ಕರ್ನಾಟಕ

karnataka

ಹಾವೇರಿ: ಮನೆಯಿಂದಲೇ ವೋಟ್ ಹಾಕಿದ ಹಿರಿಯರು, ದಿವ್ಯಾಂಗರು - Voting From Home

By ETV Bharat Karnataka Team

Published : Apr 28, 2024, 10:38 AM IST

Updated : Apr 28, 2024, 12:44 PM IST

ಲೋಕಸಭೆ ಚುನಾವಣೆಗೆ ಹಾವೇರಿ ಜಿಲ್ಲೆಯ ವಿವಿಧೆಡೆ ಹಿರಿಯರು, ದಿವ್ಯಾಂಗರು ಮನೆಯಿಂದಲೇ ಮತದಾನ ಮಾಡುತ್ತಿದ್ದಾರೆ.

_thumbnail_16x9_AM
_thumbnail_16x9_AM

ಮನೆಯಿಂದಲೇ ವೋಟ್ ಹಾಕಿದ ಹಿರಿಯರು

ಹಾವೇರಿ:ಹಾವೇರಿ ಲೋಕಸಭೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯರು ಮತ್ತು ದಿವ್ಯಾಂಗರು ಶನಿವಾರದಿಂದ ಮನೆಯಿಂದಲೇ ವೋಟ್ ಮಾಡುತ್ತಿದ್ದಾರೆ. ಏಪ್ರಿಲ್​ 27ರಿಂದ 29ರವರೆಗೆ ವೋಟಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಹಿರಿಯ ಮತದಾರರ ಮನೆಗಳಿಗೆ ತೆರಳಿದ ಚುನಾವಣಾಧಿಕಾರಿಗಳು ಮತದಾನ ಮಾಡಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಮನೆಯಿಂದ ಅಂಚೆ ಮತದಾನ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾನಗಲ್​, ಹಾವೇರಿ, ಬ್ಯಾಡಗಿ, ಹಿರೇಕೆರೂರು ಹಾಗೂ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮನೆಯಿಂದ ಮತದಾನ ನಡೆಯುತ್ತಿದೆ. ಬ್ಯಾಡಗಿ ಪಟ್ಟಣದ ಶಿಕ್ಷಕರ ಕಾಲೊನಿಯ ನಿವಾಸಿ ಶತಾಯುಷಿ 106 ವರ್ಷದ ಶ್ರೀಮತಿ ಖಾದರಬಿ ಪಠಾಣ ಅವರು ಮನೆಯಿಂದಲೇ ಮತದಾನ ಮಾಡಿದರು.

ಚುನಾವಣಾ ಕರ್ತವ್ಯಕ್ಕೆ ನೇಮಿಸಿದ ಸೆಕ್ಟರ್ ಅಧಿಕಾರಿಯನ್ನೊಳಗೊಂಡ ತಂಡ ಮನೆ-ಮನೆಗೆ ಭೇಟಿ ನೀಡುತ್ತಿದ್ದು, ಯಾವುದೇ ಲೋಪವಿಲ್ಲದೆ ಅಂಚೆ ಮತಪೆಟ್ಟಿಗೆಯಲ್ಲಿ ಮತವನ್ನು ಭದ್ರವಾಗಿಸುತ್ತಿದ್ದಾರೆ. ಮತದಾನದ ಗೌಪ್ಯತೆಯನ್ನೂ ಕಾಪಾಡಿಕೊಳ್ಳಲಾಗುತ್ತಿದೆ. ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜಿಲ್ಲಾ ಪಂಚಾಯತ್​ ಸಿಇಒ ಅಕ್ಷಯ ಶ್ರೀಧರ್​ ತಿಳಿಸಿದರು.

ಈ ನಡುವೆ ಕೆಲವು ಮನೆಗಳಿಗೆ ಹಾವೇರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತೆರಳಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಹಾವೇರಿ ನಗರದ 92 ವರ್ಷದ ಸರಸ್ವತಿ ಜಿನದತ್ತ ಬೋಗಾರ ಎಂಬವರು ಮನೆಯಲ್ಲಿ ಮತದಾನ ಮಾಡಿದರು. "ಚುನಾವಣಾ ಆಯೋಗ ಈ ರೀತಿ ಮನೆಯಲ್ಲೇ ಮತದಾನ ಏರ್ಪಡಿಸಿದ್ದು, ನಮ್ಮಂತಹ ಹಿರಿಜೀವಗಳಿಗೆ ಸಾಕಷ್ಟು ಸಂತಸ ತಂದಿದೆ. ಎಲ್ಲರೂ ಮತದಾನ ಮಾಡಬೇಕು" ಎಂದು ಮನವಿ ಮಾಡಿದರು.

ಗದಗ ಜಿಲ್ಲೆಯ ಗದಗ, ಶಿರಹಟ್ಟಿ ಹಾಗೂ ರೋಣ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಏ.28ರವರೆಗೆ ಮನೆಯಿಂದ ಮತದಾನ ನಡೆಯಲಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 26 ಮತ್ತು ಏ.27 ರಂದು ಮನೆಯಿಂದ ಮತದಾನ ನಡೆದಿದೆ.

ಹಾನಗಲ್​ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು 285 ಹಾಗೂ 123 ದಿವ್ಯಾಂಗರು ಸೇರಿ 408 ಮತದಾರರಿದ್ದಾರೆ. ಹಾವೇರಿ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು 162 ಹಾಗೂ ದಿವ್ಯಾಂಗರು ಸೇರಿ 211 ಮತದಾರರಿದ್ದಾರೆ. ಬ್ಯಾಡಗಿ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು 115 ಹಾಗೂ 87 ದಿವ್ಯಾಂಗರು ಸೇರಿ 202 ಮತದಾರಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು 212 ಹಾಗೂ 116 ದಿವ್ಯಾಂಗರು ಸೇರಿ 328 ಮತದಾರರಿದ್ದಾರೆ. ರಾಣೇಬೆನ್ನೂರು ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು 60 ಹಾಗೂ 48 ದಿವ್ಯಾಂಗರು ಸೇರಿ 108 ಮತದಾರರಿದ್ದಾರೆ.

ಇದನ್ನೂ ಓದಿ:ಇಂದು ದಾವಣಗೆರೆಯಲ್ಲಿ ಪ್ರಧಾನಿ ಮೋದಿ ಮತ ಪ್ರಚಾರ - Modi Rally In Davanagere

Last Updated : Apr 28, 2024, 12:44 PM IST

ABOUT THE AUTHOR

...view details