ಕರ್ನಾಟಕ

karnataka

ಭಾರತೀಯ ಸೇನೆಯ ವಿವಿಧ ಬ್ಯಾಂಡ್​ಗಳಿಂದ ಅದ್ಧೂರಿಯಾಗಿ ನಡೆದ ಬೀಟಿಂಗ್ ರಿಟ್ರೀಟ್: ವಿಡಿಯೋ

By ETV Bharat Karnataka Team

Published : Jan 29, 2024, 10:52 PM IST

ಭಾರತೀಯ ಸೇನೆಯ ವಿವಿಧ ಬ್ಯಾಂಡ್​ಗಳಿಂದ ಅದ್ಧೂರಿಯಾಗಿ ನಡೆದ ಬೀಟಿಂಗ್ ರಿಟ್ರೀಟ್: ವಿಡಿಯೋ

ನವದೆಹಲಿ: ರಾಷ್ಟ್ರ ರಾಜಧಾನಿಯ ವಿಜಯ್ ಚೌಕ್‌ನಲ್ಲಿ ಇಂದು ಸಂಜೆ ಗಣರಾಜ್ಯೋತ್ಸವದ ಸಮಾಪ್ತಿಯನ್ನು ಸೂಚಿಸುವ ಬೀಟಿಂಗ್ ರಿಟ್ರೀಟ್ ಸಮಾರಂಭ ನಡೆಯಿತು. ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಸಂಗೀತ ಬ್ಯಾಂಡ್‌ಗಳು ಭಾರತೀಯ ಗೀತೆಗಳ ಟ್ಯೂನ್​ಗಳನ್ನು ನುಡಿಸಿದವು. ಬೀಟಿಂಗ್ ರಿಟ್ರೀಟ್ ಸಮಾರಂಭವು ಎಲ್ಲಾ ಬ್ಯಾಂಡ್​ಗಳ ಶಂಖನಾದದೊಂದಿಗೆ ಪ್ರಾರಂಭವಾಯಿತು.

ನಂತರ ವೀರ್ ಭಾರತ್, ಸಂಗಮ್ ದುರ್, ದೇಶೋನ್ ಕಾ ಸರ್ತಾಜ್ ಭಾರತ್, ಭಾಗೀರಥಿ ಮತ್ತು ಅರ್ಜುನ ಮುಂತಾದ ರೋಮಾಂಚಕ ರಾಗಗಳನ್ನು ಪೈಪ್ಸ್ ಮತ್ತು ಡ್ರಮ್ಸ್ ಬ್ಯಾಂಡ್ ಹಾಗೂ CAPF ಬ್ಯಾಂಡ್‌ಗಳು ಭಾರತ್ ಕೆ ಜವಾನ್ ಮತ್ತು ವಿಜಯ್ ಭಾರತ್ ಸೇರಿದಂತೆ ಹಲವು ಗೀತೆಗಳ ಟ್ಯೂನ್​ಗಳನ್ನು ನುಡಿಸಿದವು. ಟೈಗರ್ ಹಿಲ್, ರಿಜಾಯಿಸ್ ಇನ್ ರೈಸಿನಾ ಮತ್ತು ಸ್ವದೇಶಿ, ಐಎನ್‌ಎಸ್ ವಿಕ್ರಾಂತ್ ಸೇರಿದಂತೆ ಹಲವಾರು ಟ್ಯೂನ್‌ಗಳನ್ನು ಭಾರತೀಯ ವಾಯುಪಡೆ ಬ್ಯಾಂಡ್​ಗಳು ನುಡಿಸಿದವು. ಎಲ್ಲ ಬ್ಯಾಂಡ್‌ಗಳು ಸೇರಿ ಏ ಮೇರೆ ವತನ್ ಕೆ ಲೋಗೋನ್ ಅನ್ನು ನುಡಿಸಿದವು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಮಂತ್ರಿಗಳು ಬೀಟಿಂಗ್ ರಿಟ್ರೀಟ್​ನಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಬಾರಿಗೆ ಈ ವಿಶ್ವಪ್ರಸಿದ್ಧ ದರ್ಗಾದಲ್ಲಿ ನೆರವೇರಿದೆ ಧ್ವಜಾರೋಹಣ: ವಿಡಿಯೋ

ABOUT THE AUTHOR

...view details