ಕರ್ನಾಟಕ

karnataka

ತುಮಕೂರು: ತೆಂಗಿನ ನಾರು ಫ್ಯಾಕ್ಟರಿಯಲ್ಲಿ ಬೆಂಕಿ; ಸಾಮಗ್ರಿ ಸುಟ್ಟು ಕರಕಲು - Fire Accident

By ETV Bharat Karnataka Team

Published : Apr 11, 2024, 6:28 PM IST

ತೆಂಗಿನ ನಾರು ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ

ತುಮಕೂರು: ತೆಂಗಿನ ನಾರು ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ ಮೌಲ್ಯದ ಸಾಮಗ್ರಿ ಸುಟ್ಟು ಕರಕಲಾಗಿರುವ ಘಟನೆ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಹನುಮಂತರಾಜು ಎಂಬವರಿಗೆ ಸೇರಿದ್ದ ಫ್ಯಾಕ್ಟರಿಯಲ್ಲಿ ನಿನ್ನೆ ಮಧ್ಯಾಹ್ನ ಸುಮಾರು 2ರಿಂದ 3.30ರ ಮಧ್ಯೆ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ಕಾರ್ಖಾನೆಯಲ್ಲಿದ್ದ ಯಂತ್ರೋಪಕರಣಗಳು, ತೆಂಗಿನ ನಾರು ಮತ್ತು ಕಾಯಿ ಮಟ್ಟೆಗಳು ಸುಟ್ಟು ಕರಕಲಾಗಿವೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಇದಕ್ಕೂ ಮುನ್ನ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗದೆ ಇಡೀ ಫ್ಯಾಕ್ಟರಿಗೆ ಬೆಂಕಿ ಆವರಿಸಿದೆ. ಧೂಮಪಾನ ಮಾಡಿ ಬೆಂಕಿ ಕಿಡಿ ಬೀಳಿಸಿದ್ದರಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.   

ಇತ್ತೀಚಿನ ಘಟನೆ: ಕಳೆದ ಭಾನುವಾರ ಟೈರ್ ಗೋದಾಮು ಹೊತ್ತಿ ಉರಿದ ಘಟನೆ ಚಾಮರಾಜಪೇಟೆಯ ಟಿ.ಆರ್.ಮಿಲ್ ಬಳಿ ನಡೆದಿತ್ತು. ಬೆಂಕಿ ಪಕ್ಕದ ಪೈಪ್​ ಮತ್ತು ಪ್ಲೈವುಡ್​ ಗೋದಾಮಿಗೂ ವ್ಯಾಪಿಸಿ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿತ್ತು. 

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಟೈರ್ ಗೋದಾಮು - Fire accident

ABOUT THE AUTHOR

...view details