ಕರ್ನಾಟಕ

karnataka

ಬೆಂಗಳೂರಿನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಟೈರ್ ಗೋದಾಮು - Fire accident

By ETV Bharat Karnataka Team

Published : Apr 7, 2024, 10:47 AM IST

ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಅಗ್ನಿ ಅವಘಡ: ಹೊತ್ತಿ ಉರಿದ ಟೈರ್ ಗೋದಾಮು

ಬೆಂಗಳೂರು: ಇಂದು (ಭಾನುವಾರ) ಬೆಳ್ಳಂಬೆಳಗ್ಗೆ ಟೈರ್ ಗೋದಾಮು ಹೊತ್ತಿ ಉರಿದ ಘಟನೆ ಚಾಮರಾಜಪೇಟೆಯ ಟಿ.ಆರ್. ಮಿಲ್ ಬಳಿ ನಡೆದಿದೆ. ಟೈರ್​ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಪೈಪ್​ ಮತ್ತು ಪ್ಲೈವುಡ್​ ಗೋದಾಮಿಗೂ ವ್ಯಾಪಿಸಿದ ಪರಿಣಾಮ ಭಾರಿ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿದೆ.

ಬೆಳಗಿನ ಜಾವ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಗೋದಾಮಿನಲ್ಲಿರುವ ವಸ್ತುಗಳು ಸಿಡಿಯಲಾರಂಭಿಸಿದ್ದವು. ತಕ್ಷಣ ಅಕ್ಕಪಕ್ಕದ ಮನೆಗಳ ಜನ ಎದ್ದುಬಂದು ನೋಡಿದಾಗ ಬೆಂಕಿ ವ್ಯಾಪಿಸಿರುವುದು ತಿಳಿದಿದೆ. ಕೂಡಲೇ ಸ್ಥಳಕ್ಕೆ ಬಂದ ಗಸ್ತು ಪೊಲೀಸರು, 'ಅಕ್ಕ ಪಕ್ಕ ಮನೆಯವರು ಎಲ್ಲರೂ ಹೊರಗಡೆ ಬರುವಂತೆ' ಅನೌನ್ಸ್ ಮಾಡಿದರು.

ಬಳಿಕ ಸ್ಥಳಕ್ಕೆ ಐದು ವಾಹನಗಳೊಂದಿಗೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ಆರಿಸುವ ಕೆಲಸ ನಡೆಸಿದ್ದಾರೆ. ಮೇಲ್ನೋಟಕ್ಕೆ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಈ ವೇಳೆ ಕಟ್ಟಡದಲ್ಲಿ ಯಾರೂ ಇರದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ಕಸಕ್ಕೆ ಹಚ್ಚಿದ್ದ ಬೆಂಕಿ ಕಿಡಿ ತಗುಲಿ ಹೊತ್ತಿ ಉರಿದ ಕಾರುಗಳು - Fire accident

ABOUT THE AUTHOR

...view details