ಕರ್ನಾಟಕ

karnataka

ಕಾರವಾರ: ಗಾಂಜಾ ಮತ್ತಿನಲ್ಲಿ ಮಹಿಳಾ ಪೊಲೀಸರ ಮೇಲೆ ಹಲ್ಲೆ, ಇಬ್ಬರು ಯುವತಿಯರ ಬಂಧನ

By ETV Bharat Karnataka Team

Published : Feb 18, 2024, 4:30 PM IST

ಗೋಕರ್ಣ ನೊಡಲು ಬಂದ ಇಬ್ಬರು ಯುವತಿಯರು ಗಾಂಜಾ ಸೇವನೆ ಮಾಡಿ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗೋಕರ್ಣ ಪೊಲೀಸ್ ಠಾಣೆ
ಗೋಕರ್ಣ ಪೊಲೀಸ್ ಠಾಣೆ

ಕಾರವಾರ (ಉತ್ತರ ಕನ್ನಡ) : ಪ್ರವಾಸಕ್ಕೆಂದು ಬಂದ ಇಬ್ಬರು ಯುವತಿಯರು ಗಾಂಜಾ ಮತ್ತಿನಲ್ಲಿ ಮಹಿಳಾ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾರ್ಖಂಡ್​ ಹಾಗೂ ಒಡಿಶಾ ಮೂಲದ ಇಬ್ಬರು ಯುವತಿಯರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು. ಈ ವೇಳೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಪಾದಚಾರಿಗೆ ಗುದ್ದಿ ಮುಂದೆ ತೆರಳಿದ್ದಾರೆ. ಅಷ್ಟೇ ಅಲ್ಲದೆ, ಸ್ವಲ್ಪ ದೂರದಲ್ಲಿ ತೆರಳುತ್ತಿದ್ದ ಮಹಿಳಾ ಪೊಲೀಸರಿಗೂ ಗುದ್ದಿದ್ದಾರೆ. ಯುವತಿಯರು ಗಾಂಜಾ ಮತ್ತಿನಲ್ಲಿದ್ದಂತೆ ಪೊಲೀಸರಿಗೆ ಕಂಡು ಬಂದಿದೆ. ಹೀಗಾಗಿ ಘಟನೆ ಬಗ್ಗೆ ಪ್ರಶ್ನಿಸಿದ ಮಹಿಳಾ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಯುವತಿಯರು ಬಳಿಕ ಹಲ್ಲೆ ಮಾಡಿ ಗಲಾಟೆ ನಡೆಸಿದ್ದಾರೆ.

ತಕ್ಷಣ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ಮಹಿಳಾ ಪೊಲೀಸರು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಯುವತಿಯರು ಗಾಂಜಾ ಸೇವೆನೆ ಮಾಡಿರುವುದು ದೃಢಪಟ್ಟ ಹಿನ್ನೆಲೆ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿದೇಶಿ ಪ್ರಜೆಯಿಂದ ಏರ್ಪೋಟ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ :ಫೆ. 14 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗೈದು, ಪುಂಡಾಟಿಕೆ ಪ್ರದರ್ಶಿಸಿದ ವಿದೇಶಿ ಪ್ರಜೆಯನ್ನು ಬಿಐಎಎಲ್ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಜಿಂಬಾಬ್ವೆ ಮೂಲದ ರುಕುಡ್ಸೋ ಚಿರಿಕುಮಾರಾರ ಎಂದು ಗುರುತಿಸಲಾಗಿತ್ತು.

ಪ್ರವಾಸಿಗರ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಈತ ಬುಧವಾರ ಬೆಳಗ್ಗಿನ ಜಾವ 4:30ಕ್ಕೆ ದೆಹಲಿಗೆ ಪ್ರಯಾಣಿಸಲು ಏರ್ಪೋಟ್​ಗೆ ಬಂದಿದ್ದನು. ಈ ವೇಳೆ ಎಲೆಕ್ಟ್ರಾನಿಕ್ ವಸ್ತುಗಳಿದ್ದ ಬ್ಯಾಗನ್ನು ತಪಾಸಣೆ ಮಾಡುವ ವೇಳೆ ಮಹಿಳಾ ಪ್ರಯಾಣಿಕರ ತಪಾಸಣೆಗಾಗಿ ಇರಿಸಲಾಗಿದ್ದ ಬೂತ್​ ಪ್ರವೇಶಿಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದನು. ಬಳಿಕ ಭದ್ರತಾ ಸಿಬ್ಬಂದಿಯ ನಿಯಂತ್ರಣದಲ್ಲಿರುವ ಪ್ರದೇಶ ಪ್ರವೇಶಿಸಲು ಯತ್ನಿಸಿದ್ದನು. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಸಿಐಎಸ್ಎಫ್ ಸಿಬ್ಬಂದಿ ಬಿಐಎಎಲ್ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

ಬಿಐಎಎಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದರು.

ಇದನ್ನೂ ಓದಿ :ಬೆಂಗಳೂರು ಏರ್ಪೋರ್ಟ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ: ಜಿಂಬಾಬ್ವೆ ಪ್ರಜೆ ಬಂಧನ

ABOUT THE AUTHOR

...view details