ಕರ್ನಾಟಕ

karnataka

'ಕಮಲ' ಬಿಟ್ಟು 'ಕೈ' ಹಿಡಿದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ - Vivek Hebbar

By ETV Bharat Karnataka Team

Published : Apr 11, 2024, 10:40 PM IST

Updated : Apr 11, 2024, 11:00 PM IST

ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರ ಪುತ್ರ ವಿವೇಕ್ ಹೆಬ್ಬಾರ್ ಇಂದು ಕಾಂಗ್ರೆಸ್ ಪಕ್ಷ​ ಸೇರಿದ್ದಾರೆ.

vivek-hebbar
ವಿವೇಕ್ ಹೆಬ್ಬಾರ್

ವಿವೇಕ್ ಹೆಬ್ಬಾರ್

ಶಿರಸಿ(ಉತ್ತರ ಕನ್ನಡ): ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿಯ ನಡುವೆ ಅವರ ಪುತ್ರ ವಿವೇಕ್ ಹೆಬ್ಬಾರ್ ಹಾಗು ಬೆಂಬಲಿಗರು ಇಂದು ಕಾಂಗ್ರೆಸ್ ಸೇರಿದರು.

ಬಿಜೆಪಿ ಪರ ಪ್ರಚಾರಕ್ಕಿಳಿಯದೇ ಹೆಬ್ಬಾರ್ ಕಾಂಗ್ರೆಸ್ ನಾಯಕರ ಜತೆ ಗುರುತಿಸಿಕೊಂಡರೆ, ಇವರ ಬೆಂಬಲಿಗರು ಹಾಗೂ ಪುತ್ರ ವಿವೇಕ್ ಹೆಬ್ಬಾರ್ ಇಂದು ಬನವಾಸಿಯಲ್ಲಿ ನೂರಾರು ಕಾರ್ಯಕರ್ತರು, ಮುಖಂಡರೊಂದಿಗೆ ಅಧಿಕೃತವಾಗಿ ಕೈ ಪಕ್ಷ ಸೇರುವ ಮೂಲಕ ಬಿಜೆಪಿಗೆ ಟಕ್ಕರ್ ಕೊಟ್ಟರು.

ಬಿಜೆಪಿ ನಾಯಕರ ತಾರತಮ್ಯ ನೀತಿ, ತಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ನೀಡದೇ ಇರುವುದಕ್ಕೆ ಕಾರ್ಯಕರ್ತರಿಗೆ ನ್ಯಾಯ ಕೊಡಿಸುವುದಕ್ಕಾಗಿ ಮನೆ ಬಿಟ್ಟು ಹಳೆಯ ಮನೆಗೆ ಬಂದಿರುವುದಾಗಿ ವಿವೇಕ್ ಹೆಬ್ಬಾರ್ ಹೇಳಿದ್ದಾರೆ. ಇನ್ನೊಂದೆಡೆ, ಶಿವರಾಮ್ ಹೆಬ್ಬಾರ್ ತಟಸ್ಥರಾಗಿದ್ದಾರೆ.

ಇನ್ನೊಂದೆಡೆ, ಸಂಸದ ಅನಂತಕುಮಾರ್ ಬಣ ಸಹ ಬಿಜೆಪಿ ಅಭ್ಯರ್ಥಿ ವಿರುದ್ಧ ತೊಡೆ ತಟ್ಟಿರುವುದು ಕಾಗೇರಿಗೆ ಹಿನ್ನಡೆ ಆಗುತ್ತಿದೆ.

ವಿವೇಕ್​ ಹೆಬ್ಬಾರ್​ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ, "ಬಿಜೆಪಿ ಮನೆ ದಿನದಿಂದ ದಿನಕ್ಕೆ ಖಾಲಿ ಆಗುತ್ತಿದೆ. ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದನ್ನು ನೋಡಿದ್ರೆ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಸ್ಪಷ್ಟ" ಎಂದರು.

ಶಿವರಾಮ್ ಹೆಬ್ಬಾರ್ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬಂದ್ರೆ ನಮ್ಮ ಸ್ವಾಗತವಿದೆ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಶಿವರಾಂ ಹೆಬ್ಬಾರ್ ಕೂಡಾ ಕಾಂಗ್ರೆಸ್​ಗೆ ಸೇರ್ಪಡೆ ಆಗುತ್ತಾರೆ ಅನ್ನೋ ಸುಳಿವು ನೀಡಿದರು.

ಇದನ್ನೂ ಓದಿ:ಶಾಸಕ ಹೆಬ್ಬಾರ್ ಕಾಂಗ್ರೆಸ್​ಗೆ ಬಂದರೆ ಸ್ವಾಗತ: ಸಿಎಂ ಸಿದ್ಧರಾಮಯ್ಯ

Last Updated : Apr 11, 2024, 11:00 PM IST

ABOUT THE AUTHOR

...view details