karnataka Team

Published : Dec 4, 2023, 1:22 PM IST

Rajasthan assembly elections: ಈ ಬಾರಿಯ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರದ 25 ಸಚಿವರ ಪೈಕಿ 17 ಜನ ಸೋಲು ಕಂಡಿದ್ದಾರೆ. ರಾಜ್ಯದ 199 ಸ್ಥಾನಗಳಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದು ಬೀಗಿದೆ.

Rajasthan assembly elections
ರಾಜಸ್ಥಾನ ವಿಧಾನಸಭೆ ಚುನಾವಣೆ: ಕಾಂಗ್ರೆಸ್​ನ 25 ಸಚಿವರ ಪೈಕಿ 17 ಮಂದಿಗೆ ಸೋಲು

ಜೈಪುರ(ರಾಜಸ್ಥಾನ): ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಕಾಂಗ್ರೆಸ್ ಸರ್ಕಾರದ 25 ಸಚಿವರ ಪೈಕಿ 17 ಮಂದಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಒಟ್ಟು 199 ಸ್ಥಾನಗಳಲ್ಲಿ 115 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಮರಳಿ ರಾಜಸ್ಥಾನದ ಗದ್ದುಗೆ ಏರಿದೆ.

ರಾಜ್ಯದಲ್ಲಿ ಮತ್ತೊಮ್ಮೆ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ 68 ಸ್ಥಾನಗಳನ್ನು ಗಳಿಸಿತು. ಖಜುವಾಲಾದಲ್ಲಿ ಬಿಜೆಪಿಯ ವಿಶ್ವನಾಥ್ ಮೇಘವಾಲ್ ವಿರುದ್ಧ ಗೋವಿಂದ್ ಮೇಘವಾಲ್ 17,374 ಮತಗಳ ಅಂತರದಿಂದ ಪರಾಭವಗೊಂಡರು. ಕಾಂಗ್ರೆಸ್ ಮಂತ್ರಿಗಳಾದ ರಮೇಶ್ ಚಂದ್ ಮೀನಾ (ಸಪೋತ್ರಾ)- 43,834 ಮತಗಳು, ಶೇಲ್ ಮೊಹಮ್ಮದ್ (ಪೋಕರನ್)- 35,427 ಮತಗಳು, ಭನ್ವರ್ ಸಿಂಗ್ ಭಾಟಿ (ಕೊಲಾಯತ್)- 32,933 ಮತಗಳು, ಶಕುಂತಲಾ ರಾವತ್ (ಬಾನ್ಸೂರ್) 7,420 ಮತಗಳು, ವಿಶ್ವೇಂದ್ರ ಸಿಂಗ್ (ದೀಗ್ ಕುಮ್ಹೆರ್) 7,895 ಮತಗಳು ಮತ್ತು ಉದೈಲಾಲ್ ಅಂಜನಾ (ನಿಂಬಹೇರಾ) ಅವರು 3,845 ಮತಗಳ ಅಂತರದಿಂದ ಸೋತಿದ್ದಾರೆ.

ಪ್ರತಾಪ್ ಸಿಂಗ್ ಖಚರಿಯಾವಾಸ್ (ಸಿವಿಲ್ ಲೈನ್ಸ್) 28,329 ಮತಗಳ ಅಂತರದಿಂದ ಮತ್ತು ಬಿಡಿ ಕಲ್ಲ (ಬಿಕಾನೇರ್ ಪಶ್ಚಿಮ) 20,194 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಜಹಿದಾ ಖಾನ್ (ಕಾಮನ್) ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ವಿರುದ್ಧ 13,906 ಮತಗಳಿಂದ ಸೋತು, ಮೂರನೇ ಸ್ಥಾನ ಪಡೆದರು.

ಸಚಿವರಾದ ಭಜನ್ ಲಾಲ್ ಜಾತವ್ (ವೀರ್), ಮಮತಾ ಭೂಪೇಶ್ (ಸಿಕ್ರೈ), ಪರ್ಸಾದಿ ಲಾಲ್ ಮೀನಾ (ಲಾಲ್ಸೋಟ್), ಸುಖರಾಮ್ ವಿಷ್ಣೋಯ್ (ಸಂಚೋರ್), ರಾಮ್‌ಲಾಲ್ ಜಾಟ್ (ಮಂಡಲ್), ಪ್ರಮೋದ್ ಜೈನ್ ಭಯಾ (ಅಂತ) ಮತ್ತು ರಾಜೇಂದ್ರ ಯಾದಬ್ವ್ (ಕೋಟ್‌ಪುಟ್ಲಿ) ಅವರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.

ಅಶೋಕ್ ಗೆಹ್ಲೋಟ್‌ ಸಲಹೆಗಾರರಿಗೆ ಸೋಲು: ಗೆಹ್ಲೋಟ್‌ರ ಐವರು ಸಲಹೆಗಾರರಾದ ಸನ್ಯಾಮ್ ಲೋಧಾ (ಸಿರೋಹಿ), ರಾಜ್‌ಕುಮಾರ್ ಶರ್ಮಾ (ನವಲ್‌ಗಢ), ಬಾಬು ಲಾಲ್ ನಗರ (ದುಡು), ಡ್ಯಾನಿಶ್ ಅಬ್ರಾರ್ (ಸ್ವೈಮಾಧೋಪುರ್) ಮತ್ತು ಮಾಜಿ ಮುಖ್ಯ ಕಾರ್ಯದರ್ಶಿ ನಿರಂಜನ್ ಆರ್ಯ (ಸೋಜತ್) ಅರು ಕೂಡ ಚುನಾವಣಾ ಕಣದಲ್ಲಿ ಸೋತಿದ್ದಾರೆ. ಸರ್ದಾರ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ಮಹೇಂದ್ರ ರಾಥೋಡ್ ಅವರನ್ನು ಸೋಲಿಸುವ ಮೂಲಕ ಅಶೋಕ್​ ಗೆಹ್ಲೋಟ್ 26,396 ಮತಗಳ ಅಂತರದಿಂದ ಗೆದ್ದಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು 45,597 ಮತಗಳ ಅಂತರದಿಂದ ಗೆದ್ದಿದ್ದರು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ, ಈ ಬಾರಿ ಅಶೋಕ್​ ಗೆಹ್ಲೋಟ್ ಅವರು ಗೆಲುವಿನ ಅಂತರ ಕಡಿಮೆಯಾಗಿದೆ.

ಹಿಂದೋಳಿ ಕ್ಷೇತ್ರದಲ್ಲಿ ಸಚಿವ ಅಶೋಕ್ ಚಂದನಾ 45,004 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2018ರಲ್ಲಿ ಚಂದನಾ ಅವರ ಗೆಲುವಿನ ಅಂತರ 30,541 ಇತ್ತು. ಶಾಂತಿ ಧರಿವಾಲ್ ಅವರು ಕೋಟಾ ಉತ್ತರ ಕ್ಷೇತ್ರವನ್ನು 2,486 ಮತಗಳ ಅಲ್ಪ ಅಂತರದಿಂದ ಗೆದ್ದಿದ್ದಾರೆ. ಬ್ರಜೇಂದ್ರ ಓಲಾ (ಜುಂಜುನು), ಮುರಾರಿ ಲಾಲ್ ಮೀನಾ (ದೌಸಾ), ಅರ್ಜುನ್ ಸಿಂಗ್ ಬಮಾನಿಯಾ (ಬನ್ಸ್ವಾರಾ), ಟಿಕಾರಾಂ ಜುಲ್ಲಿ (ಅಲ್ವಾರ್ ಗ್ರಾಮಾಂತರ) ಮತ್ತು ಮಹೇಂದ್ರ ಜೀತ್ ಸಿಂಗ್ ಮಾಲ್ವಿಯಾ (ಬಾಗಿಡೋರಾ) ಕೂಡ ಗೆದ್ದಿದ್ದಾರೆ. ಆರ್‌ಎಲ್‌ಡಿಯ ಸುಭಾಷ್ ಗರ್ಗ್ ಭರತ್‌ಪುರವನ್ನು ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಿಜೋರಾಂ ಮತ ಎಣಿಕೆ: ಸ್ಪಷ್ಟ ಬಹುಮತದತ್ತ ಝಡ್‌ಪಿಎಂ ದಾಪುಗಾಲು; ಸಿಎಂ, ಡಿಸಿಎಂಗೆ ಹಿನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.