ಕರ್ನಾಟಕ

karnataka

ಲೋಕಸಭೆ ಚುನಾವಣೆ: ಏ.19ರಿಂದ 7 ಹಂತದಲ್ಲಿ ಮತದಾನ; ಜೂ.4ಕ್ಕೆ ಮತಎಣಿಕೆ

By ETV Bharat Karnataka Team

Published : Mar 16, 2024, 3:00 PM IST

Updated : Mar 16, 2024, 4:58 PM IST

ನವದೆಹಲಿ: ಲೋಕಸಭೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ನವದೆಹಲಿಯಲ್ಲಿ ಚುನಾವಣಾಧಿಕಾರಿಗಳು ಮಾಧ್ಯಮಗೋಷ್ಠಿ ನಡೆಸಿದರು. ಲೋಕಸಭೆಗೆ ಒಟ್ಟೂ 7 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು.ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು. ಲೋಕಸಭೆ ಜೊತೆಗೆ ನಾಲ್ಕು ವಿಧಾನಸಭೆ ಚುನಾವಣೆಗಳ ದಿನಾಂಕಗಳನ್ನು ಸಹ ಘೋಷಿಸಲಾಗಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್​​​​ 19ಕ್ಕೆ ನಡೆಯಲಿದ್ದರೆ, ಜೂನ್​ 4ಕ್ಕೆ ಮತ ಎಣಿಕೆ ನಡೆಯಲಿದೆ.ಕರ್ನಾಟಕ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲೇ ಬಿಹಾರ, ಗುಜರಾತ್​, ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕದಲ್ಲಿ ಎಲ್ಲ ಉಪಚುನಾವಣೆಗಳಲ್ಲಿ ಚುನಾವಣೆ ಇದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16 ಕ್ಕೆ ಕೊನೆಗೊಳ್ಳಲಿದೆ. ಅದಕ್ಕೂ ಮುನ್ನ ಹೊಸ ಸರ್ಕಾರ ರಚನೆ ಆಗಲಿದೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯು ಏಪ್ರಿಲ್ 11 ರಿಂದ ಏಳು ಹಂತಗಳಲ್ಲಿ ನಡೆದಿತ್ತು. ಮೇ 23 ರಂದು ಮತ ಎಣಿಕೆ ಮಾಡಲಾಗಿತ್ತು.
Last Updated : Mar 16, 2024, 4:58 PM IST

ABOUT THE AUTHOR

...view details