ಕರ್ನಾಟಕ

karnataka

ನಡು ರಸ್ತೆಯಲ್ಲಿ ನೆಟ್ಟಿದ್ದ ಕಂಬಕ್ಕೆ ಟಿಟಿ ವಾಹನ ಡಿಕ್ಕಿ: ಬೈಕ್​ ಸವಾರ ಸಾವು

By ETV Bharat Karnataka Team

Published : Feb 10, 2024, 2:49 PM IST

Updated : Feb 10, 2024, 3:04 PM IST

ದಾವಣಗೆರೆ ನಗರದಲ್ಲಿ ಕಬ್ಬಿಣದ ಕಂಬಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರನ ಮೇಲೆ ಕಂಬ ಬಿದ್ದು ಮೃತಪಟ್ಟಿದ್ದಾನೆ.

ಕಂಬಕ್ಕೆ ಟಿಟಿ ವಾಹನ ಡಿಕ್ಕಿ
ಕಂಬಕ್ಕೆ ಟಿಟಿ ವಾಹನ ಡಿಕ್ಕಿ

ರಸ್ತೆ ಮಧ್ಯೆ ನೆಟ್ಟಿದ್ದ ಕಂಬಕ್ಕೆ ಟಿಟಿ ವಾಹನ ಡಿಕ್ಕಿ

ದಾವಣಗೆರೆ :ನಡುರಸ್ತೆಯಲ್ಲಿ ನೆಟ್ಟಿದ್ದ ಕಬ್ಬಿಣದ ಕಂಬಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದು, ಎದುರು ಬರುತ್ತಿದ್ದ ಬೈಕ್ ಸವಾರನ ಮೇಲೆ ಕಂಬ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಕಂಬ ಮುರಿದುಬಿದ್ದ ಪರಿಣಾಮ ಬೈಕ್​ ಸವಾರ ಸಾವನ್ನಪ್ಪಿದ್ದಾನೆ.

ನಗರದ ನಿಟ್ಟುವಳ್ಳಿಯಲ್ಲಿ 60 ಅಡಿ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ಈ ಅಪಘಾತ ಇತ್ತೀಚೆಗೆ ನಡೆದಿದೆ. ನಿಟ್ಟುವಳ್ಳಿಯ ಭಗೀರಥ ಸರ್ಕಲ್ ನಿವಾಸಿ ಗಣೇಶ್ (40) ಮೃತ ಬೈಕ್​ ಸವಾರ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಜನನಿಬಿಡ ಪ್ರದೇಶವಾದ ನಡು ರಸ್ತೆಯಲ್ಲಿ ಇದ್ದ ಕಂಬಕ್ಕೆ ರಭಸವಾಗಿ ಬಂದು ಟಿಟಿ ವಾಹನ ಡಿಕ್ಕಿ ಹೊಡೆದಿದ್ದಕ್ಕೆ ಈ ಅವಘಡ ನಡೆದಿದೆ.

ಹೀಗಾಗಿ ಕಬ್ಬಿಣದ ಕಂಬ ಎದುರು ಬರುತ್ತಿದ್ದ ಬೈಕ್​ ಸವಾರನ ಮೇಲೆ ಬಿದ್ದಿದೆ. ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಸವಾರನಿಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ತಕ್ಷಣ ಗಾಯಾಳವನ್ನು ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ. ಇನ್ನು ನಡು ರಸ್ತೆಯಲ್ಲಿ‌ ಕಂಬ ನೆಟ್ಟವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪಿಕಪ್​ ವಾಹನ - ವಿಡಿಯೋ

Last Updated :Feb 10, 2024, 3:04 PM IST

ABOUT THE AUTHOR

...view details