ಕರ್ನಾಟಕ

karnataka

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಗುದ್ದಿ ಬೈಕ್​ಗೆ ಡಿಕ್ಕಿ ಹೊಡೆದ ಬೊಲೆರೊ: ಚಾಲಕನಿಗೆ ಥಳಿತ

By ETV Bharat Karnataka Team

Published : Feb 23, 2024, 1:20 PM IST

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಬೈಕ್​ಗೆ ಡಿಕ್ಕಿ ಹೊಡೆದ ಬೊಲೆರೊ: ಚಾಕಲನಿಗೆ ಥಳಿತ

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ಡಿವೈಡರ್​ಗೆ ಗುದ್ದಿ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ನಗರದ ನೆಹರು ಕ್ರೀಡಾಂಗಣದ ಎದುರು ಗುರುವಾರ ರಾತ್ರಿ ನಡೆದಿದೆ. 

ಸರ್.ಎಂ. ವಿಶ್ವಶ್ವೇರಯ್ಯ ರಸ್ತೆ ಶಿವಮೂರ್ತಿ ವೃತ್ತದಿಂದ ಮಹಾವೀರ ವೃತ್ತದ ಕಡೆ ಬೊಲೆರೊ ವಾಹನ ಹೊರಟಿತ್ತು. ಅತೀ ವೇಗವಾಗಿ ಸಾಗುತ್ತಿದ್ದ ಕಾರಣ ಬೊಲೆರೊ ಡಿವೈಡರ್​ಗೆ ಡಿಕ್ಕಿ ಹೊಡೆದು, ಹಾರಿ ಪಕ್ಕದ ರಸ್ತೆಯಲ್ಲಿ ಬೈಕ್​ನಲ್ಲಿ ಸಾಗುತ್ತಿದ್ದ ಮಂಜುನಾಥ್ ಎಂಬುವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಮಂಜುನಾಥ್​ ಅವರು ಗಾಯಗೊಂಡಿದ್ದಾರೆ. ಗಾಯಾಳು ಮಂಜುನಾಥ್ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬೊಲೆರೊ ವಾಹನ, ಬೈಕ್ ಸವಾರನಿಗಷ್ಟೇ ಅಲ್ಲದೆ, ನಂತರ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದೆ. ಇದರಿಂದ ವಿದ್ಯುತ್ ಕಂಬ ಬೀಳುವಂತಾಗಿದೆ. ಅಲ್ಲದೆ ಟ್ರಾಫಿಕ್ ಪೊಲೀಸರು ಅಳವಡಿಸಿದ್ದ ನ್ಯೂ ಪಾರ್ಕಿಂಗ್ ಬೋರ್ಡ್​ಗೂ ಡಿಕ್ಕಿ ಹೊಡೆದು ಬೀಳಿಸಿದೆ. ನವೀನ್ ಹಾಗೂ ಯಶವಂತ್ ಎಂಬ ಇಬ್ಬರು ಪ್ರಯಾಣಿಸುತ್ತಿದ್ದು, ಇವರು ಆರ್​ಓಬಿ ಸೇತುವೆ ಕಾಮಗಾರಿ ನಡೆಸುವವರು ಎಂದು ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಇಬ್ಬರಿಗೂ ಥಳಿಸಿದ್ದಾರೆ.

ಈ ವೇಳೆ ಸ್ಥಳಕ್ಕಾಗಮಿಸಿದ ಜಯನಗರ ಪೊಲೀಸರು ಜನರ ಕೈಯಿಂದ ಅವರನ್ನು ಬಿಡಿಸಿ, ಠಾಣೆಗೆ ಕರೆದೊಯ್ದಿದ್ದಾರೆ. ಈ ಕುರಿತು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ನೋಡಿ: ಭೀಕರ ಅಪಘಾತದಲ್ಲಿ ಯುವ ಶಾಸಕಿ ಲಾಸ್ಯ ನಂದಿತಾ ಸಾವು: ಸಿಎಂ, ಬಿಆರ್‌ಎಸ್ ನಾಯಕರು ಸೇರಿ ಹಲವರಿಂದ ಸಂತಾಪ

ABOUT THE AUTHOR

...view details