ಕರ್ನಾಟಕ

karnataka

ಮಂಡ್ಯ: ಐಸ್ ಕ್ರೀಮ್ ತಿಂದ ಬಳಿಕ ಅವಳಿ ಮಕ್ಕಳ ಸಾವು, ತಾಯಿ ಆಸ್ಪತ್ರೆಗೆ ದಾಖಲು - Twins Died

By ETV Bharat Karnataka Team

Published : Apr 18, 2024, 12:26 PM IST

ಐಸ್ ಕ್ರೀಮ್ ಸೇವಿಸಿದ ಬಳಿಕ ಅಸ್ವಸ್ಥಗೊಂಡು ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

twins-died
ಅವಳಿ ಮಕ್ಕಳು ಸಾವು

ಮಂಡ್ಯ:ಐಸ್ ಕ್ರೀಮ್ ಸೇವಿಸಿದ ಬಳಿಕ ಅಸ್ವಸ್ಥಗೊಂಡು, ಒಂದೂವರೆ ವರ್ಷದ ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿದ್ದು, ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಬೆಟ್ಟಹಳ್ಳಿ ಗ್ರಾಮದ ಅವಳಿ ಮಕ್ಕಳಾದ ಪೂಜಾ ಮತ್ತು ಪ್ರಸನ್ನ ಮೃತಪಟ್ಟವರು. ಬುಧವಾರ ತಾಯಿ ಮತ್ತು ಮಕ್ಕಳು ಗ್ರಾಮದಲ್ಲಿ ಮಾರಾಟಕ್ಕೆ ಬಂದವರಿಂದ ಐಸ್ ಕ್ರೀಮ್ ಖರೀದಿಸಿ ಸೇವಿಸಿದ್ದರು. ಆ ಬಳಿಕ ಮೂವರೂ ಅನಾರೋಗ್ಯದಿಂದ ಬಳಲಿದ್ದಾರೆ. ಬಳಿಕ ಮನೆಯಲ್ಲಿಯೇ ಮಕ್ಕಳು ಸಾವನ್ನಪ್ಪಿದ್ದರೆ, ಅಸ್ವಸ್ಥಗೊಂಡ ತಾಯಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮೃತ ಮಕ್ಕಳ ಶವಗಳನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಕ್ಕಳ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿವೆ. ಈ ಬಗ್ಗೆ ಅರಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಐಸ್ ಕ್ರೀಮ್ ಮಾರಾಟ ಮಾಡಲು ಬಂದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಕಡಬ: ಎದೆಹಾಲು ಉಣಿಸುವ ವೇಳೆ ಮಗು ಆಕಸ್ಮಿಕ ಸಾವು: ಮಾನಸಿಕವಾಗಿ ನೊಂದ ತಾಯಿ ಆತ್ಮಹತ್ಯೆ - Mother Suicide

ABOUT THE AUTHOR

...view details